

.ನವದೆಹಲಿ: ಬೇಳೆಕಾಳುಗಳ ಉತ್ಪಾದನೆಯಲ್ಲಿ ಭಾರತವು ಸ್ವಾವಲಂಬನೆ ಸಾಧಿಸಿದ್ದರೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳ ಬೆಲೆಗಳನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರವು, ಪ್ರತಿವರ್ಷ ಬೇಳೆಕಾಳು ಸೇರಿದಂತೆ ಕೆಲವು ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ 2023-24ರಲ್ಲಿ ಬೇಳೆಕಾಳು ಆಮದು ಪ್ರಮಾಣ ದುಪ್ಪಟ್ಟಾಗಿದೆ. ತೊಗರಿ, ಉದ್ದು ಮತ್ತು ಚೆನ್ನಂಗಿ ಬೇಳೆ (ಮಸೂರ್ ದಾಲ್) ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗಿದೆ.
‘2023-24ರಲ್ಲಿ 47.39 ಲಕ್ಷ ಟನ್ ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ದೇಶೀಯ ಬೇಡಿಕೆಯನ್ನು ಪೂರೈಸಲು ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 11.32 ಲಕ್ಷ ಟನ್ ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳಲಾಗಿದೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಖಾತೆಯ ರಾಜ್ಯ ಸಚಿವೆ ನಿಮುಬೇನ್ ಜಯಂತಿಭಾಯ್ ಬುಮ್ಛಾನಿಯಾ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಭಾರತ್ ಬ್ರ್ಯಾಂಡ್ನಡಿ ಕಡಲೆ ಬೇಳೆ
2023ರ ಜುಲೈನಲ್ಲಿ ಭಾರತ್ ಬ್ರಾ್ಯಂಡ್ನಡಿ ಕಡಲೆ ಬೇಳೆ ಮಾರಾಟ ಆರಂಭಿಸಲಾಯಿತು. ಸಬ್ಸಿಡಿ ದರದಲ್ಲಿ ಪ್ರತಿ ಕೆಜಿ ಪ್ಯಾಕೆಟ್ಗೆ 60 ರೂ. ದರ ನಿಗದಿಪಡಿಸಲಾಗಿದೆ. 30 ಕೆಜಿಯ ಪ್ಯಾಕೆಟ್ ಕೆಜಿಗೆ 55 ರೂ.ಗಳಂತೆ ದೊರೆಯಲಿದೆ. ಜುಲೈ 22ರವರೆಗೆ 11.37 ಲಕ್ಷ ಟನ್ಗಳಷ್ಟು ಭಾರತ್ ಕಡಲೆ ಬೇಳೆ ಮಾರಾಟವಾಗಿದೆ ಎಂದು ಕೇಂದ್ರ ತಿಳಿಸಿದೆ.
ಉತ್ಪಾದನೆ ಹೆಚ್ಚಳ
ದೇಶದಲ್ಲಿ 2014-15ರಿಂದ 2023- 24ರವರೆಗೆ ಬೇಳೆಕಾಳು ಉತ್ಪಾದನೆಯಲ್ಲಿ ಶೇಕಡ 43ರಷ್ಟು ಹಾಗೂ ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಶೇ.44ರಷ್ಟು ಹೆಚ್ಚಳ ವಾಗಿದೆ. 2015-16ರಲ್ಲಿ ಒಟ್ಟು 163.23 ಲಕ್ಷ ಟನ್ ಬೇಳೆಕಾಳು ಉತ್ಪಾದನೆಯಾಗಿತ್ತು. 2023-24ರಲ್ಲಿ 244.93 ಲಕ್ಷ ಟನ್ ಉತ್ಪಾದನೆಯಾಗಿದೆ.