'ಪುಷ್ಪ 2' ರಿಲೀಸ್​ಗೂ ಮುನ್ನವೇ ಪಾರ್ಟ್​ 3 ಘೋಷಣೆ! ಖಚಿತ ಪಡಿಸಿದ ನಿರ್ಮಾಪಕ ರವಿಶಂಕರ್​ | Pushpa 3

pushpa 3
Published on

ಆಂಧ್ರಪ್ರದೇಶ: ಈ ವರ್ಷ ತೆರೆಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಟಾಲಿವುಡ್​ನ ಐಕಾನ್ ಸ್ಟಾರ್, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ (Allu Arjun)​ ಅಭಿನಯದ ‘ಪುಷ್ಪ 2’ (Pushpa 2) ಸಿನಿಮಾ ಸದ್ಯ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದ್ದು, ಬಿಡುಗಡೆಗೂ ಮುನ್ನವೇ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಈ ಹಿಂದೆ ಅಧಿಕೃತ ರಿಲೀಸ್​ ಯಾವಾಗ? ಎಂದು ಪ್ರಶ್ನಿಸಿದ್ದ ಸಿನಿಪ್ರಿಯರಿಗೆ ಡಿ.06 ಎಂದಿದ್ದ ಚಿತ್ರತಂಡ ಇದೀಗ ಮತ್ತೆ ಬಿಡುಗಡೆ ಡೇಟ್​ನಲ್ಲಿ ಬದಲಾವಣೆ ತಂದಿದ್ದು, ಡಿಸೆಂಬರ್​ 05ರಂದು ಪುಷ್ಪ 2 ತೆರೆಗೆ ಬರಲಿದೆ ಎಂದು ಖಚಿತ ಮಾಹಿತಿ ನೀಡಿದ್ದಾರೆ. ಇನ್ನು ಈ ಮಧ್ಯೆಯೇ ಚಿತ್ರದ ನಿರ್ಮಾಪಕರು ಶಾಕಿಂಗ್ ವಿಷಯವೊಂದನ್ನು (Pushpa 3) ಹಂಚಿಕೊಂಡಿದ್ದಾರೆ.

ಭಾಗ ಮೂರು ಬರುವುದು ಖಚಿತ

'ಪುಷ್ಪ ದಿ ರೂಲ್'​ ಮೊದಲ ಭಾಗ ಸಿನಿಪ್ರಿಯರಿಗೆ ಎಷ್ಟು ರೋಚಕವಾಗಿತ್ತೋ ಅದರಂತೆಯೇ ಎರಡನೇ ಭಾಗ ಕೂಡ ಇರಲಿದೆ. ಇನ್ನು ಕೆಲವೇ ತಿಂಗಳಲ್ಲಿ ತೆರೆಗೆ ಅಪ್ಪಳಿಸಲಿರುವ 'ಪುಷ್ಪ 2 ದಿ ರೈಸ್'​ ಚಿತ್ರದಲ್ಲಿ ಪಾರ್ಟ್​ 3ಗೆ ಬೇಕಾದ ಎಲ್ಲಾ ಗಟ್ಟಿ ಅಂಶಗಳಿವೆ. ಹೀಗಾಗಿ ಭಾಗ ಮೂರು ಬರುವುದು ಬಹುತೇಕ ಖಚಿತ. ಚಿತ್ರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಸದ್ಯದ ಮಟ್ಟಿಗೆ ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿದ ನಿರ್ಮಾಪಕರು ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.

ಡಿ.05ರಂದು ತೆರೆಗೆ

ಡಿಸೆಂಬರ್​ 05ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗಿರುವ ಪ್ಯಾನ್ ಇಂಡಿಯಾ 'ಪುಷ್ಪ 2' ಚಿತ್ರದ ಬಗ್ಗೆ ಸದ್ಯ ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಸಂತಸ ಹೆಚ್ಚಾಗಿದ್ದು, ಈ ಮಧ್ಯೆಯೇ ಚಿತ್ರದ ಮೂರನೇ ಭಾಗದ ಸುದ್ದಿ ಹೊರಬಿದ್ದಿರುವುದು ಈಗಿರುವ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net