ವಾರ್ಡ್ ವಾರು ಕ್ಷೇತ್ರಗಳ ಮರುವಿಂಗಡಣೆ

purasabhe
Published on

ಮಡಿಕೇರಿ:

ಪುರಸಭೆ ಆಗಿ ಮೇಲ್ದರ್ಜೆಗೆ ಏರಿದ ನಂತರ ಮೊದಲ ಚುನಾವಣೆ ನಡೆಸುವುದಕ್ಕೆ ಪೂರ್ವಭಾವಿ ಸಿದ್ಧತೆಯಾಗಿ ಕುಶಾಲನಗರ ಮತ್ತು ವಿರಾಜಪೇಟೆಯಲ್ಲಿ ವಾರ್ಡ್ವಾರು ಕ್ಷೇತ್ರಗಳ ಪುನರ್ವಿಂಗಡಣೆ ಮಾಡಲಾಗಿದೆ. 2011ರ ಜನಗಣತಿ ಆಧರಿಸಿ ಈ ಪುನರ್ವಿಂಗಡಣೆ ಪ್ರಕ್ರಿಯೆ ನಡೆಸಲಾಗಿದೆ. ಆ 30ರ ರಾಜ್ಯಪತ್ರದಲ್ಲಿ ಈ ಸಂಬAಧ ಅಧಿಸೂಚನೆ ಹೊರಡಿಸಲಾಗಿದ್ದು, ಆಕ್ಷೇಪಣೆ ಮತ್ತು ಸಲಹೆಗಳು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಕುಶಾಲನಗರ ಮತ್ತು ವಿರಾಜಪೇಟೆ ಪುರಸಭೆ ಆಗಿ ಮೇಲ್ದರ್ಜೆಗೆ ಏರಿ 3 ವರ್ಷಗಳಾಗುತ್ತಾ ಬಂದರೂ ಈ ಹಿಂದಿನ ಪಟ್ಟಣ ಪಂಚಾಯಿತಿಗೆ ನಡೆದಿದ್ದ ಚುನಾವಣೆಯಲ್ಲಿ ಚುನಾಯಿತರಾದ ಜನಪ್ರತಿನಿಧಿಗಳೇ ಎರಡೂ ಕಡೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಹಾಗಾಗಿ ಪುರಸಭೆಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಿಗೆ ಚುನಾಯಿತ ಪ್ರತಿನಿಧಿಗಳ ಇಲ್ಲದ ಕಾರಣ ಆದಷ್ಟು ಶೀಘ್ರ ಚುನಾವಣೆಯ ಒತ್ತಾಯ ಕೇಳಿ ಬರುತ್ತಿತ್ತು.

ಇದಕ್ಕೆ ಪೂರ್ವಭಾವಿಯಾಗಿ ಕುಶಾಲನಗರ ಮತ್ತು ವಿರಾಜಪೇಟೆಯಲ್ಲಿ ವಾರ್ಡ್ವಾರು ಕ್ಷೇತ್ರಗಳ ಪುನರ್ವಿಂಗಡಣೆ ಮಾಡಲಾಗಿದೆ. ಪಟ್ಟಣಪಂಚಾಯಿತಿ ಆಗಿದ್ದ ಸಂದರ್ಭ ಕುಶಾಲನಗರದಲ್ಲಿ 16 ಹಾಗೂ ವಿರಾಜಪೇಟೆಯಲ್ಲಿ 18 ವಾರ್ಡ್ಗಳು ಇದ್ದವು. ಈಗ ಪುರಸಭೆ ಆದ ನಂತರ 23 ವಾರ್ಡ್ಗಳಿಗೆ ಹೆಚ್ಚಳವಾಗಿದ್ದು, ಇದಕ್ಕೆ ಅನುಗುಣವಾಗಿ ವಾರ್ಡ್ಗಳ ಪುನರ್ ವಿಂಗಡಣೆ ಮಾಡಲಾಗಿದೆ.

ಕುಶಾಲನಗರದಲ್ಲಿ 1ನೇ ವಾರ್ಡ್ನಲ್ಲಿ ರಸೂಲ್, ವಿವೇಕಾನಂದ ಬಡಾವಣೆ, ತ್ಯಾಗರಾಜ ರಸ್ತೆ ಬಲಬದಿ, ಕೆಂಪಮ್ಮ ಬಡಾವಣೆ, ಭಾಗಶಃ ಆದಿಶಂಕರಾಚಾರ್ಯ ಬಡಾವಣೆ, 2ನೇ ವಾರ್ಡ್ನಲ್ಲಿ ಕಾಳಮ್ಮ ಕಾಲೋನಿ, ಆದರ್ಶ ದ್ರಾವಿಡ ಕಾಲೋನಿ ಭಾಗಶಃ ಹಾಗೂ ನೇತಾಜಿ ಬಡಾವಣೆ ಭಾಗಶಃ, 3ನೇ ವಾರ್ಡ್ನಲ್ಲಿ ಸಿಂಗಾರಮ್ಮ, ಬದ್ರುನ್ನಿಸಾ, ಶೈಲಜಾ ಬಡಾವಣೆ, ಬಿ.ಎಂ. ರಸ್ತೆ, ನಾಗಪ್ಪ ಶೆಟ್ಟಿ, ಬ್ರೆಡ್ಲಿ, ನೇತಾಜಿ ಬಡಾವಣೆ ಭಾಗಶಃ, ಕೆಪಿಟಿಸಿಎಲ್ ವಸತಿ ಗೃಹ, ಚಿಕ್ಕಣ್ಣ, ಯೋಗೇಶ್ ಬಡಾವಣೆ, ಆದರ್ಶ ದ್ರಾವಿಡ ಕಾಲೋನಿ ಭಾಗಶಃ, 4ನೇ ವಾರ್ಡ್ನಲ್ಲಿ ದಂಡಿನಪೇಟೆ, ಹವಾಬಿ ಬಡಾವಣೆ, ಶಾಂತಿಮಾರ್ಗ ಹಾಗೂ ಬಿಎಂ ರಸ್ತೆ ಎಡಬದಿ ಸೇರುತ್ತದೆ.

5ನೇ ವಾರ್ಡ್ನಲ್ಲಿ ಬಾಪೂಜಿ ಬಡಾವಣೆ, ಟೌನ್ ಕಾಲೋನಿ, ರಥಬೀದಿ ಬಲಪಾರ್ಶ್ವ, ಬಿಎಂ ರಸ್ತೆ, 6ನೇ ವಾರ್ಡ್ನಲ್ಲಿ ಫಾತಿಮ ಕಾನ್ವೆಂಟ್ ಹಿಂಭಾಗ, ದಂಡಿನಪೇಟೆ ಭಾಗಶಃ, ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ವಿ.ಪಿ. ಪುಟ್ಟುಶೆಟ್ಟಿ, ರಫೀಕ್ ಬಡಾವಣೆ, ಬಿಎಂ ರಸ್ತೆಯ ಎಡಭಾಗ ಹಾಗೂ ಕಬ್ರಸ್ಥಾನ ರಸ್ತೆ ಎಡಭಾಗ, 7ನೇ ವಾರ್ಡ್ನಲ್ಲಿ ಬಿಎಂ ರಸ್ತೆ ಎಡಭಾಗ, ಇಂದಿರಾ ಬಡಾವಣೆ, ಕಬ್ರಸ್ಥಾನ ರಸ್ತೆ ಬಲಭಾಗ, ಬಿದ್ದಪ್ಪ ಹಾಗೂ ಫರ್ನಾಂಡಿಸ್ ಬಡಾವಣೆ ಇದೆ.

8ನೇ ವಾರ್ಡ್ನಲ್ಲಿ ಅಂಬೇಡ್ಕರ್, ನಿಜಾಮುದ್ದೀನ್, ನಿಂಗೇಗೌಡ ಬಡಾವಣೆ, ಪಂಪ್ ಹೌಸ್ ರಸ್ತೆ, ಬಿ.ಎಂ. ರಸ್ತೆ ಎಡಭಾಗ, ಭವಾನಿ, ಯೋಗಾನಂದ, ಚಂದ್ರಶೇಖರ ಬಡಾವಣೆ, ಎಸ್‌ಎಲ್‌ಎನ್ ಪ್ರಾಪರ್ಟಿ, ನಂಜಪ್ಪ ಬಡಾವಣೆ, ಕರ್ನಾಟಕ ರಾಜ್ಯ ಅರಣ್ಯ ತರಬೇತಿ ಕೇಂದ್ರ, 9ನೇ ವಾರ್ಡ್ನಲ್ಲಿ ಬಿ.ಎಂ. ರಸ್ತೆ, ಸರ್ಕಾರಿ ಎಂಜಿನಿಯರಿAಗ್ ಕಾಲೇಜು ಮತ್ತು ಅದರ ಮುಂಭಾಗದ ಪ್ರದೇಶ, ಅತಿಥಿ ರೆಸ್ಟೋರೆಂಟ್ ಸುತ್ತಲಿನ ಪ್ರದೇಶ, ಗ್ರೀನ್ ಹೊಟೇಲ್, ಎಸ್‌ಎಲ್‌ಎನ್ ಪ್ರಾಪರ್ಟಿಸ್, ಮಾದಾಪಟ್ಟ ಭಾಗಶಃ, ಸ್ಕಂದ ಫಾರ್ಮ್, 10ನೇ ವಾರ್ಡ್ನಲ್ಲಿ ಗುಂಡೂರಾವ್ ಬಡಾವಣೆ, ಆರ್.ಕೆ. ಬಡಾವಣೆ ಭಾಗಶಃ, ಬೈಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೆಟ್ರಿಕ್ ಬಾಲಕರ ವಿದ್ಯಾರ್ಥಿ ನಿಲಯ, ಗಂಧದ ಕೋಠಿ, ವಿ.ಎಲ್. ಗೌರೀಶ್ ತೋಟ, ಪರಿವಾರ ಜವರಪ್ಪ ಮಲ್ಲೇಶ, ವೆಂಕಟೇಶ ಬಡಾವಣೆ, ತಾವರೆ ಕೆರೆ, ಪೂನಂ ಲೇಔಟ್, ಸರ್ಕಾರಿ ಪಾಲಿಟೆಕ್ನಿಕ್, ಕಾಶಿವಿಶ್ವನಾಥ ದೇವಾಲಯ, ಮಾದಾಪಟ್ಟದಿಂದ ಗೊಂದಿಬಸವನಹಳ್ಳಿಗೆ ಹೋಗುವ ಬಲಭಾಗದ ಪ್ರದೇಶ ಇದೆ.

11ನೇ ವಾರ್ಡ್ನಲ್ಲಿ ಬೈಚನಹಳ್ಳಿ, ಎಪಿಎಂಸಿ, ಕಾವೇರಿ ಬಡಾವಣೆ, ಐ.ಬಿ.ರಸ್ತೆ ಎಡಭಾಗ, ಬಿ.ಎಂ.ರಸ್ತೆ ಬಲಭಾಗ, ಅರಣ್ಯ ಇಲಾಖೆ, ಪುರಸಭೆ ಕಾರ್ಯಾಲಯ, ಶ್ರೀ ಮಹಾಗಣಪತಿ ದೇವಸ್ಥಾನ, 12ನೇ ವಾರ್ಡ್ನಲ್ಲಿ ಐಬಿ ರಸ್ತೆ, ಬೈಪಾಸ್ ರಸ್ತೆ ಎಡ ಮತ್ತು ಬಲ ರಾಧಾಕೃಷ್ಣ ಬಡಾವಣೆ, ಸಾರ್ವಜನಿಕ ಆಸ್ಪತ್ರೆ, ತಹಸೀಲ್ದಾರ್ ಕಚೇರಿ, ಸೋಮೇಶ್ವರ ದೇವಸ್ಥಾನ ರಸ್ತೆಯ ಬಲಭಾಗ, 13ನೇ ವಾರ್ಡ್ನಲ್ಲಿ ಅವಧಾನಿ ಬಡಾವಣೆ, ಬಸಪ್ಪ ಬಡಾವಣೆ, ಶ್ರೀ ಸಾಯಿ ಬಡಾವಣೆ, ಸೋಮವಾರಪೇಟೆ ರಸ್ತೆ ಬಲ ಬದಿ, ಸರ್ಕಾರಿ ಸಾರ್ವಜನಿಕ ಆಸತ್ರೆ ವಸತಿ ಗೃಹ, ಸೋಮೇಶ್ವರ ಬಡಾವಣೆ ಹಾಗೂ ಆದಿಶಂಕರಾಚಾರ್ಯ ಬಡಾವಣೆ ಭಾಗಶಃ ಇದೆ.

14ನೇ ವಾರ್ಡ್ನಲ್ಲಿ ವೆಂಕಟೇಶ್ವರ, ಮಾರುತಿ, ಓಂಕಾರ, ಕೈಗಾರಿಕಾ ಬಡಾವಣೆ, ಸೋಮೇಶ್ವರ ಕೆರೆ, ನಿರ್ಮಿತಿ ಕೇಂದ್ರ, ಉಪನೋಂದಣಾಧಿಕಾರಿ ಕಚೇರಿ ಹಿಂಭಾಗ, ಗೌಡ ಸಮಾಜ, ಅಂಗನವಾಡಿ, ಅಂಬೇಡ್ಕರ್ ಬಡಾವಣೆ ಹಾಗೂ ಜನತಾ ಕಾಲೋನಿ ರಸ್ತೆಯ ಬಲಭಾಗ, 15ನೇ ವಾರ್ಡ್ನಲ್ಲಿ ಕುವೆಂಪು, ಶ್ರೀನಿಧಿ ಬಡಾವಣೆ, ತಪೋವನ, ತಾಲೂಕು ಪಂಚಾಯಿತಿ ಹಿಂಭಾಗ, ಗುಮ್ಮನಕೊಲ್ಲಿ ಸರ್ಕಾರಿ ಶಾಲೆಯ ಹಿಂಭಾಗ, ನಂದಿ, ಕಾವೇರಿ, ಕೆ.ಪಿ.ಚಂದ್ರಕಲಾ ಬಡಾವಣೆ, 16 ವಾರ್ಡ್ನಲ್ಲಿ ಬಸಪ್ಪ ಮತ್ತು ಶಕ್ತಿ ಬಡಾವಣೆ ಸೇರಿಕೊಂಡಿದೆ.

17ನೇ ವಾರ್ಡ್ನಲ್ಲಿ ಜನತಾ ಕಾಲೋನಿ 1ನೇ ಕ್ರಾಸ್‌ನಿಂದ 7ನೇ ಕ್ರಾಸ್, ಮಾರುತಿ ಬಡಾವಣೆ, 18ನೇ ವಾರ್ಡ್ನಲ್ಲಿ ಚಾಮುಂಡೇಶ್ವರಿ ಬಡಾವಣೆ, ಚನ್ನಕೇಶವ ಪ್ರೆಸ್ ಹಿಂಭಾಗದ ಮನೆಗಳು, ಆಫಿಸರ್ಸ್ ಕಾಲೋನಿ, ಮಾಲಿನ್ಯ ನೀರಿನ ಶುದ್ದೀಕರಣ ಘಟಕ, ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಂಭಾಗದ ವಸತಿಗಳು, ಶಿವಾನಂದ ಮನೆಯ ಸುತ್ತಮುತ್ತ ಪ್ರದೇಶ, 19ನೇ ವಾರ್ಡ್ನಲ್ಲಿ ಐಬಿ, ಹಳೇ ಹೌಸಿಂಗ್ ಬೋರ್ಡ್, ಸಿ.ಪಿ.ಸುಕನ್ಯ ಲೇಔಟ್, ಚೂಡೇಗೌಡ, ಡಾ. ಶಿವರಾಮ ಕಾರಂತ, ಥೋಮಸ್, ಸಿದ್ದಯ್ಯ ಪುರಾಣಿಕ ಬಡಾವಣೆ, ಕೋಣಮಾರಮ್ಮ ದೇವಸ್ಥಾನ ಹಿಂಭಾಗ, 20ನೇ ವಾರ್ಡ್ನಲ್ಲಿ ನೆಹರೂ ಬಡಾವಣೆ, ಹೆಚ್.ಆರ್.ಪಿ. ಕಾಲೋನಿ, ಕರಿಯಪ್ಪ ಬಡಾವಣೆ ಹಾಗೂ ವಿನಾಯ ಬಡಾವಣೆ ಇದೆ.

21ನೇ ವಾರ್ಡ್ನಲ್ಲಿ ಕರ್ನಾಟಕ ಗೃಹ ಮಂಡಳಿ, ಮಂಜುನಾಥ, ಚೈತ್ರ, ಆರ್‌ಆರ್‌ಆರ್ ಬಡಾವಣೆ, ಆರ್‌ಸಿ ಬಡಾವಣೆ ಭಾಗಶಃ, ಮಂಜೇಗೌಡ, ನಂಜುAಡೇಶ್ವರ, ಸ್ವಾಮಿ, ಕಾರು ಚಾಲಕರ ಬಡಾವಣೆ, ಗೊಂದಿಬಸವನಹಳ್ಳಿ ಭಾಗಶಃ, ಸಿದ್ದಯ್ಯ, ಪಿ.ಪಿ. ಸತ್ಯನಾರಾಯಣ ಬಡಾವಣೆ, 22ನೇ ವಾಡ್‌ನಲ್ಲಿ ನಾಗೇಗೌಡ, ಕಾಲಭೈರವೇಶ್ವರ, ಅಣ್ಣೆಗೌಡ ಬಡಾವಣೆ, ಕರ್ನಾಟಕ ರಾಜ್ಯ ಅಗ್ನಿಶಾಮಕದಳ ಹಿಂಭಾಗ ಬರುವ ಮನೆಗಳು, ಮೂಕಾಂಬಿಕಾ ವಿದ್ಯಾಸಂಸ್ಥೆ, ಎಸ್.ಎಲ್.ಎನ್ ಪ್ರಾಪರ್ಟಿಸ್, ಶ್ರೀ ಬಲಮುರಿ ಗಣಪತಿ ದೇವಸ್ಥಾನ ಸುತ್ತಮುತ್ತಲು ಪ್ರದೇಶ, ಬಸವೇಶ್ವರ ಬಡಾವಣೆ ಹಾಗೂ 23ನೇ ವಾರ್ಡ್ನಲ್ಲಿ ಗೊಂದಿಬಸವನಹಳ್ಳಿ ಭಾಗಶಃ ಒಳಗೊಂಡಿದೆ.

ವಿರಾಜಪೇಟೆಯಲ್ಲಿ 1ನೇ ವಾರ್ಡ್ನಲ್ಲಿ ಚರ್ಚ್ ರಸ್ತೆ, 2ನೇ ವಾರ್ಡ್ನಲ್ಲಿ ಅರಸುನಗರ, 3ನೇ ವಾರ್ಡ್ನಲ್ಲಿ ಮಲೆತಿರಿಕೆ ಬೆಟ್ಟ, 4ನೇ ವಾರ್ಡ್ನಲ್ಲಿ ತೆಲುಗರ ಬೀದಿ, 5ನೇ ವಾರ್ಡ್ನಲ್ಲಿ ದಖ್ಖನಿ ಮೊಹಲ್ಲಾ, 6ನೇ ವಾರ್ಡ್ನಲ್ಲಿ ಜೈನರ ಬೀದಿ, 7ನೇ ವಾರ್ಡ್ ಮೊಗರಗಲ್ಲಿ, 8ನೇ ವಾರ್ಡ್ ನೆಹರು ನಗರ1, 9ನೇ ವಾರ್ಡ್ ನೆಹರು ನಗರ 2, 10ನೇ ವಾರ್ಡ್ ವಿದ್ಯಾನಗರ 1, 11ನೇ ವಾರ್ಡ್ ವಿದ್ಯಾನಗರ 2, 12ನೇ ವಾರ್ಡ್ ನಿಸರ್ಗ ಲೇ ಔಟ್, 13ನೇ ವಾರ್ಡ್ ಕಲ್ಲಿಬಾಣೆ, 14ನೇ ವಾರ್ಡ್ ಮಂಜುನಾಥ ನಗರ, 15ನೇ ವಾರ್ಡ್ ವಿಜಯನಗರ, 16ನೇ ವಾರ್ಡ್ ಸುಣ್ಣದ ಬೀದಿ, 17ನೇ ವಾರ್ಡ್ ಶಾಂತಿ ನಗರ, 18ನೇ ವಾರ್ಡ್ ಮೀನುಪೇಟೆ, 19ನೇ ವಾರ್ಡ್ ಗೌರಿ ಕೆರೆ, 20ನೇ ವಾರ್ಡ್ ಗಾಂಧಿನಗರ, 21ನೇ ವಾರ್ಡ್ ಚಿಕ್ಕಪೇಟೆ, 22, 23ನೇ ವಾರ್ಡ್ ಶಿವಕೇರಿ ಎಂದು ವಿಂಗಡಣೆ ಮಾಡಲಾಗಿದೆ.

ಕುಶಾಲನಗರ ಮತ್ತು ವಿರಾಜಪೇಟೆಗೆ ಸಂಬAಧಿಸಿದ ವಾರ್ಡ್ವಾರು ಕ್ಷೇತ್ರಗಳ ಪುನರ್ವಿಂಗಡಣೆ ಮಾಡಲಾಗಿದ್ದು, ಈ ಬಗ್ಗೆ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು ಇಚ್ಚಿಸುವ ಎಲ್ಲಾ ವ್ಯಕ್ತಿಗಳು ಅದನ್ನು ಲಿಖಿತ ರೂಪದಲ್ಲಿ ಕಾರಣ ಸಹಿತವಾಗಿ ಈ ಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿAದ 15 ದಿನಗಳೊಳಗಾಗಿ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಆಕ್ಷೇಪಣೆ ಅಥವವಾ ಸಲಹೆಗಳನ್ನು ನಿಗದಿತ ಅವಧಿಯ ನಂತರ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು.

ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net