

ಕೋಲಾರ: ನಗರದ ವಿವಿಧ ಇಲಾಖೆಗಳಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಸೋಮವಾರ ಭೇಟಿ ನೀಡಿ ಅವ್ಯವಸ್ಥೆ ಕಂಡು, ಅಧಿಕಾರಿ, ಸಿಬ್ಬಂದಿ ವಿರುದ್ಧ ಕೆಂಡಾಮಂಡಲರಾದರು.
ಬೆಳಗ್ಗೆಯಿಂದ ಸಂಜೆವರೆಗೆ ಜಿಲ್ಲಾ ಕೇಂದ್ರದ ಪ್ರಮುಖ ಸರ್ಕಾರಿ ಕಚೇರಿಗಳಲ್ಲೇ ಬೀಡು ಬಿಟ್ಟ ಉಪ ಲೋಕಾಯುಕ್ತರ ತಂಡ ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡದ, ಅನಗತ್ಯವಾಗಿ ಕಚೇರಿಗಳಿಗೆ ಅಲೆಯುವಂತೆ ಮಾಡುತ್ತಿರುವ ಅಽಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ಎಪಿಎಂಸಿ ಮಾರುಕಟ್ಟೆ, ಕಾರಾಗೃಹ, ನಗರಸಭೆ, ತಾಲೂಕು ಕಚೇರಿ, ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ಸರ್ವೇ ಇಲಾಖೆ, ಸಬ್ ರಿಜಿಸ್ಟಾçರ್ ಕಚೇರಿ, ಉಪ ವಿಭಾಗಾಽಕಾರಿ ಕಚೇರಿ, ಜಿಲ್ಲಾ ಕೈಗಾರಿಕೆ ಇಲಾಖೆ ಹಾಗೂ ಆರ್‌ಟಿಒ ಕಚೇರಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.
ಕಚೇರಿಗೆ ಭೇಟಿ ನೀಡಿದ ತಕ್ಷಣ ಅಽಕಾರಿ, ಸಿಬ್ಬಂದಿ ಮೊಬೈಲ್ ವಶಪಡಿಸಿಕೊಂಡು ಫೋನ್ ಪೇ, ಗೂಗಲ್ ಪೇ ಸೇರಿ ಬ್ಯಾಂಕ್ ವಹಿವಾಟು, ಹಾಜರಾತಿ ಪರಿಶೀಲಿಸಿದರು.
ಜನಪ್ರತಿನಿಽಗಳು, ಅಧಿಕಾರಿಗಳು ಇರೊದು ಜನರ ಕೆಲಸ ಮಾಡಲು. ಆಸಕ್ತಿ ಇದ್ದರೆ ಜಿಲ್ಲೆಯಲ್ಲಿ ಇರಿ, ಇಲ್ಲದಿದ್ದರೆ ಬಿಟ್ಟು ಹೋಗಿ ಎಂದ ಅವರು, ಬರುವ ಸಂಬAಳದಿಂದ ಹೊಟ್ಟೆಗೆ ಅನ್ನ ತಿನ್ನಿ, ಜನರಿಂದ ದುಡ್ಡು ವಸೂಲಿ ಮಾಡಿ ವಿಷ ತಿನ್ನಬೇಡಿ ಎಂದು ನಾ.ವೀರಪ್ಪ ಹರಿಹಾಯ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ, ಜಿಲ್ಲಾಽಕಾರಿ ಡಾ.ಎಂ.ಆರ್.ರವಿ, ಜಿ.ಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಅಧಿಕಾರಿ ಅರವಿಂದ್, ಎಸ್ಪಿ ಧನಂಜಯ್, ಇನ್‌ಸ್ಪೆಕ್ಟರ್ ಯಶವಂತ್ ಕುಮಾರ್, ಆಂಜಿನಪ್ಪ, ರೇಣುಕಾ ಇದ್ದರು.
* ತಪ್ಪು ಮಾಡಿದರ ವಿರುದ್ಧ ಕ್ರಮ ಏನು?
ನಗರಸಭೆಗೆ ಭೇಟಿ ನೀಡಿದಾಗ ಆವರಣದಲ್ಲಿದ್ದ ಸಾರ್ವಜನಿಕರೊಂದಿಗೆ ಚರ್ಚಿಸಿದರು. ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿ 4-5 ದಿನ ಕಳೆದರೂ ಪ್ರಮಾಣ ಪತ್ರ ನೀಡಿಲ್ಲ ಎಂದು ಕೆಜಿಎಫ್ ನಿವಾಸಿ ಉಪ ಲೋಕಾಯುಕ್ತ ಬಿ.ವೀರಪ್ಪ ಗಮನಕ್ಕೆ ತಂದರು. ಬಳಿಕ ಕಂದಾಯ ವಿಭಾಗ, ಆರೋಗ್ಯ ವಿಭಾಗ, ಇಂಜಿನಿಯರ್ ವಿಭಾಗದಲ್ಲಿ ಕಡತ ಪರಿಶೀಲಿಸಿದರು. ಇ ಖಾತೆ ವಿತರಿಸಲು ಕೆಲವರಿಂದ ಅರ್ಜಿ ಸ್ವೀಕರಿಸದಿರುವುದು ಕಂದಾಯ ವಿಭಾಗದಲ್ಲಿ ಕಂಡು ಬಂದಿದ್ದರಿAದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರಸಭೆ ವ್ಯವಸ್ಥೆಯೂ ಅಧ್ವಾನವಾಗಿದೆ. ಕರ್ತವ್ಯ ಲೋಪ ಮಾಡಿರುವುದು ಕಚೇರಿಯಲ್ಲಿನ ಹಕ್ಕಬುಕ್ಕರೆ ತಾನೇ, ಅವರ ವಿರುದ್ಧ ಕ್ರಮಕೈಗೊಂಡಿದೀರಾ ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರು ಕೆಂದಟ್ಟಿ ಸಮೀಪ ಕಸಕ್ಕೆ ಬೆಂಕಿ ಇಟ್ಟಿರುವ ಬಗ್ಗೆ ಗಮನಕ್ಕೆ ತಂದಾಗ, ತೀವ್ರ ತರಾಟೆ ತೆಗೆದುಕೊಂಡರು.
* ನಿಯಮ ಉಲ್ಲಂಘಿಸಿ ಲೈಸನ್ಸ್ ವಿತರಣೆ
ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಿಂದ ನಿಯಮ ಉಲ್ಲಂಘಿಸಿ ಬಾರ್‌ಗಳಿಗೆ ಲೈಸನ್ಸ್ ನೀಡಲಾಗಿದೆ. ಈ ಬಗ್ಗೆ ಏನು ಕ್ರಮ ಆಗಿದೆ ಎಂದು ವೀರಪ್ಪ ಅಬಕಾರಿ ಅಧಿಕಾರಿಗಳಿಗೆ ಪ್ರಶ್ನಿಸಿದರು. ಮೂರು ವರ್ಷಗಳಿಂದ ಎಷ್ಟು ಬಾರ್‌ಗಳಿಗೆ ಪರವಾನಗಿ ನೀಡಲಾಗಿದೆ ಎಂಬುದರ ಬಗ್ಗೆ ಆರ್‌ಸಿ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಅಬಕಾರಿ ಡಿಸಿ ಸೈಯದ್ ಅಜ್ಮತ್ ಆಫ್ರೀನ್ ಮಾಹಿತಿ ನೀಡಿದರು. ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿ ಸಮೀಪ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಿದ್ದು ಹತ್ತಿರ 2 ಬಾರ್‌ಗಳಿಗೆ ಅನುಮತಿ ಕೊಡುವ ಅವಶ್ಯಕತೆಯೇನಿತ್ತು ಎಂದು ತರಾಟೆಗೆ ತೆಗೆದುಕೊಂಡರು.
* ಶಿರಸ್ತೇದಾರ್ ಖಾತೆಗೆ ಲಕ್ಷ ಲಕ್ಷ ಜಮಾ!
ಕೋಲಾರ ತಾಲೂಕು ಕಚೇರಿಯ ಶಿರಸ್ತೇದಾರ್ ಭಾಸ್ಕರ್ ಖಾತೆಗೆ ಲಕ್ಷ ಗಟ್ಟಲೇ ಹಣ ಜಮೆ ಆಗಿರುವುದನ್ನು ಕಂಡು ಇಷ್ಟೊಂದು ಸಂಪಾದನೆ ಎಲ್ಲಿಂದ ಬಂತು ಎಂದು ನಾ.ವೀರಪ್ಪ ಪ್ರಶ್ನಿಸಿದರು. ಕೆಲ ಸ್ನೇಹಿತರು ಕ್ಯಾಷ್ ತೆಗೆದುಕೊಂಡು ಫೋನ್ ಪೇ ಮಾಡಿದ್ದಾರೆ ಎಂದು ಭಾಸ್ಕರ್ ತಿಳಿಸಿದರು. ಆದರೆ ಇಷ್ಟೊಂದು ಹಣ ಯಾರಯ್ಯ ಕೊಡುತ್ತಾರೆ ಎಂದು ಪ್ರಶ್ನಿಸಿದಾಗ ಉತ್ತರಿಸಲು ತಡಬಡಾಯಿಸಿದರು.
* ಅಂತಾರಾಜ್ಯ ವಾಹನಗಳಿಗೆ ನೋಂದಣಿಗೆ ತರಾಟೆ
ದ್ವಿಚಕ್ರ ವಾಹನ, ನಾಲ್ಕು ಚಕ್ರ ವಾಹನ, ಟಿಪ್ಪರ್, ಗೂಡ್ಸ್ ಲಾರಿಗಳು ಎಷ್ಟು ಇವೆ, ಎಫ್‌ಸಿ, ವಿಮೆ ಲ್ಯಾಪ್ಸ್ ಸೇರಿ ಎಲ್ಲವೂ ಕೂಡಲೇ ಮಾಹಿತಿ ನೀಡಿ ಎಂದು ಆರ್‌ಟಿಒ ಅಧಿಕಾರಿಗಳಿಗೆ ಬಿ.ವೀರಪ್ಪ ಸೂಚಿಸಿದರು. ಜಿಲ್ಲೆಯಲ್ಲಿ ೨೦೦ ಶಾಲಾ ಬಸ್ ಪೈಕಿ 15 ಬಸ್‌ಗಳಿಗೆ ಎಫ್‌ಸಿ ಇಲ್ಲದೆ ಇರುವುದು ಪತ್ತೆಯಾಗಿದ್ದು, 4 ಬಸ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಆರ್‌ಟಿಒ ಅಧಿಕಾರಿ ವೇಣುಗೋಪಾಲರೆಡ್ಡಿ ತಿಳಿಸಿದರು. ಹೊರ ರಾಜ್ಯದ ೩೦ ಖಾಸಗಿ ಬಸ್ ನೋಂದಣಿಯಾಗಿವೆ. ಹೊರರಾಜ್ಯದ ಬಸ್‌ಗಳು ಚೆಕ್ ಪೋಸ್ಟ್ನಲ್ಲೇ ತೆರಿಗೆ ಕಟ್ಟಿಕೊಂಡು ರಾಜಾರೋಷವಾಗಿ ಓಡಾಡುತ್ತಾರೆ. ಶಾಲಾ ಕಾಲೇಜು ವಾಹನಗಳಿಗೆ ದಾಖಲೆ ಇಲ್ಲದಿದ್ದರೆ ಅನಾಹುತ ಸಂಭವಿಸಿದಾಗ ಹೊಣೆ ಯಾರು, ಪರಿಹಾರ ಯಾರು ನೀಡುತ್ತಾರೆ ಎಂದು ಉಪಲೋಕಾಯುಕ್ತರು ಪ್ರಶ್ನಿಸಿದರು.
* ಸ್ವಯಂ ದೂರು ದಾಖಲಿಸಲು ಸೂಚನೆ
ರೈತರಿಂದ ಕಾನೂನು ಬಾಹಿರವಾಗಿ ಕಮಿಷನ್ ಪಡೆಯುವುದು, 100 ಕೆಜಿಗೆ 5 ಕೆಜಿ ಕಡಿತಗೊಳಿಸುವ ಮೂಲಕ ಮಂಡಿ ಮಾಲೀಕರು ವಂಚಿಸುತ್ತಿರುವುದು ಬಯಲಾಗಿದ್ದು, ರೈತರ ನೆರವಿಗೆ ಧಾವಿಸದ ಎಪಿಎಂಸಿ ಅಽಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲು ಉಪಲೋಕಾಯುಕ್ತ ಬಿ.ವೀರಪ್ಪ ಸೂಚನೆ ನೀಡಿದರು.
ರೈತರಿಗೆ ಮಂಡಿ ಮಾಲೀಕರಿಂದ ಮೋಸ ಆಗುವುದು ಕಂಡುಬAತು. ಈ ವೇಳೆ ಕೆರಳಿದ ವೀರಪ್ಪ ಎಪಿಎಂಸಿ ಅಽಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಾರುಕಟ್ಟೆಯಲ್ಲಿರುವ ತಕ್ಕಡಿಗಳು ತೂಕದಲ್ಲಿ ಅಲ್ಪ ವ್ಯತ್ಯಾಸವಿರುವ ವಿಷಯ ಗಮನಿಸಿದರು. ರೈತರಿಗೆ ಅನ್ಯಾಯವಾಗುವುದನ್ನು ಸಹಿಸುವುದಿಲ್ಲ, ಇದು ಮುಂದುವರಿದರೆ ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.
* ಡಿಐಸಿ ಕಚೇರಿ ಖಾಲಿಖಾಲಿ...!
ಜಿಲ್ಲಾ ಕೈಗಾರಿಕಾ ಕೇಂದ್ರ ವಾಣಿಜ್ಯ ಇಲಾಖೆಗೆ (ಡಿಐಸಿ) ಲೋಕಾಯುಕ್ತರು ಭೇಟಿ ನೀಡಿದಾಗ ಜಂಟಿ ನಿರ್ದೇಶಕ ಹೊರತುಪಡಿಸಿ, ಉಪ ನಿರ್ದೇಶಕ ರವಿಚಂದ್ರ ಸೇರಿ ಬೇರೆ ಯಾವ ಅಧಿಕಾರಿಯೂ ಕಚೇರಿಗಳಲ್ಲಿ ಇರಲಿಲ್ಲ. ಇಲ್ಲಿ ಜನರಿಗೆ ತಲುಪಿಸಬೇಕಾಗಿರುವ ಸೌಲಭ್ಯಗಳ ದುರುಪಯೋಗ ಆಗಿದೆ, ಗೈರಾಗುವ ಅಽಕಾರಿ, ಸಿಬ್ಬಂದಿಯ ಮಾಹಿತಿ ಕೊಡಬೇಕು ಎಂದು ವೀರಪ್ಪ ಎಚ್ಚರಿಕೆ ನೀಡಿದರು.
* ಅವಧಿ ಮೀರಿದ ಇಂಜಕ್ಷನ್ ಪತ್ತೆ
ಎಸ್‌ಎನ್‌ಆರ್ ಆಸ್ಪತ್ರೆಗೆ 5ನೇ ಬಾರಿ ಭೇಟಿ ನೀಡುತ್ತಿದ್ದು, ವ್ಯವಸ್ಥೆ ಬದಲಾಗಿಲ್ಲ, ನಾವು ಬರೊದು ತಿಳಿದು ಸೆಂಟ್ ಹೊಡೆದಿದ್ದಾರೆ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಬೇಸರಿಸಿದರು. ಮಹಿಳಾ ವಾರ್ಡ್ ಮತ್ತು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅವಧಿ ಮುಗಿದಿರುವ ಇಂಜಕ್ಷನ್ ಪತ್ತೆಯಾಯಿತು. ಇದೇನು ಎಂದು ಸಿಬ್ಬಂದಿಯನ್ನು ಕೇಳಿದಾಗ, ರೋಗಿಗೆ ಕೊಟ್ಟಿಲ್ಲ ಎಂದು ಶುಶ್ರೂಷಕಿಯರು ತಿಳಿಸಿದರು. ಇಲ್ಲಿಗೆ ಏಕೆ ತೆಗೆದುಕೊಂಡು ಬಂದಿದ್ದೀರಾ, ಏನಿದು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಗದೀಶ್‌ರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಗದೀಶ್ ಇಲ್ಲ ಸರ್, ಸರಿ ಮಾಡುತ್ತೇನೆ ಎಂದು ಉತ್ತರಿಸಿದರು. ಇದಕ್ಕೆ ಗರಂ ಆದ ವೀರಪ್ಪ ಸರಿಮಾಡೊದಲ್ಲ, ತಪ್ಪು ಆಗದಂತೆ ಎಚ್ಚರವಹಿಸಬೇಕು, ಸುಮಾರು ವರ್ಷಗಳಿಂದ ಇಲ್ಲೆ ಠಿಕಾಣಿ ಹೂಡಿರುವವರನ್ನು ಬೇರೆಗೆ ಕಡೆಗೆ ವರ್ಗಾಯಿಸಿ ಎಂದು ತಾಕೀತು ಮಾಡಿದರು.