ಯೂನಿಯನ್ ಬ್ಯಾಂಕ್ ವತಿಯಿಂದ ರಸಪ್ರಶ್ನೆ ಸ್ಪರ್ಧೆ: ವಿಜೇತರಿಗೆ ೧ ಲಕ್ಷ ರೂ.ನಗದು ಬಹುಮಾನ

Bank (2)
Published on

ಬೆಂಗಳೂರು: ಕರ್ನಾಟಕದ ೩ನೇ ದೊಡ್ಡ ಬ್ಯಾಂಕ್ ಆದ ಯೂನಿಯನ್ ಬ್ಯಾಂಕ್ ಆ್ ಇಂಡಿಯಾ ‘‘ರಾಷ್ಟ್ರ ಮಟ್ಟದ ಸಾಮಾನ್ಯ ಜಾಗೃತಿ ರಸಪ್ರಶ್ನೆ ಸ್ಪರ್ಧೆ-ಯು ಜೀನಿಯಸ್ ೨೦೨೩’ ಅನ್ನು ಆಯೋಜಿಸಿದೆ.
ಯುವ ಪೀಳಿಗೆಯಲ್ಲಿ ಕಲಿಕೆಯನ್ನು ಉತ್ತೇಜಿಸುವ ಸಲುವಾಗಿ ಈ ಸ್ಪರ್ಧೆಯನ್ನು ಆಯೋಜಿಸಿದೆ.
ಯುವ ಪೀಳಿಗೆ.
ಈ ಸ್ಪರ್ಧೆಯನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ೩೨ ನಗರಗಳಲ್ಲಿ ಆಯೋಜಿಸಲಾಗಿದೆ, ಅಲ್ಲಿ ಸಿಟಿ ಸುತ್ತುಗಳನ್ನು ನಡೆಸಲಾಗುತ್ತದೆ. ರಾಷ್ಟ್ರೀಯ ಸೆಮಿಫೈನಲ್ ಮತ್ತು ಫೈನಲ್ ಅನ್ನು ಮುಂಬೈನಲ್ಲಿ ಆಯೋಜಿಸಲಾಗುತ್ತದೆ ಅಲ್ಲಿ ನಗರದ ವಿಜೇತರು ಪ್ರತಿನಿಧಿಸುತ್ತಾರೆ. ವಿಜೇತ ಶಾಲಾ ತಂಡವು ನಗದು ಬಹುಮಾನ ಮತ್ತು ಟ್ರೋಫಿಯನ್ನು ಪಡೆಯುತ್ತದೆ.
ಆಕರ್ಷಕ ಬಹುಮಾನ:
ಅಂತಿಮ ವಿಜೇತ ತಂಡಕ್ಕೆ ೧ ಲಕ್ಷ ರೂ.ನಗದು ಬಹುಮಾನ, ಮೊದಲ ರನ್ನರ್ ಅಪ್ ತಂಡಕ್ಕೆ ೫೦ ಸಾವಿರ ರೂ.ನಗದು ಬಹುಮಾನ, ಎರಡನೇ ರನ್ನರ್-ಅಪ್ ತಂಡಕ್ಕೆ ೨೫ ಸಾವಿರ ರೂ.ನಗದು ಬಹುಮಾನ ಹಾಗೂ ಎಲ್ಲರಿಗೂ ಟ್ರೋಫಿಗಳು ಮತ್ತು ಪ್ರಮಾಣಪತ್ರಗಳು ನೀಡಲಾಗುತ್ತದೆ.
ಬೆಂಗಳೂರು ವಲಯದ ಅಡಿಯಲ್ಲಿ ನಡೆಯಲಿರುವ ನಗರ ಮಟ್ಟದ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಆ.೨೪ ರಂದು ಆಯೋಜಿಸಲಾಗಿದೆ. ಬೆಳಗಾವಿಯಲ್ಲಿ ಆ. ೨೭ ಮತ್ತು ಮೈಸೂರಿನಲ್ಲಿ ಸೆ.೪ ರಂದು ನಡೆಯಲಿದೆ. ೮ ನೇ ತರಗತಿಯಿಂದ ೧೨ ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳು ರಸಪ್ರಶ್ನೆ ಸ್ಫರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳು ಶಾಲೆಗಳ ಮೂಲಕವೇ ನಾಮನಿರ್ದೇಶನ ಹೊಂದಿರಬೇಕು.
ಸ್ಪರ್ಧೆ ಏಲ್ಲಿ ನಡೆಯಲಿದೆ?
ಬೆಂಗಳೂರು ನಗರ ರಸಪ್ರಶ್ನೆ ಸುತ್ತನ್ನು ಆ.೨೪ ರಂದು ಜ್ಞಾನ ಜ್ಯೋತಿ ಆಡಿಟೋರಿಯಂ, ಅರಮನೆ ರಸ್ತೆ, ಅಂಬೇಡ್ಕರ್ ವೀಧಿ, ಗಾಂಧಿನಗರ, ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು/ಶಾಲೆಯು ಆ.೨೨ ಕ್ಕೂ ಮುಂಚೆ ಹತ್ತಿರದ ಯೂನಿಯನ್ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ಶಾಲೆಯಿಂದ ನಾಮನಿರ್ದೇಶಿತ ವಿದ್ಯಾರ್ಥಿಗಳು ಆ.೨೪ ರಂದು ಬೆಳಿಗ್ಗೆ ೮:೩೦ ಕ್ಕೆ ರಸಪ್ರಶ್ನೆ ಸ್ಥಳದಲ್ಲಿ ವರದಿ ಮಾಡಿಕೊಳ್ಳಬೇಕಿದೆ. ನೋಂದಣಿ ಮತ್ತು ರಸಪ್ರಶ್ನೆ ಭಾಗವಹಿಸುವ ವಿದ್ಯಾರ್ಥಿಗಳು ಶಾಲಾ ಮತ್ತು ಕಾಲೇಜು ಐಡಿ ಕಾರ್ಡ್ ಜತೆಗೆ ಬರಬೇಕಿದೆ. ಸಿಟಿ ರೌಂಡ್ ವಿಜೇತ ತಂಡದ ಫಲಿತಾಂಶಗಳನ್ನು ಅದೇ ದಿನ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net