ವಾಹನ ಸವಾರರೇ ಎಚ್ಚರ..ಸ್ಕೂಟಿಯಲ್ಲಿ ಹೆಬ್ಬಾವು!

scooty
Published on

ಬೆಂಗಳೂರು: ಮಳೆಗಾಲ ಆರಂಭವಾಗಿದ್ದು, ವಿಷಕಾರಿ ಕ್ರಿಮಿ, ಹಾವುಗಳು ಹೊರಬರುತ್ತಿವೆ. ಭೂಮಿಯಲ್ಲಿ ಉಷ್ಣತೆ ಹೆಚ್ಚಾಗುವುದು ಮತ್ತು ಆಹಾರಕ್ಕಾಗಿ ಮಾನವ ವಾಸಸ್ಥಾನಗಳಿಗೆ ಅವು ಲಗ್ಗೆಯಿಡುತ್ತವೆ. ಕೆಲವೊಮ್ಮೆ ನಮ್ಮ ಮನೆಯ ಪೀಠೋಪಕರಣಗಳು, ಕಪಾಟುಗಳು ಮತ್ತು ಬಟ್ಟೆಗಳ ಮೇಲೆ ಹಾವುಗಳು ಹರಿದಾಡುತ್ತವೆ. ಕೆಲವೊಮ್ಮೆ ಮರಿ ಹಾವುಗಳು ಪಾದರಕ್ಷೆಯಲ್ಲಿ ಹರಿದಾಡುತ್ತಿರುವ ವಿಡಿಯೋಗಳು ವೈರಲ್ ಆಗಿರುವುದು ಗೊತ್ತೇ ಇದೆ. ಕೆಲವೊಮ್ಮೆ ಹೆಲ್ಮೆಟ್, ಬೈಕ್ ಚಕ್ರಗಳು ಮತ್ತು ಕಾರ್ ಟ್ರಂಕ್‌ಗಳಲ್ಲಿ ಕಾಣಿಸಿಕೊಂಡಿದ್ದ ಹಾವುಗಳ ವೀಡಿಯೊಗಳು ಈ ಹಿಂದೆ ವೈರಲ್ ಆಗಿದ್ದವು.

ಹಾಗಾಗಿ ಮಳೆಗಾಲದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ತಜ್ಞರು. ಯಾವುದೇ ಅಜಾಗರೂಕ ಜೀವಕ್ಕೆ ಅಪಾಯವಿದೆ ಎಂದು ಹೇಳಬಹುದು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಟ್ರೆಂಡ್ ಆಗಿದೆ.

ಹಾವುಗಳ ವೀಡಿಯೋ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತದೆ. ಇವುಗಳನ್ನು ವೀಕ್ಷಿಸಲು ನೆಟಿಜನ್‌ಗಳೂ ಆಸಕ್ತಿ ತೋರಿದ್ದಾರೆ. ಕೆಲವು ಭಯಾನಕವಾಗಿದ್ದರೆ ಇನ್ನು ಕೆಲವು ಅಚ್ಚರಿ ಮೂಡಿಸುತ್ತವೆ. ಇತ್ತೀಚಿಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೆಂಡಿಂಗ್ ಆಗಿದೆ. ದ್ವಿಚಕ್ರ ವಾಹನ ಸವಾರನೊಬ್ಬ ಸ್ಕೂಟಿಯಿಂದ ಬುಸ್​ಬುಸ್​ ಸದ್ದು ಕೇಳಿ ಅನುಮಾನ ಗೊಂಡು ತಕ್ಷಣ ಸ್ಕೂಟಿಯ ಸೀಟ್​ಅನ್ನು ಕೋಲಿನಿಂದ ತೆರೆದಾಗ ಪೆಟ್ರೋಲ್​ ಟ್ಯಾಂಕ್​ನ ಕ್ಯಾಪ್​ಗೆ ಸುತ್ತಿಕೊಂಡು ಹಾವು ಕುಳಿತಿತ್ತು.

ಇದರಿಂದ ಸವಾರ ಆಘಾತಕ್ಕೊಳಗಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ವಿವರಗಳಿಲ್ಲ. ಆದರೆ ನೆಟ್ಟಿಗರು ಎಚ್ಚರ ಅಗತ್ಯ ಎಂಬ ಕಾಮೆಂಟ್​ಗಳನ್ನು ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net