

ರಾಣೆಬೆನ್ನೂರ: ವಕ್ಫ ಆಸ್ತಿ ವಿಚಾರಕ್ಕೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಆರ್. ಅಶೋಕ ಎದುರು ತಾಲೂಕಿನ ಚಳಗೇರಿ ಗ್ರಾಮದ ನಂಜಮ್ಮ ಗ್ಯಾನಗೌಡರ ಎಂಬುವರು ಕಣ್ಣೀರು ಹಾಕಿದರು.
ನನ್ನ ಮುತ್ತಾತನ ಕಾಲದಿಂದ ನಾವು ಇಲ್ಲೇ ಇದ್ದೇವೆ. ಈಗ ನೋಟಿಸ್ ಕೊಟ್ಟಿದ್ದಾರೆ. ನಮ್ಮ ಆಸ್ತಿ ನಮಗೆ ಉಳಿಸಿಕೊಡಿ ಎಂದು ಬೇಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ, ನಿಮಗೆ ನ್ಯಾಯ ಕೊಡಿಸುವ ಸಲುವಾಗಿ ಸದನದಲ್ಲಿ ಚಚಿರ್ಸುತ್ತೇನೆ ಎಂದು ಭರವಸೆ ನೀಡಿದರು.