ಆನಂದ ಸಂಕೇಶ್ವರ ಹುಟ್ಟುಹಬ್ಬಕ್ಕೆ ವಿಜಯಾನಂದ‌ ಚಿತ್ರತಂಡದ ಗಿಫ್ಟ್: ಮೋಷನ್​ ಪೋಸ್ಟರ್ ರಿಲೀಸ್​

Vijayananda
Published on

ಬೆಂಗಳೂರು: ಸಾರಿಗೆ ಹಾಗೂ ಪತ್ರಿಕೋದ್ಯಮ ರಂಗದಲ್ಲಿ ಜಾಗತಿಕ ಮನ್ನಣೆಗೆ ಪಾತ್ರರಾಗಿರುವ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾದ ಮತ್ತೊಂದು ಮಹತ್ವದ ಪಾತ್ರ ರಿವೀಲ್ ಆಗಿದೆ.

ವಿಜಯ ಸಂಕೇಶ್ವರ ಅವರ ಪುತ್ರ ಆನಂದ‌ ಸಂಕೇಶ್ವರ ಅವರ ಪಾತ್ರದ ಮೋಷನ್ ಪೋಸ್ಟರ್ ಇಂದು ರಿಲೀಸ್ ಆಗಿದೆ. ಆನಂದ ಸಂಕೇಶ್ವರ ಅವರ ಹುಟ್ಟುಹಬ್ಬದ ಪ್ರಯುಕ್ತ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಆನಂದ ಸಂಕೇಶ್ವರ ಅವರ ಪಾತ್ರವನ್ನು ಯುವ ನಟ ಭರತ್ ಬೋಪಣ್ಣ ಅವರು ನಿರ್ವಹಿಸುತ್ತಿದ್ದಾರೆ.

ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ‘ವಿಜಯಾನಂದ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಿಶಿಕಾ ಶರ್ಮ ಈ ಚಿತ್ರವನ್ನು ನಿರ್ದೇಶಿಸಿದರೆ, ವಿಜಯ ಸಂಕೇಶ್ವರ ಅವರ ಪಾತ್ರವನ್ನು ನಟ ನಿಹಾಲ್ ರಜಪೂತ್ ನಿಭಾಯಿಸಲಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ಕಲಾವಿದರ ಆಯ್ಕೆ ಸೇರಿ ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಚಿತ್ರತಂಡ, ಇದೀಗ ಚಿತ್ರೀಕರಣ ಆರಂಭಿಸಿದೆ. ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿತ್ತು.

ಹುಬ್ಬಳ್ಳಿ, ಧಾರವಾಡ, ಶಿಗ್ಗಾಂವಿ, ಬೆಂಗಳೂರು, ಹೈದರಾಬಾದ್​ಗಳಲ್ಲೂ ಚಿತ್ರೀಕರಣ ಮಾಡುವುದು ತಂಡದ ಪ್ಲಾನ್ ಆಗಿದೆ. ಅಷ್ಟೇ ಅಲ್ಲದೆ, ಹುಬ್ಬಳ್ಳಿ ಮತ್ತು ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ 70ರ ದಶಕದ ಹುಬ್ಬಳ್ಳಿಯ ಮಾರುಕಟ್ಟೆಯನ್ನು ಹೋಲುವ ಸೆಟ್ ಸೇರಿ 10ರಿಂದ 15 ಬೃಹತ್ ಸೆಟ್‌ಗಳನ್ನು ನಿರ್ವಿುಸಲಾಗಿದೆ. ಈಗಾಗಲೇ ಶೂಟಿಂಗ್ ಶುರುವಾಗಿದ್ದು, ಜನವರಿವರೆಗೂ ಚಿತ್ರೀಕರಣ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net