ಭದ್ರತೆ ವಾಪಸ್​ ಪಡೆದ ಮಾರನೇ ದಿನವೇ ಖ್ಯಾತ ಗಾಯಕನ ಹತ್ಯೆ!

Shootout
Published on

ಚಂಡಿಗಢ: ಭದ್ರತೆ ವಾಪಸ್​​ ಪಡೆದ ಬೆನ್ನಲ್ಲೇ ಖ್ಯಾತ ಗಾಯಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಮಾನಸ ಜಿಲ್ಲೆಯ ಜವಹರ್ಕೆಯ ಗ್ರಾಮದಲ್ಲಿ ಗಾಯಕ ಚಲಿಸುತ್ತಿದ್ದ ಕಾರಿನ ಮೇಲೆ ಹಲವು ಸುತ್ತಿನ ಗುಂಡು ಹಾರಿಸಿ ಹತ್ಯೆ ಮಾಡಿದ್ದು, ದುಷ್ಕರ್ಮಿಗಳು ನಡೆಸಿದ ಏಕಾಏಕಿ ದಾಳಿಗೆ ಗಾಯಕ ಸಿಧು ಮೂಸೆವಾಲಾ ಮೃತಪಟ್ಟಿದ್ದಾರೆ.

ಗಾಯಕನ ಜತೆಗೆ ಇನ್ನು ಇಬ್ಬರಿಗೂ ಗುಂಡು ತಗುಲಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 30 ಸುತ್ತಿನ ಗುಂಡು ಹಾರಿಸಿದ್ದರಿಂದ ತೀವ್ರ ರಕ್ತಸಿಕ್ತರಾದ ಗಾಯಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಕ ಸಿಧು ಸೇರಿದಂತೆ ಒಟ್ಟು 424 ಜನರ ಭದ್ರತೆಯನ್ನು ಪಂಜಾಬ್​ ಸರ್ಕಾರ ನಿನ್ನೆಯಷ್ಟೇ ಪಡೆದುಕೊಂಡಿತ್ತು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುಸೇವಾಲ ಅವರು ಆಪ್​ ಅಭ್ಯರ್ಥಿ ವಿಜಯ್​ ಸಿಂಗ್ಲಾ ಅವರಿಂದ 63 ಸಾವಿರ ಮತಗಳ ಅಂತರದಿಂದ ಸೋತಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net