ರೈತರ ಹಿತ ಸಹಕಾರ ಸಂಘಗಳ ಉದ್ದೇಶ

hhr co ope
ಹೊಳೆಹೊನ್ನೂರು ಸಮೀಪದ ಕಲ್ಲಿಹಾಳ್ ಸರ್ಕಲ್‌ನಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿ.ಹನಮಂತು, ಎಂ.ಬಸವರಾಜಪ್ಪ, ಎಚ್.ಎನ್.ನಾಗರಾಜ್, ಬಸವರಾಜಪ್ಪ ಇತರರಿದ್ದರು.
Published on

ಹೊಳೆಹೊನ್ನೂರು: ಸಹಕಾರ ಸಂಸ್ಥೆಗಳು ರೈತರ ಅನುಕೂಲಕ್ಕಾಗಿಯೇ ಮನೆ ಬಾಗಿಲಿಗೆ ಬಂದಿವೆ ಎಂದು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಸಿ.ಹನುಮಂತು ಹೇಳಿದರು. ಕಲ್ಲಿಹಾಳ್ ಸರ್ಕಲ್‌ನಲ್ಲಿ ಬುಧವಾರ ನೂತನವಾಗಿ ಆರಂಭಗೊಂಡ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ 31ನೇ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಹಿತ ಕಾಯುವುದು ಮತ್ತು ಸರಿಯಾದ ಸಮಯದಲ್ಲಿ ಸೇವೆ ಒದಗಿಸುವುದು ಸಹಕಾರ ಸಂಘದ ಆದ್ಯ ಕರ್ತವ್ಯ ಎಂದರು.

ಹೊಳೆಹೊನ್ನೂರಲ್ಲಿ ಬಹಳ ವರ್ಷಗಳ ಹಿಂದೆಯೇ ಶಾಖೆ ತೆರೆಯಲಾಗಿದೆ . ಆದರೆ ಈಗ ಅಲ್ಲಿಯೂ ಕೆಲಸದ ಒತ್ತಡ ಜಾಸ್ತಿಯಾಗಿದೆ. ಜನರು ಹೆಚ್ಚು ಹೊತ್ತು ಕಾಯಬೇಕು. ಆದ್ದರಿಂದ ರೈತರ ಅಮೂಲ್ಯ ಸಮಯದ ಜತೆಗೆ ತುರ್ತಾಗಿ ಸೇವೆ ಒದಗಿಸುವ ಉದ್ದೇಶದಿಂದ ಕಲ್ಲಿಹಾಳ್ ಸರ್ಕಲ್‌ನಲ್ಲಿ ನೂತನ ಶಾಖೆ ತೆರೆಯಲಾಗಿದೆ ಎಂದು ಹೇಳಿದರು.

ಮುಖಂಡರಾದ ಎಂ.ಬಸವರಾಜಪ್ಪ, ಎಚ್.ಎನ್.ನಾಗರಾಜ್, ಬಸವರಾಜಪ್ಪ, ಮೃತ್ಯುಂಜಯಸ್ವಾಮಿ, ಸುರೇಶ್, ಲೋಕೇಶ್, ದೇವರಾಜ್, ಎಚ್.ಪಿ.ಹರೀಶ್, ಜೆ.ಪಿ.ಅರ್ಜುನ್, ಎ.ಎಂ.ಪ್ರತೀಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net