ಬಾಂಬ್​ ಸ್ಫೋಟಕ್ಕೆ ರೈಲು ಹಳಿ ಇಬ್ಭಾಗ: ಕಿಡಿಗೇಡಿಗಳ ಕೃತ್ಯಕ್ಕೆ ಹಳಿತಪ್ಪಿದ ರೈಲು ಇಂಜಿನ್

Railway Track
Published on

ನವದೆಹಲಿ: ಬಾಂಬ್​ ಸ್ಫೋಟದಿಂದ ರೈಲು ಹಳಿ ಇಬ್ಭಾಗವಾಗಿ ಡೀಸೆಲ್​ ಚಾಲಿತ ರೈಲು ಇಂಜಿನ್​ ಹಳಿತಪ್ಪಿದ ಘಟನೆ ಜಾರ್ಖಂಡ್​ನ ಧನ್​ಬಾದ್​ ವಿಭಾಗದಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಧನ್​ಬಾದ್​ ವಿಭಾಗದ ಗರ್ವಾ ರಸ್ತೆ ಮತ್ತು ಬಾರ್ಕನಾ ನಡುವೆ ಬಾಂಬ್​ ಸ್ಫೋಟ ಸಂಭವಿಸಿ ರೈಲು ಹಳಿ ಇಬ್ಭಾಗವಾಗಿದೆ. ಕಿಡಿಗೇಡಿಗಳಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಬಾಂಬ್​ ಸ್ಫೋಟಕ್ಕೆ ರೈಲು ಹಳಿ ಇಬ್ಭಾಗ ಆಗಿದ್ದರಿಂದ ಡೀಸೆಲ್​ ಚಾಲಿತ ಇಂಜಿನ್​ ಹಳಿತಪ್ಪಿದೆ. ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಒಂದು ಮೂಲಗಳ ಪ್ರಕಾರ ಈ ಕೃತ್ಯವನ್ನು ನಕ್ಸಲರು ಮಾಡಿದ್ದಾರೆಂದು ಹೇಳಲಾಗಿದೆ. ರೈಲು ಹಳಿಯು ನಕ್ಸಲ್​ ಪೀಡಿತ ಪ್ರದೇಶದಲ್ಲಿ ಬರುವುದರಿಂದ ಈ ಅನುಮಾನ ಮೂಡಿದೆ. ಸದ್ಯ ಘಟನಾ ಸ್ಥಳಕ್ಕೆ ಧಾವಿಸಿರುವ ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಹಳಿ ದುರಸ್ಥಿ ಕೆಲಸ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net