ಸಾಮಾಜಿಕ ಕಾರ್ಯಗಳಿಂದ ಜನಮನ್ನಣೆ

skp
ಕಾಯಕ ಯೋಗಿ ಪ್ರಶಸ್ತಿಗೆ ಆಯ್ಕೆಯಾದ ಬಿ.ಡಿ.ಭೂಕಾಂತ್ ಅವರನ್ನು ಅವರ ನಿವಾಸದಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ವಿ.ಟಿ.ಸ್ವಾಮಿ, ಕೆ.ಎಚ್.ಪುಟ್ಟಪ್ಪ, ವೆಂಕಟೇಶ್, ಎ.ಜಯಪ್ಪ, ನಾಗನಾಯ್ಕ ಇತರರಿದ್ದರು.
Published on

ಶಿಕಾರಿಪುರ: ಮನುಷ್ಯ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದಾಗ ಅವನ ಬದುಕು ಸಮಾಜಮುಖಿ ಮತ್ತು ಜನಸ್ನೇಹಿ ಆಗುತ್ತದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ವಿ.ಟಿ.ಸ್ವಾಮಿ ಹೇಳಿದರು.

ರಾಜ್ಯಮಟ್ಟದ ಕಾಯಕಯೋಗಿ-2025 ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯಿಂದ ಆಯ್ಕೆಯಾದ ಬಿ.ಡಿ.ಭೂಕಾಂತ್ ಅವರ ನಿವಾಸದಲ್ಲಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ಮಾತನಾಡಿದ ಅವರು ಬಿ.ಡಿ.ಭೂಕಾಂತ್ ಸಹಕಾರ ರಂಗದಲ್ಲಿ ಅಪಾರ ಸೇವೆ ಮಾಡಿದ್ದಾರೆ. ಅವರ ಸೇವೆಯನ್ನು ಗಮನಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹತ್ತಾರು ಪ್ರಶಸ್ತಿಗಳು ಅವರಿಗೆ ಬಂದಿವೆ. ಅವರ ಸಾಮಾಜಿಕ ಕಳಕಳಿಯನ್ನು ಗಮನಿಸಿ ಅವರಿಗೆ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ತಾಲೂಕು ಅಧ್ಯಕ್ಷ ಕೆ.ಎಚ್.ಪುಟ್ಟಪ್ಪ ಮಾತನಾಡಿ, ಕೇವಲ ಸಹಕಾರ ಸಂಘದಿಂದ ಹೊರಟ ಅವರ ಪಯಣ ಇಂದು ರಾಷ್ಟ್ರೀಯ ಮಟ್ಟ ತಲುಪಿದೆ. ತಾವು ಬೆಳೆದಿದ್ದಲ್ಲದೆ ನೂರಾರು ಸಹಕಾರಿಗಳನ್ನು ಬೆಳೆಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಮೇ.1ರಂದು 10.30ಕ್ಕೆ ಬಾಗಲಕೋಟೆ ಜಿಲ್ಲೆಯ ರಬಕವಿ ಶ್ರೀ ಶಿವ ದಾಸಿಮಯ್ಯ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಪರಿಷತ್ ಜಿಲ್ಲಾ ಕಾರ್ಯಕಾರಿ ಸಮಿತಿ ವೆಂಕಟೇಶ್, ತಾಲೂಕು ಸಮಿತಿ ಪದಾಧಿಕಾರಿಗಳಾದ ಎ.ಜಯಪ್ಪ, ನಾಗನಾಯ್ಕ, ಪ್ರಕಾಶ್, ರಾಜಶೇಖರ್, ಪರಮೇಶಪ್ಪ, ಜಯಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net