ಪ್ರೀತಿಗಾಗಿ ಪರೀಕ್ಷೆ ಬರೆಯಲು ಬಳೆ, ಬಿಂದಿ, ಲಿಪ್‌ಸ್ಟಿಕ್ ಹಾಕಿ ತನ್ನ ಗೆಳತಿಯಂತೆ ವೇಷ ಧರಿಸಿ ಸಿಕ್ಕಿಬಿದ್ದ

Punjab Man Dressed As His Girlfriend To Write Exam On Her Behalf
Published on: 

ನವದೆಹಲಿ: ಪರೀಕ್ಷೆಯಲ್ಲಿ ನಕಲು ಮಾಡಲು ಕೆಲವು ಪರೀಕ್ಷಾರ್ಥಿಗಳು ಗಿಮಿಕ್​ ಮಾಡುತ್ತಿರುತ್ತಾರೆ. ಪರೀಕ್ಷೆಯಲ್ಲಿ ಕಾಫಿ ಮಾಡಲು ಹೋಗಿ ಸಿಕ್ಕಿ ಬಿದ್ದಿರುವ ಎಷ್ಟೋ ಉದಾಹರಣೆಳು ಇವೆ. ಆದರೆ ಪಂಜಾಬ್‌ನ ಫರೀದ್‌ಕೋಟ್‌ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ತನ್ನ ಗೆಳತಿಯಂತೆ ಸೋಗು ಹಾಕಿ ಸಿಕ್ಕಿ ಬಿದ್ದಿದ್ದಾನೆ.

ಜನವರಿ 7 ರಂದು, ಕೊಟ್ಕಾಪುರದ ಡಿಎವಿ ಪಬ್ಲಿಕ್ ಸ್ಕೂಲ್‌ನಲ್ಲಿ ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಬಹುಪಯೋಗಿ ಆರೋಗ್ಯ ಕಾರ್ಯಕರ್ತರ ಪರೀಕ್ಷೆಯನ್ನು ನಡೆಸಲಾಯಿತು. ಫಾಜಿಲ್ಕಾದ ಅಂಗ್ರೇಜ್ ಸಿಂಗ್ ತನ್ನ ಗೆಳತಿ ಪರಮ್‌ಜಿತ್ ಕೌರ್ ವೇಷ ಧರಿಸಿ ಪರೀಕ್ಷೆ ಬರೆಯಲು ನಿರ್ಧರಿಸಿದ. ಕೆಂಪು ಬಳೆಗಳು, ಬಿಂದಿ, ಲಿಪ್‌ಸ್ಟಿಕ್ ಮತ್ತು ಮಹಿಳೆಯರ ರೀತಿ ಅಲಂಕೃತರಾಗಿದ್ದ ಅಂಗ್ರೇಜ್ ಸಿಂಗ್ ಸಿದ್ಧನಾಗಿದ್ದ. ಆದರೆ, ವಿಶ್ವವಿದ್ಯಾಲಯದ ಅಧಿಕಾರಿಗಳು ಆತನನ್ನು ಕಂಡು ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ.

ಪೋಲೀಸರ ಪ್ರಕಾರ, ಅಂಗ್ರೇಜ್ ಸಿಂಗ್ ನಕಲಿ ಮತದಾರರು ಮತ್ತು ಆಧಾರ್ ಕಾರ್ಡ್ಗಳನ್ನು ಬಳಸಿಕೊಂಡು ತಾನು ಪರಮ್ಜಿತ್ ಕೌರ್ ಎಂದು ಸಾಬೀತುಪಡಿಸಿದ. ಬಯೋಮೆಟ್ರಿಕ್ ಸಾಧನದಲ್ಲಿ ನಿಜವಾದ ಅಭ್ಯರ್ಥಿಯ ಫಿಂಗರ್‌ಪ್ರಿಂಟ್‌ಗಳನ್ನು ಹೊಂದಿಸಲು ಅವನ ಬೆರಳಚ್ಚುಗಳು ವಿಫಲವಾದಾಗ ಸಿಕ್ಕಿಬಿದ್ದಿದ್ದಾನೆ.

ನಿಜವಾಗಿ ಪರೀಕ್ಷೆ ಬರೆಯ ಬೇಕಾದ ಅಭ್ಯರ್ಥಿ ಪರಮ್ಜಿತ್ ಕೌರ್ ನಕಲು ಮಾಡಲು ವೇಷ ಧರಿಸಿ ಬಂದು ಸಿಕ್ಕಿ ಬಿದ್ದಿದ್ದಾನೆ. ಆಡಳಿತದಿಂದ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ಅಂಗ್ರೇಜ್ ಸಿಂಗ್ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ.