

ಕಮಲನಗರ: ಕರೊನಾ ಸೋಂಕು ನಿಯಂತ್ರಣ ಕುರಿತು ಜಾಗೃತಿ ಮೂಡಿಸುತ್ತಿದ್ದ ಸಿಪಿಐ ಮೇಲೆ ಹೋಮ್ ಕ್ವಾರಂಟೈನ್ನಲ್ಲಿರಬೇಕಾದ ವ್ಯಕ್ತಿ ಹಲ್ಲೆ ಮಾಡಿದ ಅನಾಗರಿಕ ಘಟನೆ ಭಾನುವಾರ ರಾತ್ರಿ ಕಲಬುರಗಿಯ ಬೆಳಕುಣಿ (ಭೋ) ಗ್ರಾಮದಲ್ಲಿ ನಡೆದಿದೆ.
ಕಮಲನಗರ ವೃತ್ತದ ಸಿಪಿಐ ಪಾಲಾಕ್ಷಯ್ಯ ಹಿರೇಮಠ ಮೇಲೆ ರಾಹುಲ್ ಡೊಂಗರೆ (32), ದೌಲತರಾವ್ ಡೊಂಗರೆ (60) ಹಲ್ಲೆ ನಡೆಸಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಗಾಯಗೊಂಡ ಹಿರೇಮಠ ಅವರನ್ನು ಬೀದರ್ನ ಬ್ರಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ.