ಎರಡು ತಲೆ, ಮೂರು ಕೈಯುಳ್ಳ ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ..!

Twins
Published on

ಕೇಂದ್ರಪರ: ಮಹಿಳೆಯೊಬ್ಬರು ಎರಡು ತಲೆ, ಮೂರು ಕೈ ಮತ್ತು ಎರಡು ಕಾಲು ಇರುವ ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ಒಡಿಶಾದ ಕೇಂದ್ರಪರದಲ್ಲಿ ನಡೆದಿದೆ.

ಸಯಾಮಿ ಅವಳಿ ಹೆಣ್ಣು ಮಕ್ಕಳಾಗಿದ್ದು, ಕೇಂದ್ರಪರ ಪಟ್ಟಣದ ಖಾಸಗಿ ನರ್ಸಿಂಗ್​ ಹೋಮ್​ ಒಂದರಲ್ಲಿ ಜನಿಸಿವೆ. ಹುಟ್ಟಿದ ಬೆನ್ನಲ್ಲೇ ಮಕ್ಕಳ ಆರೋಗ್ಯದ ಪರಿಸ್ಥಿತಿ ಹದಗೆಟ್ಟಿದ್ದರಿಂದ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಕೇಂದ್ರಪರ ಆಸ್ಪತ್ರೆಯ ಮಕ್ಕಳ ಸಲಹೆಗಾರ ಡಾ. ಡೆಬಸಿಶ್​ ಸಾಹು, ಸಯಾಮಿ ಅವಳಿಗಳು ಅಪರೂಪದ ಜನ್ಮಜಾತ ವೈಪರೀತ್ಯವಾಗಿದೆ ಮತ್ತು ಎದೆ ಮತ್ತು ಹೊಟ್ಟೆಯ ಭಾಗದಲ್ಲಿ ಒಂದನೊಂದು ಸೇರಿಕೊಂಡಿದ್ದು, ಸದ್ಯ ಮಕ್ಕಳ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ಮಕ್ಕಳ ಅಲ್ಟ್ರಾಸೌಂಡ್​ ಪರೀಕ್ಷೆಯ ಬಳಿಕ ಅಸಹಜತೆ ಹುಟ್ಟಿನ ವಿವರಗಳನ್ನು ತಿಳಿಯಲಾಗುವುದು ಎಂದು ವೈದ್ಯರು ಹೇಳಿದರು. ಸದ್ಯ ಮಕ್ಕಳ ಮೇಲೆ ನಿಗಾ ಇರಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net