

ಬೆಂಗಳೂರು: ದ್ವಿತೀಯ ಪಿಯು 2022ರ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿದ್ದು, ಏ.22ರಿಂದ ಮೇ 18ರವರೆಗೆ ನಡೆಯಲಿದೆ.
ಈ ಹಿಂದೆಯೇ ಅಂತಿಮ ವೇಳಾಪಟ್ಟಿ ಪ್ರಕಟಿಸಿತ್ತು. ಆದರೆ, ಜೆಇಇ, ಕ್ಲಾಟ್, ನವೋದಯ ವಿದ್ಯಾಲಯದ ಪರೀಕ್ಷೆಗಳು ಅದೇ ದಿನಾಂಕಕ್ಕೆ ಎದುರಾಗಿದ್ದರಿಂದ ವೇಳಾಪಟ್ಟಿಯಲ್ಲಿ ಬದಲಾವಣೆ ತಂದಿದೆ.
ಏ.22 : ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏ.23: ಗಣಿತ, ಶಿಕ್ಷಣಶಾಸ್ತ್ರ
ಏ.25: ಅರ್ಥಶಾಸ್ತ್ರ
ಏ.26 : ಹಿಂದುಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ
ಏ.28 : ಕನ್ನಡ, ಅರೇಬಿಕ್
ಮೇ 2: ಭೂಗೋಳಶಾಸ್ತ್ರ, ಜೀವಶಾಸ್ತ್ರ
ಮೇ 4: ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್
ಮೇ 5: ಇಂಗ್ಲಿಷ್
ಮೇ 10: ಇತಿಹಾಸ, ಭೌತಶಾಸ್ತ್ರ
ಮೇ 12: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 14: ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ಮೇ 17: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ
ಮೇ 18: ಹಿಂದಿ