

ಹಾವೇರಿ: ತಾಲೂಕಿನ ದೇವಗಿರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಬಾಲಕರ ವಸತಿ ನಿಲಯದಲ್ಲಿ ಊಟದ ಮೆನ್ಯೂ ಚಾರ್ಟ್ ಬದಲಾವಣೆ ಮಾಡಿರುವುದನ್ನು ಖಂಡಿಸಿ ಹಾಗೂ ಉತ್ತಮ ಗುಣಮಟ್ಟದ ಆಹಾರ ಸೇರಿ ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಭಾರತ ವಿದ್ಯಾಥಿರ್ ಫೆಡರೇಷನ್ (ಎಸ್ಎಫ್ಐ) ವತಿಯಿಂದ ಭಾನುವಾರ ವಿದ್ಯಾಥಿರ್ಗಳು ವಸತಿ ನಿಲಯದ ಮುಂದೆ ಉಪವಾಸ ಧರಣಿ ನಡೆಸಿದರು.
ಸಂಟನೆಯ ಅಧ್ಯಕ್ಷ ರೇವಣಸಿದ್ಧಾರಾದ್ಯ ಎನ್.ಎಸ್. ಮಾತನಾಡಿ, ವಸತಿ ನಿಲಯದಲ್ಲಿ ಸರಿಯಾಗಿ ಉತ್ತಮ ಗುಣಮಟ್ಟದ ಆಹಾರ ನೀಡುತ್ತಿಲ್ಲ, ಕೊಳೆತ ತರಕಾರಿಗಳನ್ನು ನೀಡುತ್ತಾರೆ. ಅನುದಾನ ನೆಪದಿಂದ ಊಟಕ್ಕೆ ಕಡಿತ ಮಾಡಿದ್ದಾರೆ. ಪುಸ್ತಕಗಳು, ಆಟದ ಸಾಮಗ್ರಿಗಳನ್ನು ಮೂರು ವರ್ಷ ಕಳೆದರು ನೀಡಿಲ್ಲ. ಮೆನ್ಯೂ ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ. ಗ್ರಂಥಾಲಯವನ್ನು ಬಳಕೆಗೆ ನೀಡುತ್ತಿಲ್ಲ. ಇಲಾಖೆಯ ಜಿಲ್ಲಾಧಿಕಾರಿ ಹಾಗೂ ತಾಲೂಕು ಅಧಿಕಾರಿಗಳು ವಸತಿ ನಿಲಯಕ್ಕೆ ಬರುವುದಿಲ್ಲ ನಮ್ಮ ಸಮಸ್ಯೆಗಳನ್ನು ಆಲಿಸುವುದಿಲ್ಲ ಎಂದು ದೂರಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ವಿದ್ಯಾಥಿರ್ಗಳಿಗೆ ಗುಣಮಟ್ಟದ ಆಹಾರ ನೀಡಬೇಕು. ಶೌಚಗೃಹ ಸರಿಪಡಿಸಿ ಸುಚಿತ್ವ ಕಾಪಾಡಬೇಕು. ಗ್ರಂಥಾಲಯ ನಿರ್ವಹಣೆ ಮಾಡಬೇಕು. ಪುಸ್ತಕಗಳನ್ನು ವಿತರಣೆ ಮಾಡಬೇಕು. ಪ್ರಥಮ ಚಿಕಿತ್ಸೆ ಸಾಮಗ್ರಿಗಳನ್ನು ಕೊಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಮಾರುತಿ ರೆಡ್ಡಿ, ಮನೋಜ ಪಂಚಗಟ್ಟಿಮಠ, ಯಶವಂತ ಪಿ.ಕೆ., ದರ್ಶನ ಯು.ಎಂ., ರಮೇಶ ಎಲ್., ರೇವಣಸಿದ್ದ ಕೆ.ಆರ್., ಚೇತನ ಕೆ., ಶಿವಕುಮಾರ, ಸಾಗರ ಎಸ್., ದರ್ಶನ ಪಿ.ಎಚ್., ಅಭಿಷೇಕ ಎನ್., ಶ್ರೀಧರ ಯು ಮತ್ತಿತರರು ಪಾಲ್ಗೊಂಡಿದ್ದರು.