

ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿರುವ ಸಿನಿಮಾ ‘ಪುಷ್ಪ-ದ ರೂಲ್’. ನಟ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರವು ದೇಶಾದ್ಯಂತ ನಿರೀಕ್ಷೆ ಹೆಚ್ಚಿಸಿದೆ. ‘ಪುಷ್ಪ: ದ ರೈಸ್’ ಚಿತ್ರದ ಸೀಕ್ವೆಲ್ ಇದಾಗಿದ್ದು, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಹಾದ್ ಾಸಿಲ್, ಡಾಲಿ ಧನಂಜಯ, ಶ್ರೀಲೀಲಾ ಸೇರಿ ದೊಡ್ಡ ಕಲಾ ಬಳಗವೇ ಇರಲಿದೆ. ಇತ್ತೀಚೆಗೆ ಬಿಹಾರದ ಪಟ್ನಾದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಟ್ರೇಲರ್‌ನಲ್ಲಿ ಅಲ್ಲು ಅರ್ಜುನ್ ಪುಷ್ಪರಾಜ್ ರೂಪದಲ್ಲಿ ಮಿಂಚಿದ್ದು, ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ‘ಕಳೆದ ಮೂರು ವರ್ಷಗಳಿಂದ ಈ ಚಿತ್ರಕ್ಕಾಗಿ ತುಂಬಾ ಪರಿಶ್ರಮ ಪಟ್ಟಿದ್ದೇವೆ. ಇಡೀ ದೇಶವೇ ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟಿದೆ. ನಿಮಗೆ ಸಿನಿಮಾ ಇಷ್ಟವಾಗುತ್ತದೆ’ ಎಂದು ಅರ್ಜುನ್ ಭರವಸೆ ವ್ಯಕ್ತಪಡಿಸಿದರು. -ಏಜೆನ್ಸೀಸ್
10 ಕೋಟಿ ವೀಕ್ಷಣೆ!
ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಬೆಂಗಾಲಿ ಭಾಷೆಗಳಲ್ಲಿ ರಿಲೀಸ್ ಆಗಿರುವ ‘ಪುಷ್ಪ: ದ ರೂಲ್’ ಟ್ರೇಲರ್‌ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಕೇವಲ 24 ತಾಸುಗಳಲ್ಲಿ ಟ್ರೇಲರ್ ಕನ್ನಡದಲ್ಲಿ 22 ಲಕ್ಷ, ಬೆಂಗಾಲಿಯಲ್ಲಿ 9 ಲಕ್ಷ, ಮಲಯಾಳಂನಲ್ಲಿ 22 ಲಕ್ಷ, ತಮಿಳಿನಲ್ಲಿ 52 ಲಕ್ಷ, ತೆಲುಗಿನಲ್ಲಿ 4.5 ಕೋಟಿ ಹಾಗೂ ಹಿಂದಿಯಲ್ಲಿ 5 ಕೋಟಿ ವೀವ್ಸ್ ಪಡೆದಿದೆ. ಆ ಮೂಲಕ 10 ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಳ್ಳುವ ಮೂಲಕ ‘ಪುಷ್ಪ 2’ ಟ್ರೇಲರ್ ಯೂಟ್ಯೂಬ್‌ನಲ್ಲಿ ದಾಖಲೆ ಬರೆದಿದೆ.