ನಾಳೆಯಿಂದ ಕನ್ನಡದಲ್ಲಿ ಕುರಾನ್ ಪ್ರವಚನ

mohmed sharief
ಮಹಮದ್ ಶರೀಫ್
Published on

ಸಾಗರ: ನಗರದ ಗಾಂಧಿ ಮೈದಾನದಲ್ಲಿ ಜ.18 ಮತ್ತು 19ರಂದು ರಾತ್ರಿ 7ರಿಂದ 9ರವರೆಗೆ ಜಮಾತೆ ಇಸ್ಲಾಮಿ ಹಿಂದ್ ಮತ್ತು ಕುರಾನ್ ಪ್ರವಚನ ಸಮಿತಿಯಿಂದ 6ನೆ ಬಾರಿಗೆ ಕನ್ನಡದಲ್ಲಿ ಕುರಾನ್ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮಹಮದ್ ಶರೀಫ್ ಹೇಳಿದರು.

ಮೊದಲ ದಿನ ಮಾನವನ ಘನತೆ, 19ರಂದು ಜೀವನದ ಉದ್ದೇಶ ಕುರಿತು ಪ್ರವಚನ ನಡೆಯಲಿದೆ. 18ರಂದು ಶಾಸಕ ಗೋಪಾಲಕೃಷ್ಣ ಬೇಳೂರು ಕಾರ್ಯಕ್ರಮ ಉದ್ಘಾಸುವರು. ದುರುದುಂಡೇಶ್ವರ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂತ ಜೋಸೆಫ್ ಚರ್ಚ್ ಧರ್ಮಗುರು ವಿನುತ್ ಬಾಲುಕುಮಾರ್ ಭಾಗವಹಿಸುವರು. ಲಾಲ್ ಹುಸೈನ್ ಕಂದಗಲ್ ಇಳಕಲ್ ಉಪನ್ಯಾಸ ನೀಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

19ರಂದು ಹೊಸನಗರ ಸಾರಗನಜಡ್ಡು ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಅವಧೂತರು ಸಾನ್ನಿಧ್ಯ ವಹಿಸುವರು. ಸಾಗರ ಸಮರ್ಪಣಾ ದೇವಾಲಯದ ಧರ್ಮಗುರು ಸ್ಯಾಮ್ಸನ್ ದೀಪಕ್ ಬಲ್ಕಿ, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ ಮತ್ತಿತರರು ಭಾಗವಹಿಸುವರು. ಲಾಲ್ ಹುಸೈನ್ ಕಂದಗಲ್ ಇಳಕಲ್ ಉಪನ್ಯಾಸ ನೀಡುವರು. ವಿವಿಧ ಸಂಘಟನೆಯ ಪ್ರಮುಖರು ಭಾಗವಹಿಸುವರು ಎಂದರು.

ಸಮಿತಿ ಸಂಚಾಲಕ ಸೈಯದ್ ಅನ್ವರುಲ್ಲಾ ಹಕ್, ಸೈಯದ್ ಸುಹೈಲ್, ನಜೀರ್ ಅಹ್ಮದ್, ಅನೀಸ್ ರಹಮಾನ್, ಜಮೀರ್ ಆಲಿಖಾನ್, ಅಹ್ಮತುಲ್ಲಾ ಖಾನ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net