

ಹೈದರಾಬಾದ್: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ 'ಪುಷ್ಪ 2 - ದಿ ರೂಲ್'(Pushpa-2) ಚಿತ್ರಕ್ಕಾಗಿ ಪ್ರೇಕ್ಷಕರು ಮತ್ತು ಅಭಿಮಾನಿಗಳು ಕಾಯುತ್ತಿದ್ದಾರೆ. ಅಂಥವರಿಗೆಲ್ಲ ಖುಷಿ ಕೊಡುವ ಸುದ್ದಿ ಏನೆಂದರೆ ಈ ಸಿನಿಮಾವನ್ನು ಒಂದು ದಿನದ ಮೊದಲೇ ಬಿಡುಗಡೆ ಮಾಡಲಿದ್ದಾರೆ.
'ಪುಷ್ಪ 2 - ದಿ ರೂಲ್' ಚಿತ್ರವನ್ನು ಡಿ.5 ರಂದು ಬಿಡುಗಡೆ ಮಾಡಲು ನಿರ್ಮಾಪಕರು ತಯಾರಿ ನಡೆಸುತ್ತಿದ್ದಾರೆ. ಈ ಕುರಿತು ಗುರುವಾರ(ಅ.23) ನಿರ್ಮಾಪಕರಿಂದ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎನ್ನಲಾಗುತ್ತಿದೆ.
ಹೈದರಾಬಾದ್‌ನಲ್ಲಿ 'ಪುಷ್ಪ 2 ದಿ ರೂಲ್' ನ ಬಿಡುಗಡೆಯ ಕುರಿತು ನಿರ್ಮಾಪಕರು ಘೋಷಣೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದಿ ಅವತರಣಿಕೆಯನ್ನು ಬಿಡುಗಡೆ ಮಾಡುತ್ತಿರುವ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕರ ಜೊತೆಗೆ ಎಜಿಎಸ್ ಪ್ರತಿನಿಧಿಗಳು ಮತ್ತು ವಿತರಕರು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರವು ನೀವು ಊಹಿಸಿದ್ದಕ್ಕಿಂತ ಹೆಚ್ಚಿನದಾಗಲಿದೆ ಎಂದು ನಿರ್ಮಾಪಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.