ಸವಾಲು ಎದುರಿಸಲು ಗುಣತ್ಮಕ ಶಿಕ್ಷಣ ಅಗತ್ಯವಿದೆ

Qualitative education is needed to meet the challenge
ಜಮಖಂಡಿ ನಗರದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ 76ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿದರು.
Published on

ಜಮಖಂಡಿ: ಸರ್ವರಿಗೂ ಸಮಾನ ನ್ಯಾಯ ಒದಗಿಸಲು ಸಂವಿಧಾನ ಕಾರಣವಾಗಿದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

ನಗರದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ 76ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುಣಾತ್ಮಕ ಶಿಕ್ಷಣದಿಂದ ಮಾತ್ರ ಕಠಿಣ ಸವಾಲುಗಳನ್ನು ಎದುರಿಸಲು ಸಾಧ್ಯ. ಭಯೋತ್ಪಾದನೆ, ಭ್ರಷ್ಟಾಚಾರ ಕಿತ್ತೆಸೆದು ಕಾಯಕ ಜೀವನ ನಡೆಸುವುದೇ ದೇಶದ ಮೂಲ ಧ್ಯೇಯವಾಗಿದೆ.

ಜಮಖಂಡಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಲವಾರು ಯೋಜನೆ ರೂಪಿಸುವ ಯೋಚನೆ ಹೊಂದಲಾಗಿದೆ. ಗುಡಿ ಕೈಗಾರಿಕೆ ಪ್ರಾರಂಭಿಸಿ ನಿರುದ್ಯೋಗ ಸಮಸ್ಯೆ ನೀಗಿಸಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ 10 ಕೋಟಿ ಅನುದಾನ ಬಿಡುಗಡೆಯಾಗಿದ್ದು, ರಸ್ತೆ, ವಿದ್ಯುತ್, ನೀರು, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಜಂಭುಕೇಶ್ವರ ದೇವಸ್ಥಾನ ಜೀರ್ಣೋದ್ಧಾರ, ಬೈಪಾಸ್ ರಸ್ತೆ, ರಿಂಗ್ ರೋಡ ರಸ್ತೆ ಅಗಲಿಕರಣ ಕಾಮಗಾರಗಳಿಗೆ 65 ಕೋಟಿ ರೂ ಅನುದಾನ ಬೇಡಿಕೆ ಇಡಲಾಗಿದೆ. ಬಾಗಲಕೋಟೆ ವಿಶ್ವವಿದ್ಯಾಲಯದ ಕಟ್ಟಡ ಅಭಿವೃದ್ಧಿಗೆ 300ಎಕರೆ ಜಮೀನು ನೀಡುವಂತೆ ಸದನದಲ್ಲಿ ಗಮನ ಸೆಳೆಯಲಾಗಿದೆ.

ನಗರದ ಪ್ರಮುಖ ರಸ್ತೆ ದ್ವೀಪಥ ರಸ್ತೆ ನಿರ್ಮಾಣ ಕಾಮಗಾರಿ, ಸಾವಳಗಿ ಏತನೀರಾವರಿ ಯೋಜನೆಗೆ 10 ಕೋಟಿ ರೂ. ಅನುದಾನ, ಮರೆಗುದ್ದಿ ಯೋಜನೆಗೆ 216 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ. 1006 ಬಡ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ನೀಡುವ ಯೋಜನೆ ಹೊಂದಲಾಗಿದೆ ಎಂದರು.

ಎಸಿ ಶ್ವೇತಾ ಮೋಹನ ಬೀಡಿಕರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಶ್ರೀನಿಧಿ ಕೌಜಲಗಿ, ಕೃತಿಕಾ ಮಂಜರಗಿ ಮಾತನಾಡಿದರು.

ಪೊಲೀಸ್, ಗೃಹ ರಕ್ಷಕ ದಳ, ಎನ್‌ಸಿಸಿ, ಸ್ಕೌಟ್ಸ ಗೈಡ್ಸ, ಸೇವಾದಳ ತಂಡಗಳ ಪಥಸಂಚಲನ ಜರುಗಿತು. ಸಾವಳಗಿ ಎಂಪಿಎಸ್ ಶಾಲೆ ಹಾಗೂ ತುಂಗಳ ಶಾಲೆಯ ವಿದ್ಯಾರ್ಥಿಗಳಿಂದ ಮಲ್ಲಕಂಬ ಪ್ರದರ್ಶನ ಜರುಗಿತು. ಕೆಜಿಬಿವಿ ಶಾಲೆ, ಗಿರೀಶ ನಗರ ಶಾಲೆ, ವಿದ್ಯಾಭವನ, ಪಿಬಿ ಹೈಸ್ಕೂಲ್ ಶಾಲೆಯ ಮಕ್ಕಳಿಂದ ದೇಶಭಕ್ತಿ ಗೀತೆಗಳ ನೃತ್ಯ ಜರುಗಿದವು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ, ನಗರಸಭೆ ಉಪಾಧ್ಯಕ್ಷೆ ರೇಖಾ ಕಾಂಬಳೆ, ಡಿ.ವಾಯ್.ಎಸ್.ಪಿ ಶಾಂತವೀರ ಈ, ಪೌರಾಯುಕ್ತ ಜ್ಯೋತಿ ಗಿರೀಶ ಎಸ್, ತಾಪಂ ಇಓ ಸಂಜೀವ ಜುನ್ನೂರ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಎಸ್.ಆರ್. ಬಂಡಿವಡ್ಡರ, ನಗರಸಭೆ ಸದಸ್ಯರಾದ ದಾನೇಶ ಘಾಟಗೆ, ಕುಶಾಲ ವಾಗಮೋರೆ, ಪೂಜಾ ವಾಳ್ವೆಕರ್, ಸ್ವರೂಪ ಜಾಧವ, ಶ್ರೀಧರ ಕನ್ನೂರ, ರಾಜೇಸಾಬ ಕಡಕೋಳ ಮತ್ತಿತರರಿದ್ದರು. ಜಿ.ಜಿ.ಪ್ರೌಢ ಶಾಲೆ ವಿದ್ಯಾರ್ಥಿನಿಯರು ರೈತ ಗೀತೆ ಹಾಡಿದರು. ತಹಸೀಲಾರ್ ಸದಾಶಿವ ಮಕ್ಕೋಜಿ ಸ್ವಾಗತಿಸಿದರು.

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅವರಣದಲ್ಲಿ ಧ್ವಜಾರೋಹಣ ನಡೆಸಿ ನಂತರ ಬೆಳಗ್ಗೆನೆ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದಿರಿಸಿದ್ದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net