

ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಬಾಕಿ ಇರುವಾಗಲೇ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಕೂಗು ಜೋರಾಗಿದೆ. ಕಾಂಗ್ರೆಸ್ ಇಂದು ಸಂಜೆ ಕರೆದಿರುವ ಶಾಸಕರ ಡಿಢೀರ್ ಸಭೆಯಿಂದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೊಸ ಸಮಸ್ಯೆಯನ್ನು ಎದರಿಸುವಂತಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರ ನಡುವೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿರುವ ಅಮರಿಂದರ್ ಸಿಂಗ್, ಇಂತಹ ಅವಮಾನಗಳು ಸಾಕು, ಮೂರನೇ ಬಾರಿ ಹೀಗಾಗುತ್ತಿದೆ. ಈ ರೀತಿಯ ಅವಮಾನಗಳಿಂದ ಪಕ್ಷದಲ್ಲಿ ಉಳಿಯುವುದನ್ನು ಮುಂದುವರಿಸಲಾಗದು ಎಂದಿದ್ದಾರೆ.
ಕಳೆದ ಕೆಲವು ತಿಂಗಳಿಂದ ಅಮರಿಂದರ್ ಸಿಂಗ್ ಅಲಿಯಾಸ್ ಕ್ಯಾಪ್ಟನ್ಗೆ ಹಲವಾರು ಅಡೆತಡೆಗಳು ಎದುರಾಗುತ್ತಿವೆ. ಒಂದು ವರ್ಗದ ಶಾಸಕರು ಅವರ ವಿರುದ್ಧದೇ ಬಂಡೆದಿದ್ದು, ಹೊಸ ನಾಯಕತ್ವಕ್ಕೆ ಆಗ್ರಹಿಸುತ್ತಿದ್ದಾರೆ.
ಪಂಜಾಬ್ ಕಾಂಗ್ರೆಸ್ ವಲಯದಲ್ಲಿ ಮೂವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಅವರುಗಳೆಂದರೆ, ಒಂದು ಸುನೀಲ್ ಜಾಖರ್, ಪಂಜಾಬ್ನ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಪ್ರತಾಪ್ ಸಿಂಗ್ ಬಾಜ್ವಾ ಮತ್ತು ಬಿಯಾಂತ್ ಸಿಂಗ್ ಮೊಮ್ಮಗ ಸಂಸದ ರವನೀತ್ ಸಿಂಗ್ ಬಿಟ್ಟು ಹೆಸರು ಕೇಳಿಬರುತ್ತಿವೆ. (ಏಜೆನ್ಸೀಸ್)