

ಕೋಲಾರ: ಬಡಾವಣೆಯಲ್ಲಿ ಹಲವು ಸಮಸ್ಯೆಗಳು ಎದುರಾಗಿದ್ದು, ಬಗೆಹರಿಸುವಂತೆ ಗಮನಕ್ಕೆ ತಂದರೂ ರ್ನಿಲಕ್ಷ$್ಯವಹಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳ ಕ್ರಮ ಖಂಡಿಸಿ, ನಗರದ ಚೌಡೇಶ್ವರಿ ನಗರ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಟೇಕಲ್ ಮೇಲ್ಸೇತುವೆ ಸಮೀಪ ಜಮಾಯಿಸಿದ ನಿವಾಸಿಗಳು ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು. ನಗರಸಭೆ ಅಧಿಕಾರಿಗಳು, ಸ್ಥಳಿಯ ಸದಸ್ಯ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಸುಮಾರು ಅರ್ಧ ತಾಸಿಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಅಧಿಕಾರಿಗಳು ಬರಲಿದ್ದಾರೆ, ಪ್ರತಿಭಟನೆ ಕೈ ಬಿಟ್ಟು ಸಂಚಾರಕ್ಕೆ ಅನುವು ಮಾಡಿಕೊಡಲು ಪೊಲೀಸರು ಮನವೊಲಿಸಿದರು. ಇದಕ್ಕೆ ಒಪ್ಪಿದ ಪ್ರತಿಭಟನಾಕಾರರು ಕೆಲ ನಿಮಿಷಗಳ ಕಾಲ ಪ್ರತಿಭಟನೆ ಕೈಬಿಟ್ಟರು. ಸ್ಥಳಕ್ಕೆ ಅಧಿಕಾರಿಗಳು ಬರುವುದು ತಡವಾದ ಕಾರಣ ಮತ್ತೆ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದರು.
ಚೌಡೇಶ್ವರಿ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬಂದ ನಗರಸಭೆಯ ಆರೋಗ್ಯ ನಿರೀಕ್ಷ ನವಾಜ್ ಪರಿಸ್ಥಿತಿ ಗಮನಿಸಿ ಸ್ಥಳದಿಂದ ಕಾಲ್ಕಿತ್ತಲು ಯತ್ನಿಸಿದ. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಅಧಿಕಾರಿಗಳನ್ನು ಬರ ಹೇಳುವಂತೆ ತಾಕೀತು ಮಾಡಿದರು. ಆಗ ತಡವಾಗಿ ಬಂದ ಅಧ್ಯೆ, ಪೌರಾಯುಕ್ತ ಸಮಸ್ಯೆ ಆಲಿಸಿದರು.
ಬಡಾವಣೆ ಆಸುಪಾಸಿನಲ್ಲಿ ಬೆಂಗಳೂರು-ಚೆನ್ನೈ ಹೆದ್ದಾರಿ ನಿರ್ಮಾಣ ಮಾಡಲಾಗಿದ್ದು, ರಾಜಕಾಲುವೆಗಳು ಮುಚ್ಚಿ ಹೋಗಿವೆ. ಯುಜಿಡಿ ಸಹ ಹದಗೆಟ್ಟಿದ್ದು ಸರಿಪಡಿಸಬೇಕು ಎಂದು ಹಲವು ಬಾರಿ ನಗರಸಭೆಗೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಭರವಸೆ ನೀಡಿದರೇ ಹೊರತು ಪರಿಹಾರ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿ ಪಕ್ಕದಲ್ಲಿ ಚರಂಡಿ ವ್ಯವಸ್ಥೆಯಿಲ್ಲ, ನೀರು ನೇರವಾಗಿ ಬಡಾವಣೆಯೊಳಗೆ ಪ್ರವೇಶಿಸಿ ಮನೆಗಳೊಳಗೆ ನುಗ್ಗುತ್ತದೆ. ಎಸ್ಎಲ್ವಿ ಕಾರ್ ಸರ್ವೀಸ್ ಸ್ಟೇಷನ್ನಿಂದ ಆರ್ವಿ ಶಾಲೆ ಮುಂಭಾಗದ ಎದುರಿನಿಂದ ರಾಜಕಾಲುವೆ ತನಕ ಚರಂಡಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಾ.ಡಿ.ಕೆ.ರಮೇಶ್, ಮಂಜುನಾಥ್, ಮನೋಹರ್, ರಮೇಶ್, ಹರೀಶ್, ಸುಶೀಲಮ್ಮ ಮುಂತಾದವರು ಇದ್ದರು.
* ರಿಪೇರಿಗೂ ದುಡ್ಡಿಲ್ಲ
ಚೌಡೇಶ್ವರಿ ನಗರವು 14ನೇ ವಾರ್ಡಿಗೆ ಸೇರಿದ್ದು, ಸಣ್ಣ ಪ್ರಮಾಣದಲ್ಲಿ ಮಳೆ ಬಂದರೂ ಚರಂಡಿ, ಯುಜಿಡಿ ನೀರು ಮನೆಗಳೊಳಗೆ ನುಗ್ಗುತ್ತದೆ. ಈ ಸಮಸ್ಯೆ ಬಗೆಹರಿಸಬೇಕು ಎಂದು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಆಕ್ರೋಶ ವ್ಯಕ್ತಪಡಿಸಿದರು. ನಗರದ ಬಹುತೇಕ ರಸ್ತೆಗಳು, ಚರಂಡಿ, ಯುಜಿಡಿ ಕೆಟ್ಟು ಹೋಗಿದೆ, ಇದರ ರಿಪೇರಿಗೂ ದುಡ್ಡಿಲ್ಲ. ಜನಪ್ರತಿನಿಧಿಗಳು ಮಾತ್ರ ಅಭಿವೃದ್ಧಿಗೆ ಕೋಟಿ ಕೋಟಿ ದುಡ್ಡು ತಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಕೆಲಸ ಮಾತ್ರ ಶೂನ್ಯ, ಕೇವಲ ಭರವಸೆ ಕೊಟ್ಟೇ ಜನರನ್ನು ಮರಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
* ಉಡಾಫೆಯಾಗಿ ಮಾತಾಡಿದ ನವಾಜ್ಗೆ ತರಾಟೆ
ಪೌರಾಯುಕ್ತ ನವೀನ್ಚಂದ್ರ, ಅಧ್ಯೆ ಲಕ್ಷ್ಮಿದೇವಮ್ಮ ಆಗಮಿಸದ ವೇಳೆ ಪ್ರತಿಭಟನಾ ನಿರತರು ಸಮಸ್ಯೆ ಹೇಳುತ್ತಿದ್ದಾಗ ಮಧ್ಯೆ ಪ್ರವೇಶಿಸಿದ ಆರೋಗ್ಯ ನಿರೀಕ್ಷಕ ನವಾಜ್ ಈ ಭಾಗವು ನಗರಸಭೆ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಉಡಾೆಯಾಗಿ ಮಾತನಾಡಿದರು. ಇದರಿಂದ ಗರಂ ಆದ ನಿವಾಸಿಗಳು ನಗರಸಭೆ ಸದಸ್ಯರಿಗೆ 20 ವರ್ಷದಿಂದ ಮತ ಚಲಾವಣೆ ಮಾಡುತ್ತಿದ್ದೇವೆ. ಸಮಸ್ಯೆ ಬಗೆಹರಿಸಲು ಆಗದಿದ್ದರೆ ಬಿಡಿ, ನಮ್ಮ ಭಾದೆ ನಾವು ನೋಡಿಕೊಳ್ಳುತ್ತೇವೆ. ಇಲ್ಲವಾದರೆ ಗ್ರಾಮ ಪಂಚಾಯಿತಿಗೆ ಸೇರಿದೆ ಎಂದು ಬರವಣಿಕೆಯಲ್ಲಿ ಕೊಡಿ ಎಂದು ತರಾಟೆಗೆ ತೆಗೆದುಕೊಂಡರು. ಮಧ್ಯ ಪ್ರವೇಶಿಸಿದ ಪೌರಾಯುಕ್ತ ನವೀನ್ ಚಂದ್ರ ಅವರು ಸ್ಥಳಕ್ಕೆ ಆಗಮಿಸಿದ್ದೇವೆ, ಸಮಸ್ಯೆ ಏನು ಅಂತ ಹೇಳಿ ನಾವು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು. ಆಗ ಸ್ಥಳಿಯರು ಅಧ್ಯೆ ಲಕ್ಷಿ$್ಮದೇವಮ್ಮ, ಪೌರಾಯುಕ್ತರ ನವೀನ್ ಚಂದ್ರ ಅವರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಸಮಸ್ಯೆ ತೋರಿಸಿದರು. ಪರಿಶೀಲಿಸಿದ ಅಧ್ಯೆ ಲಕ್ಷ್ಮಿದೇವಮ್ಮ ಆಧ್ಯತೆ ಮೇರೆಗೆ ಬಗೆಹರಿಸಿ ಕೊಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.