

New Year : ಪುಣೆಯ ಒಂದು ಪಬ್ವೊಂದು ಆಯೋಜಿಸಿದ್ದ ಹೊಸ ವರ್ಷದ ಪಾರ್ಟಿಗಾಗಿ ಆಹ್ವಾನಿತರಿಗೆ ಕಾಂಡೋಮ್‌ಗಳು ಮತ್ತು ಓರಲ್ ರೀಹೈಡ್ರೇಶನ್ ಸೊಲ್ಯೂಷನ್ (ORS) ಪ್ಯಾಕ್‌ಗಳನ್ನು ವಿತರಿಸಿ ವಿವಾದವನ್ನು ಹುಟ್ಟುಹಾಕಿದೆ.
ಡಿಸೆಂಬರ್ 31 ರಂದು ಹೈ ಸ್ಪಿರಿಟ್ಸ್ ಪಬ್ ಆಯೋಜಿಸುವ ಪಾರ್ಟಿಯನ್ನು ಆಯೋಜಿಸಿದೆ. ಈ ಪಾರ್ಟಿಯ ಆಮಂತ್ರಣಗಳ ಜೊತೆಗೆ ಕಾಂಡೋಮ್‌ಗಳು ಮತ್ತು ಓರಲ್ ರೀಹೈಡ್ರೇಶನ್ ಸೊಲ್ಯೂಷನ್ (ORS)ಗಳನ್ನು ಅತಿಥಿಗಳಿಗೆ ನೀಡಲಾಗಿದೆ.
ನಾವು ಪಬ್‌ಗಳು ಮತ್ತು ನೈಟ್‌ಲೈಫ್‌ಗೆ ವಿರೋಧಿಗಳಲ್ಲ. ಆದರೆ, ಯುವಕರನ್ನು ಆಕರ್ಷಿಸುವ ಮಾರ್ಕೆಟಿಂಗ್ ತಂತ್ರವು ಪುಣೆ ನಗರದ ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ಪಬ್ ಆಡಳಿತದ ವಿರುದ್ಧ ಪೊಲೀಸರಿಂದ ಕಠಿಣ ಕ್ರಮಕ್ಕೆ ನಾವು ಒತ್ತಾಯಿಸುತ್ತೇವೆ ಎಂದು ಮಹಾರಾಷ್ಟ್ರ ಪ್ರದೇಶ ಯುವ ಕಾಂಗ್ರೆಸ್ ಸದಸ್ಯ ಅಕ್ಷಯ್ ಜೈನ್ ಹೇಳಿದ್ದಾರೆ.
ದೂರನ್ನು ಸ್ವೀಕರಿಸಿದ ಪೊಲೀಸರು ಈ ಬಗ್ಗೆ ವಿಚಾರಣೆ ಮಾಡಿದಾಗ, ಕಾಂಡೋಮ್ಗಳನ್ನು ವಿತರಿಸುವುದು ಅಪರಾಧವಲ್ಲ. ಯುವಕರಲ್ಲಿ ಜಾಗೃತಿ ಮೂಡಿಸುವುದು, ಸುರಕ್ಷತೆಯನ್ನು ಉತ್ತೇಜಿಸುವುದು ಮತ್ತು ಜವಾಬ್ದಾರಿಯುತ ನಡವಳಿಕೆ ಎಂದು ಸಮರ್ಥಿಸಿಕೊಂಡ ಮಾಲೀಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.