'ಬೇಬಿ' ಚಿತ್ರದ ಸಕ್ಸಸ್​ ಮೀಟ್​​ನಲ್ಲಿ 'ಪುಷ್ಪಾ-2' ಡೈಲಾಗ್​ ಹೊಡೆದ ಅಲ್ಲು ಅರ್ಜುನ್​; ಸುಳಿವು ಬಿಟ್ಟುಕೊಟ್ಟಿದ್ಯಾಕೆ ಎಂದ ಫ್ಯಾನ್ಸ್?

Untitled design - 2023-07-21T130452.296
Published on

ಆಂಧ್ರಪ್ರದೇಶ: ವಿಜಯ ದೇವರಕೊಂಡ ಸಹೋದರ ನಟಿಸಿರುವ 'ಬೇಬಿ' ಚಿತ್ರದ ಸಕ್ಸಸ್​ ಸಮಾರಂಭವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮೆಗಾಸ್ಟಾರ್​ ಚಿರಂಜೀವಿ ಅವರೊಟ್ಟಿಗೆ ವೇದಿಕೆಯ ಮೇಲೆ ಮಾತನಾಡುವಾಗ ನಟ ಅಲ್ಲು ಅರ್ಜುನ್​ 'ಪುಷ್ಪಾ-2' ಚಿತ್ರದ ಡೈಲಾಗ್​  ಹೇಳುವ ಮುಖೇನ ಇದೀಗ ಸಿನಿಮಾದ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಚಿರಂಜೀವಿ ಜತೆ ವೇದಿಕೆಯ ಮೇಲೆ ಮಾತನಾಡುತ್ತಿದ್ದ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್​​, ಸಿನಿಮಾದ ಬಗ್ಗೆ ಉತ್ಸಾಹದಿಂದ ಕೆಲವು ಸಂಗತಿಗಳನ್ನು ಹೇಳುವ ಮಧ್ಯೆ ಪುಷ್ಪಾ-2 ಚಿತ್ರದ ಡೈಲಾಗ್​ ಹರಿಬಿಟ್ಟಿದ್ದಾರೆ. ಈ ದೃಶ್ಯದ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಇಷ್ಟು ಬೇಗ ಯಾಕೆ ಸಿನಿಮಾದ ಡೈಲಾಗ್​ ಅನ್ನು ಸೋರಿಕೆ ಮಾಡಿದ್ದೀರಾ? ಎಂದು ಕಾಮೆಂಟ್ ಮಾಡುವ ಮುಖೇನ ಪ್ರಶ್ನಿಸಿದ್ದಾರೆ. ಸದ್ಯ ಅಲ್ಲು ಅರ್ಜುನ್ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಪುಷ್ಪ 2 ಪ್ರಮುಖವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net