ಮೂಡಾ ಹಗರಣ: ನಿಮ್ಮಿಂದ ಕನ್ನಡಿಗರು ನಿರೀಕ್ಷಿಸುತ್ತಿರುವ ಉತ್ತರಗಳಿವು: ಸಿಎಂಗೆ ಆರ್​. ಅಶೋಕ್ ಟಾಂಗ್

ವಿಜಯವಾಣಿ - 2024-08-04T164556.708
Published on

ಬೆಂಗಳೂರು: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರೇ ನಿಮ್ಮಿಂದ ಕನ್ನಡಿಗರು ನಿರೀಕ್ಷಿಸುತ್ತಿರುವ ಉತ್ತರಗಳು ಹೀಗಿವೆ. ಮುಖ್ಯಮಂತ್ರಿ ಪತ್ನಿ ಮೂಡಾದಿಂದ ಪಡೆದಿರುವ ಸೈಟುಗಳ ಅವರ ತವರು ಮನೆಯಿಂದ ಪಡೆದ ಜಮೀನಿನ ಬದಲಾಗಿ ಪಡೆದಿರುವ ನಿವೇಶನಗಳು ಎಂದು ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಳ್ಳುತ್ತಾರೆ. ಆದರೆ ಅವರ ಬಾಮೈದ ಬಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಅವರು ಆ ಭೂಮಿ ಖರೀದಿಸಿರುವ ಬಗ್ಗೆಯೇ ಸಾಕಷ್ಟು ಅನುಮಾನಗಳಿವೆ ಎಂದರು.

1.) ತಮ್ಮ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರು ಸದರಿ ಜಮೀನು ಖರೀದಿಸಿದ್ದು ದೇವರಾಜ ಅವರಿಂದ ಎಂದು ಹೇಳುತ್ತಾರೆ. ಆದರೆ ಮಲ್ಲಿಕಾರ್ಜುನ ಸ್ವಾಮಿ ಭೂಮಿ ಖರೀದಿಸಿದಾಗ ದೇವರಾಜ ಅವರ ಹೆಸರಿನಲ್ಲಿ encumebrance certificate ಇರಲಿಲ್ಲ ಎನ್ನುವುದು ಸತ್ಯವಲ್ಲವೇ? ಎಂದು ಪ್ರಶ್ನಿಸಿದರು.

2.) 1968ರಲ್ಲೇ ದೇವರಾಜ ಅವರು ಆ ಜಮೀನನ್ನು ಮೈಲಾರಯ್ಯ ಮತ್ತು ಕುಟುಂಬದವರಿಗೆ ಮಾರಿದ್ದು, ನಂತರ ನಕಲಿ ದಾಖಲೆ ಸೃಷ್ಟಿಸಿ, ತಮ್ಮ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಮಾರಿದ್ದು ಸತ್ಯವಲ್ಲವೇ ಸಿಎಂ ಸಿದ್ದರಾಮಯ್ಯನವರೇ? ಎಂದರು.

3.) ಜಮೀನಿನ ಮಾಲೀಕತ್ವದ ಬಗ್ಗೆ ಇಷ್ಟು ಗೊಂದಲವಿದ್ದರೂ ತಮ್ಮ ಬಾಮೈದ ಜಮೀನು ಖರೀದಿಸಿದ್ದು ಯಾಕೆ? ಜಮೀನು ಖರೀದಿಸುವಾಗ ಸ್ಥಳವನ್ನು ಪರಿಶೀಲನೆ ಮಾಡದೆಯೇ ಖರೀದಿ ಮಾಡಿದ್ದರಾ? ಅಥವಾ ಆ ವೇಳೆಗೆ ಅಲ್ಲಿ ಆಗಾಗಲೇ ಬಡಾವಣೆ ಅಭಿವೃದ್ಧಿ ಆಗಿತ್ತು ಅಂತ ಜಮೀನು ನೋಡದೆಯೇ ಖರೀದಿ ಮಾಡಿದ್ರಾ? ಎಂದು ಕೇಳಿದರು.

4.) 2003ರಲ್ಲೆ ಮೂಡಾ ನಿವೇಶನ ಮಾಡಿ ಕ್ರಯಕ್ಕೆ ಹಂಚಿಕೆ ಮಾಡಿದ ಮೇಲೆ 2005ರಲ್ಲಿ ಅದೇ ಜಾಗವನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಲು ವರದಿ ನೀಡಲು ಹೇಗೆ ಸಾಧ್ಯ?

5.) 2010ರಲ್ಲಿ ಅರಿಶಿನ-ಕುಂಕುಮ ರೂಪದಲ್ಲಿ ತಮ್ಮ ಪತ್ನಿ ಪಾರ್ವತಿ ಅವರಿಗೆ ಜಮೀನು ಸಿಕ್ಕಾಗ ಅವರು ಸ್ಥಳಕ್ಕೆ ಭೇಟಿ ನೀಡಿರಲಿಲ್ಲವೇ? ಎಂದು ಸಿಎಂಗೆ ನೇರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net