

ಶಿವಮೊಗ್ಗ: ತೀರ್ಥಹಳ್ಳಿ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಬಿ.ಸುಬ್ಬಣ್ಣ (59) ಅವರು ಗುರುವಾರ ಬೆಳಗಿನ ಜಾಗ ಗೋಪಾಳದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.
ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮೂಲತಃ ಸಾಗರ ತಾಲೂಕಿನ ಭೀಮನೇರಿ ಗ್ರಾಮದವರಾದ ಸುಬ್ಬಣ್ಣ ಅವರು ಶಿವಮೊಗ್ಗದ ಗೋಪಾಳದಲ್ಲಿ ನೆಲೆಸಿದ್ದರು.
ತೀರ್ಥಹಳ್ಳಿಯ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗುರುವಾರ ಸ್ವಗ್ರಾಮ ಭೀಮನೇರಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿತು.