ಪುತ್ತಿಗೆ ಶ್ರೀಗಳಿಗೆ ವಿದ್ಯಾರ್ಥಿಗಳಿಂದ 1 ಕೋಟಿ ರೂ. ಬೆಲೆಬಾಳುವ ವಾಹನ ಕೊಡುಗೆ

Published on

ಉಡುಪಿ: ಪುತ್ತಿಗೆ ಮಠದ ವಿದೇಶೀ ಶಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪುತ್ತಿಗೆ ವಿದ್ಯಾಪೀಠದ ಹಳೆವಿದ್ಯಾರ್ಥಿಗಳು ಷಷ್ಟ್ಯಬ್ಧಿ ಪ್ರಯುಕ್ತ ಸುಸಜ್ಜಿತ 1.25 ಕೋಟಿ ರೂಪಾಯಿ ವೆಚ್ಚದ ವಾಹನವನ್ನು ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳವರಿಗೆ ಗುರುವಾರ ಗುರುದಕ್ಷಿಣೆ ರೂಪದಲ್ಲಿ ಸಮರ್ಪಿಸಿದ್ದಾರೆ.

ಇದೇ ಸಂದರ್ಭದಲ್ಲಿ ಶ್ರೀ ಭೀಮನಕಟ್ಟೆ ಮಠಾಧೀಶರಾದ ಕೀರ್ತಿಶೇಷ ಶ್ರೀ ರಘುಮಾನ್ಯತೀರ್ಥರು ನಡೆಸಿದ್ದ ಮೂವತ್ತೆರಡು ಲಕ್ಷ ಲಕ್ಷ್ಮೀನರಸಿಂಹ ಮಂತ್ರಜಪ ಅಂಗವಾಗಿ ಹೋಮಗಳನ್ನು ಶ್ರೀಪುತ್ತಿಗೆ ನರಸಿಂಹದೇವರ ಸನ್ನಿಧಾನದಲ್ಲಿ ಅರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಹಳೆವಿದ್ಯಾರ್ಥಿಗಳ ಸೇವೆಯನ್ನು ಅಭಿನಂದಿಸಿದರು. "ಮುಂದಿನ ತಮ್ಮ ನಾಲ್ಕನೇ ಪರ್ಯಾಯದ ನಿಮಿತ್ತವಾಗಿ ನೀಡಿದಂತಹ ವಾಹನ ಶ್ರೀವಿಠ್ಠಲದೇವರ ರಥೋತ್ಸವದಂತೆ ದೇಶ ಸಂಚಾರ ನಡೆಸಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net