ಲಡ್ಡುವಿನಲ್ಲಿ ಕೊಬ್ಬು ಬೆರೆಸಿದವರನ್ನು ಶಿಕ್ಷಿಸಿ

skp manavi
ಶಿಕಾರಿಪುರದಲ್ಲಿ ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಕುಮಾರಸ್ವಾಮಿ ಹಿರೇಮಠ್, ವಿ.ರಾಮಣ್ಣ, ನಗರದ ಅಶೋಕ್, ಅರ್ಜುನ್ ರಾವ್, ಚಂದ್ರಪ್ಪ, ರಘು, ಶ್ರೀನಿವಾಸ್ ಮತ್ತಿತರರಿದ್ದರು.
Published on

ಶಿಕಾರಿಪುರ: ತಿರುಪತಿ ಬಾಲಾಜಿ ದೇವಸ್ಥಾನದ ಪವಿತ್ರ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬೆರೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ತಾಲೂಕು ಆಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಶ್ರೀ ತಿರುಪತಿ ತಿರುಮಲ ದೇವಸ್ಥಾನವು ಪ್ರಪಂಚದಾದ್ಯಂತ ಕೋಟ್ಯಂತರ ಭಕ್ತರ ಆರಾಧನೆ ಸ್ಥಳವಾಗಿದೆ. ಇದನ್ನು ವಿಷ್ಣುವಿನ ನಿಜವಾದ ಭೂ ವೈಕುಂಠವೆಂದು ಪರಿಗಣಿಸಲಾಗಿದೆ. ಇಂತಹ ಪುಣ್ಯಭೂಮಿಯ ಪ್ರಸಾದದಲ್ಲಿ ಕೊಬ್ಬಿನ ಎಣ್ಣೆ ಬಳಸಿರುವುದು ಆಘಾತಕಾರಿ. ಹಿಂದು ಧರ್ಮದ ಆಚಾರ, ವಿಚಾರ, ಸಂಪ್ರದಾಯ ಮತ್ತು ಪರಂಪರೆಯನ್ನು ಹಾಳು ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎಂದು ತಾಲೂಕು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದರು.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಈ ಮಾಹಿತಿ ನೀಡಿದ್ದಾರೆ. ಶ್ರೀ ತಿರುಪತಿ ಬಾಲಾಜಿ ದೇವಸ್ಥಾನದ ಪಾವಿತ್ರೃ ಹಾಳುಮಾಡಿರುವುದು ಅಕ್ಷಮ್ಯ. ಇದನ್ನು ಹಿಂದು ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದರು.
ದೇವಸ್ಥಾನ ಮಹಾಸಂಘದ ರಾಜ್ಯ ಸದಸ್ಯ ವಿ. ರಾಮಣ್ಣ, ಶ್ರೀ ಗಿಡ್ಡೆಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ನಗರದ ಅಶೋಕ್, ತುಳಜಾಭವಾನಿ ದೇವಸ್ಥಾನ ಸಮಿತಿ ಅಧ್ಯಕ್ಷ ಅರ್ಜುನ್ ರಾವ್,ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಸಮಿತಿ ಉಪಾಧ್ಯಕ್ಷರಾದ ಚಂದ್ರಪ್ಪ, ರಘು, ಶ್ರೀನಿವಾಸ್, ವಿಶ್ವ ಹಿಂದು ಪರಿಷತ್‌ನ ಕುಮಾರಸ್ವಾಮಿ, ಎಸ್.ವಿ.ಕೆ.ಮೂರ್ತಿ, ಹಿಂದು ಜನ ಜಾಗೃತಿ ಸಮಿತಿಯ ಪರಶುರಾಮ, ಈರೇಶ್, ಮಾಲತೇಶ್, ಮೋಹನ್, ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net