ಪುಣೆ ಅತ್ಯಾಚಾರ ಕೇಸ್​; ಘಟನೆ ನಡೆದು 48 ಘಂಟೆಗಳ ಬಳಿಕ ಆರೋಪಿ ಅರೆಸ್ಟ್​!

Pune Accused
Published on

ಪುಣೆ: ನಗರದ ಸ್ವಾರ್ಗೇಟ್​ ಬಸ್​ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ. ಘಟನೆ ನಡೆದ 75 ಘಂಟೆಗಳ ಬಳಿಕ ಆರೋಪಿಯನ್ನು ಶಿರೂರಿನಲ್ಲಿ ಪೊಲೀಸರು ಬಂಧಿಸಿದ್ದು, ಆತನನ್ನು ಪುಣೆಗೆ ಕರೆತರುತ್ತಿದ್ದಾರೆ.

ಆರೋಪಿ ದತ್ತಾತ್ರೇಯ ರಾಮದಾಸ್​ನನ್ನು ಹುಡುಕಲು ಪೊಲೀಸರು 13 ತಂಡಗಳನ್ನು ರಚಿಸಿದ್ದರು. ಆತ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದು, 06ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಪ್ರಕರಣದ ಬಳಿಕ ಆತ ವೇಷ ಬದಲಾಯಿಸಿದ್ದಾನೆ ಎಂಬ ಮಾತು ಕೇಳಿ ಬಂದಿತ್ತಾದರೂ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣದ ಹಿನ್ನೆಲೆ

ಫೆಬ್ರವರಿ 26ರ ಬೆಳಗಿನ ಜಾವ 5.45 ರ ಸುಮಾರಿಗೆ ಪಕ್ಕದ ಸತಾರ ಜಿಲ್ಲೆಯ ಫಾಲ್ಟನ್‌ಗೆ ಹೋಗುವ ಬಸ್‌ಗಾಗಿ ಒಂದು ಪ್ಲಾಟ್‌ಫಾರ್ಮ್‌ನಲ್ಲಿ ಮಹಿಳೆಯೊಬ್ಬರು ಕಾಯುತ್ತಿದ್ದಾಗ, ಒಬ್ಬ ವ್ಯಕ್ತಿ ಹತ್ತಿರ ಬಂದು ಅವಳನ್ನು ಅಕ್ಕಾ ಎಂದು ಕರೆದು ಮಾತನಾಡಲು ಶುರು ಮಾಡಿದ್ದ, ಆರೋಪಿಯು ತಾನು ಬಸ್​ನ ನಿರ್ವಾಹಕ ಎಂದು ಹೇಳಿ ಸತಾರಕ್ಕೆ ಹೋಗುವ ಬಸ್ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿ ಆಕೆಯನ್ನು ಖಾಲಿ ಬಸ್​ನೊಳಗೆ ಆರೋಪಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ.

ಘಟನೆಯು ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ವ್ಯಾಪಕ ಖಂಡನೆಗೆ ಗುರಿಯಾಗಿತ್ತು. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಹೇಳಿಕೆ ಆಧರಿಸಿ ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಆತನ ಸುಳಿವೂ ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನವನ್ನ ಘೋಷಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net