ಅಲ್ಟ್ರಾಟೆಕ್​ನಿಂದ ಇಂಡಿಯಾ ಸಿಮೆಂಟ್ಸ್​ ಪಾಲು ಖರೀದಿ: ರೂ. 1,885 ಕೋಟಿಯ ಒಪ್ಪಂದ

utratech
Published on

ನವದೆಹಲಿ: ದೇಶದ ಪ್ರಮುಖ ಸಿಮೆಂಟ್ ತಯಾರಕ ಕಂಪನಿಯಾದ ಅಲ್ಟ್ರಾಟೆಕ್ ಗುರುವಾರ ತನ್ನ ಚೆನ್ನೈ ಮೂಲದ ಪ್ರತಿಸ್ಪರ್ಧಿ ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್‌ನಲ್ಲಿ ಅಂದಾಜು 1,885 ಕೋಟಿ ರೂಪಾಯಿಗಳ ಒಪ್ಪಂದದ ಮೂಲಕ ಶೇ. 23 ಪಾಲನ್ನು ಪಡೆದುಕೊಳ್ಳುವುದಾಗಿ ಹೇಳಿದೆ.

ವಹಿವಾಟಿನ ಭಾಗವಾಗಿ, ಅಲ್ಟ್ರಾಟೆಕ್ ಸಿಮೆಂಟ್ ಇಂಡಿಯಾ ಸಿಮೆಂಟ್ಸ್‌ನ 7.06 ಕೋಟಿ ಈಕ್ವಿಟಿ ಷೇರುಗಳನ್ನು ಪ್ರತಿ ಷೇರಿಗೆ 267 ರೂಪಾಯಿಗಳವರೆಗೆ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಷೇರು ಮಾರುಕಟ್ಟೆಗೆ ಆದಿತ್ಯ ಬಿರ್ಲಾ ಗ್ರೂಪ್ ತಿಳಿಸಿದೆ.

ಕಂಪನಿಯ ಮಂಡಳಿಯು ಗುರುವಾರ ನಡೆದ ಸಭೆಯಲ್ಲಿ "ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್‌ನ 7.06 ಕೋಟಿ ಈಕ್ವಿಟಿ ಷೇರುಗಳನ್ನು ಖರೀದಿಸಲು ಹಣಕಾಸಿನ ಹೂಡಿಕೆ ಮಾಡಲು ಅನುಮೋದಿಸಿದೆ ಎಂದು ಈ ಹೇಳಿಕೆ ತಿಳಿಸಿದೆ. ಪ್ರತಿ ಷೇರಿಗೆ 267 ರೂ.ಗಳ ಆಧಾರದ ಮೇಲೆ ಲೆಕ್ಕ ಹಾಕಿದರೆ, ಸ್ವಾಧೀನದ ವಹಿವಾಟಿನ ಮೌಲ್ಯ 1,885 ಕೋಟಿ ರೂ. ಆಗುತ್ತದೆ.

ವಾರ್ಷಿಕವಾಗಿ 15.27 ಕೋಟಿ ಟನ್‌ಗಳಷ್ಟು ಬೂದು ಸಿಮೆಂಟ್‌ನ ಸ್ಥಾಪಿತ ಸಾಮರ್ಥ್ಯವಿರುವ ಅಲ್ಟ್ರಾಟೆಕ್ ತನ್ನ ಕಂಪನಿಯನ್ನು ವಿಸ್ತರಿಸಲು ಉದ್ದೇಶಿಸಿದೆ. ಏಪ್ರಿಲ್ 20 ರಂದು ಮಹಾರಾಷ್ಟ್ರದ ಇಂಡಿಯಾ ಸಿಮೆಂಟ್ಸ್‌ನಿಂದ 315 ಕೋಟಿ ರೂಪಾಯಿ ಮೊತ್ತಕ್ಕೆ ಗ್ರೈಂಡಿಂಗ್ ಘಟಕವನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿತ್ತು.

ಈ ವಾರದ ಆರಂಭದಲ್ಲಿ, ಯುಎಇ ಮೂಲದ ಆರ್​ಎಕೆ ಸಿಮೆಂಟ್ ಕಂಪನಿಯಲ್ಲಿ ವೈಟ್ ಸಿಮೆಂಟ್ ಮತ್ತು ಕನ್ಸ್ಟ್ರಕ್ಷನ್ ಮೆಟೀರಿಯಲ್ಸ್ ಪಿಎಸ್​ಸಿಯಲ್ಲಿ 25 ಪ್ರತಿಶತವನ್ನು ಸ್ವಾಧೀನಪಡಿಸಿಕೊಳ್ಳುವ ತನ್ನ ಆಫರ್​ ಅನ್ನು ಅಲ್ಟ್ರಾಟೆಕ್ ಸಿಮೆಂಟ್ ಪರಿಷ್ಕರಿಸಿದೆ.

ಸೆಪ್ಟೆಂಬರ್ 2023 ರಲ್ಲಿ, ಇಂಡಿಯಾ ಸಿಮೆಂಟ್ಸ್ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಕಂಟಕಪಲ್ಲೆ ಮತ್ತು ಚಿನ್ನಿಪಾಲೆಂ ಗ್ರಾಮಗಳಲ್ಲಿ 73.75 ಎಕರೆ ಭೂಮಿಯನ್ನು ಅಲ್ಟ್ರಾಟೆಕ್ ಸಿಮೆಂಟ್‌ಗೆ ರೂ. 70 ಕೋಟಿಗೆ ಮಾರಾಟ ಮಾಡಿದೆ. ಅಕ್ಟೋಬರ್ 2022 ರಲ್ಲಿ, ಇಂಡಿಯಾ ಸಿಮೆಂಟ್ಸ್ ಸ್ಪ್ರಿಂಗ್‌ವೇ ಮೈನಿಂಗ್ ಪ್ರೈವೇಟ್ ಲಿಮಿಟೆಡ್‌ನಲ್ಲಿ (SMPL) ಹೊಂದಿದ್ದ ತನ್ನ ಸಂಪೂರ್ಣ ಷೇರುಗಳನ್ನು ಜೆಎಸ್​ಡಬ್ಲ್ಯು ಸಿಮೆಂಟ್‌ಗೆ 476.87 ಕೋಟಿ ರೂಪಾಯಿಗಳ ಮೊತ್ತಕ್ಕೆ ಮಾರಾಟ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net