

ಭೋಪಾಲ್: ಯಾರಿಗೆ ಯಾರ ಮೇಲೆ ಮನಸ್ಸಾಗುತ್ತದೆ ಎಂಬುದನ್ನು ಕೆಲವೊಮ್ಮೆ ಯಾರಿಗೂ ಊಹೆ ಮಾಡಲು ಆಗುವುದಿಲ್ಲ. ಅಂಥದ್ದೇ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ಜರುಗಿದ್ದು, ಅಕ್ಕನ ಗಂಡನ ವ್ಯಾಮೋಹಕ್ಕೆ ಒಳಗಾದ ಯುವತಿ, ತನ್ನ ಅಕ್ಕನ ಜತೆ ಹೇಳಿದ ಮಾತುಗಳು ಎಂಥವರನ್ನು ಒಮ್ಮೆ ಹುಬ್ಬೇರಿಸದೇ ಇರದು.
ವಿವರಣೆಗೆ ಬರುವುದಾದರೆ, ಕುಟುಂಬವೊಂದು ಮಧ್ಯಪ್ರದೇಶದ ಥಾರ್ ಜಿಲ್ಲೆಯ ವಾಸಿಸುತ್ತಿದೆ. ಕುಟುಂಬದ ಠಾಕ್ರೆ ಎಂಬುವರು ಒಂದು ವರ್ಷದ ಹಿಂದೆ ನಿಕಟ ಸಂಬಂಧಿ ಯುವತಿಯನ್ನು ಸರಳವಾಗಿ ವಿವಾಹ ಆಗಿದ್ದರು. ಎರಡು ಕುಟುಂಬಗಳ ಮನೆ ಹತ್ತಿರದಲ್ಲೇ ಇದ್ದಿದ್ದರಿಂದ ಯುವತಿಯ ಸಹೋದರಿ ಆಗಾಗಾ ಮನೆಗೆ ಬಂದು ಹೋಗುತ್ತಿದ್ದಳು.
ಹೀಗೆ ಹೋಗಿ-ಬರುವಾಗ ತಂಗಿಯ ಮನಸ್ಸು ಭಾವನ ಕಡೆ ತಿರುಗುತ್ತದೆ. ಭಾವನನ್ನು ಬಯಸಿದ ತಂಗಿ ಅಕ್ಕನ ಜತೆ ನೇರವಾಗಿ ಮಾತಿಗೆ ಇಳಿಯುತ್ತಾಳೆ. ಭಾವ ತಂಬಾ ಚೆನ್ನಾಗಿದ್ದಾರೆ. ನಾನು ಅವರನ್ನು ಮದುವೆ ಆಗುವುದಿಲ್ಲ. ಆದರೆ, ಅವರೊಂದಿಗೆ ಸೆಕ್ಸ್ ಮಾಡಲು ಬಯಸುತ್ತೇನೆ. ನಾನು ತುಂಬಾ ಇಷ್ಟಪಟ್ಟಿದ್ದೀನಿ. ನಾನು ಮದುವೆ ಆಗುವವರೆಗೂ ಭಾವನೊಂದಿಗೆ ಸಂಪರ್ಕದಲ್ಲಿರುತ್ತೇನೆ ಎಂದು ಹೇಳಲು ಅಕ್ಕನಿಗೆ ಒಂದು ಕ್ಷಣ ಶಾಕ್ ಆಗಿದ್ದಾಳೆ.
ಭಾವನನ್ನು ಭೇಟಿಯಾಗಲು ಅನುಮತಿ ಕೊಡು ಎನ್ನುತ್ತಿದ್ದಂತೆ ತಂಗಿಯ ಮೇಲೆ ಆಕ್ರೋಶಗೊಂಡು ಕೂಗಾಡಿದ ಅಕ್ಕ ತಂಗಿಗೆ ಹಿಡಿ ಶಾಪ ಹಾಕುತ್ತಾಳೆ. ಇದಾದ ಬಳಿಕ ಪಂಚಾಯಿತಿ ಸೇರಿದ ಹಿರಿಯರು ನೀನು ಮಾಡುತ್ತಿರುವುದು ತಪ್ಪು ಎಂದು ಮನವರಿಕೆ ಮಾಡುತ್ತಾರೆ. ಆದರೂ ಭಾವನ ತುಂಬಾ ಮೋಹ ಹೊಂದಿದ್ದ ನಾದಿನಿ ಆತನ ಮನವೊಲಿಸಿ ಮನೆ ಬಿಟ್ಟು ಹೋಗುತ್ತಾರೆ. ಎರಡು ದಿನ ಚೆನ್ನಾಗಿ ಎಂಜಾಯ್ ಮಾಡಿಕೊಂಡು ಮನೆಗೆ ಮರಳುತ್ತಾರೆ.
ಇದಾದ ಬಳಿಕ ಹಿರಿಯರು ಮತ್ತೆ ಪಂಚಾಯಿತಿ ಸೇರುತ್ತಾರೆ. ನಾದಿನಿಯನ್ನು ಮದುವೆ ಆಗುವುದಾಗಿ ಠಾಕ್ರೆ ಹೇಳುತ್ತಾನೆ. ಇದಾದ ಬಳಿಕ ಪ್ರಕರಣ ಪೊಲೀಸರ ಗಮನಕ್ಕೆ ಬಂದಾಗ ಮೂವರಿಗೂ ಆಪ್ತ ಸಮಾಲೋಚನೆ ಕೊಡಿಸಲಾಗಿದೆ. ಸದ್ಯ ಈ ಪ್ರಕರಣ ಮಧ್ಯಪ್ರದೇಶದ ಗ್ರಾಮದಲ್ಲಿ ಹಾಟ್ ಟಾಪಿಕ್ ಆಗಿದ್ದು, ಬಹಳ ಚರ್ಚೆಯಾಗುತ್ತಿದೆ. (ಏಜೆನ್ಸೀಸ್)