

ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ನಟಿ ಪ್ರಣಿತಾ ಪೋಸ್ಟ್ ಮಾಡಿರುವುದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.
ಆಫ್ಘನ್ ಘಟನೆಯನ್ನು ಮರೆಮಾಚಿ ತಮ್ಮನ್ನ ಸಮರ್ಥಿಸಿಕೊಳ್ಳಲು ಕೆಲವರು ಹಿಂದು ಟೆರರ್ (ಹಿಂದು ಉಗ್ರವಾದಿ) ಪದ ಬಳಸುತ್ತಿದ್ದಾರೆ. ಭಾರತೀಯರೇ ಎಚ್ಚರವಾಗಿರಿ... ಶತ್ರುಗಳು ನಮ್ಮ ಗಡಿಯಾಚೆಗೆ ಇರುವುದಿಲ್ಲ. ಅವರು ನಿಮ್ಮ ಸುತ್ತಲೂ ಇದ್ದಾರೆ ಎಂದು ಪ್ರಣಿತಾ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಹಿಂದುತ್ವವನ್ನು ತಾಲಿಬಾನಿ ಉಗ್ರತ್ವಕ್ಕೆ ಹೋಲಿಕೆ ಮಾಡಿ ಮಾತನಾಡಿರುವ ಬೆನ್ನಲ್ಲೇ ಪ್ರಣಿತಾ ಟ್ವೀಟ್ ಮಾಡಿರುವುದು ಕುತೂಹಲ ಮೂಡಿಸಿದೆ. ಅಲ್ಲದೆ, ನಟಿ ಸ್ವರಾ ಭಾಸ್ಕರ್ ಬಂಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಗಳು ಕೇಳಿಬರುತ್ತಿವೆ.
ಸ್ವರಾ ಭಾಸ್ಕರ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ಸದ್ಯ ಟ್ವಿಟರ್ನಲ್ಲಿ ಹಿಂದುತ್ವ ಪದ ಟ್ರೆಂಡ್ ಆಗಿದ್ದು, ಭಾರಿ ಚರ್ಚೆಯನ್ನು ಸೃಷ್ಟಿಸಿದೆ. ಆದರೆ, ಪ್ರಣಿತಾ ಯಾರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.