ಅ.28ರಿಂದ ಬೆಂಬಲ ಬೆಲೆಯಡಿ ಖರೀದಿ: ಸಚಿವ ಶಿವಾನಂದ ಪಾಟೀಲ | Farmers positive response

Shivanand Patil
Published on

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸೋಯಾಬಿನ್, ಸೂರ್ಯಕಾಂತಿ ಮತ್ತು ಹೆಸರುಕಾಳು ಖರೀದಿ ಮಂಗಳವಾರ (ಅ.28)ದಿಂದ ಆರಂಭವಾಗಲಿದೆ. ಈಗಾಗಲೇ ಎಲ್ಲೆಡೆ ನೋಂದಣಿ ಪ್ರಕ್ರಿಯೆ ಶುರುವಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಸೋಯಾಬಿನ್ ಖರೀದಿಗೆ 206 ಖರೀದಿ ಕೇಂದ್ರಗಳನ್ನು ತೆರೆದಿದ್ದು, 19,325 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಹೆಸರು ಖರೀದಿಗೆ 211 ಖರೀದಿ ಕೇಂದ್ರಗಳು, 16,578 ರೈತರ ನೋಂದಣಿ, ಸೂರ್ಯಕಾಂತಿ ಖರೀದಿಗೆ 20 ಖರೀದಿ ಕೇಂದ್ರಗಳು, 5,341 ರೈತರ ನೋಂದಣಿ ಮತ್ತು ಉದ್ದಿನ ಕಾಳು ಖರೀದಿಗೆ 134 ಖರೀದಿ ಕೇಂದ್ರಗಳು, 5,274 ರೈತರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ಸೋಯಾಬಿನ್‌ಗೆ ಬೀದರ್ ಜಿಲ್ಲೆಯಲ್ಲಿ 116 ಖರೀದಿ ಕೇಂದ್ರಗಳಿದ್ದರೆ ಅತಿ ಹೆಚ್ಚು 13,033 ರೈತರು ನೋಂದಣಿಯಾಗಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿ 3,047, ಧಾರವಾಡ ಜಿಲ್ಲೆಯಲ್ಲಿ 2,164 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ.

ಹೆಸರುಕಾಳು ಮಾರಾಟಕ್ಕೆ ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು 6362 ರೈತರ ನೋಂದಣಿಯಾಗಿದ್ದು, ಖರೀದಿ ಸುಗಮವಾಗಿ ನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net