ಬಟ್ಟೆ ಪ್ರಿಯರಿಗೆ ಗುಡ್​ ನ್ಯೂಸ್​: ಸದ್ಯಕ್ಕಿಲ್ಲ ಜವಳಿ ಮೇಲಿನ ಜಿಎಸ್​ಟಿ ಹೆಚ್ಚಳ

Dress
Published on

ನವದೆಹಲಿ: ಜವಳಿ ಮೇಲಿನ ಜಿಎಸ್​ಟಿ ಹೆಚ್ಚಳವನ್ನು ಮುಂದೂಡಲು ಇಂದು (ಡಿ.31) ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಈ ಮೂಲಕ ಬಟ್ಟೆ ಖರೀದಿದಾರರಿಗೆ ಕೇಂದ್ರ ಸರ್ಕಾರ ರಿಲೀಫ್​ ನೀಡಿದೆ.

ಶೇ. 5 ರಷ್ಟಿದ್ದ ಜವಳಿ ಮೇಲಿನ ಜಿಎಸ್​ಟಿಯನ್ನು 12ಕ್ಕೇರಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ನೇತೃತ್ವದ ಜಿಎಸ್​ಟಿ ಮಂಡಳಿ ಈ ಹಿಂದೆ ನಿರ್ಧರಿಸಿತ್ತು. 2022ರ ಜನವರಿ 1ರಿಂದ ಇದು ಜಾರಿಗೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ನಿರ್ಧಾರದಿಂದ ಹಿಂದೆ ಸರಿದಿರುವ ಜಿಎಸ್​ಟಿ ಮಂಡಳಿ ಮುಂದಿನ ಸಭೆಯಲ್ಲಿ ಈ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಲಿದೆ.

ಜವಳಿ ಮೇಲಿನ ಜಿಎಸ್​ಟಿ ಹೆಚ್ಚಳಕ್ಕೆ ಅನೇಕ ರಾಜ್ಯಗಳು ವಿರೋಧಿಸಿದ್ದವು. ರಾಜ್ಯಗಳ ಈ ಪ್ರಸ್ತಾವನೆಯನ್ನು ಮತ್ತೊಮ್ಮೆ ಪರಿಗಣಿಸಿರುವ ಜಿಎಸ್​ಟಿ ಮಂಡಳಿ ಹೊಸ ಪ್ರಸ್ತಾವನೆಯನ್ನು ತರಲಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 46ನೇ ಸಭೆಯು ಇಂದು (ಡಿ.31) ದೆಹಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಎಸ್‌ಟಿ ಕೌನ್ಸಿಲ್ ಸದಸ್ಯರು ಇತರ ವಿಷಯಗಳ ಜತೆಗೆ ಜಿಎಸ್‌ಟಿ ದರ ತರ್ಕಬದ್ಧಗೊಳಿಸುವಿಕೆಯ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net