

ರಾಣೆಬೆನ್ನೂರ: ಪಿಎಸ್ಎಸ್ಐ ಭಾರತ ಮತ್ತು ಕರ್ನಾಟಕದ, ಬೆಂಗಳೂರಿನ ಅಖಂಡ ಕರ್ನಾಟಕ ಪಿರಮಿಡ್ ಧ್ಯಾನ ಮಾಸ್ಟರ್ ಹಾಗೂ ವಿವಿಧ ಸಂ&ಸಂಸ್ಥೆಗಳ ವತಿಯಿಂದ ಇಲ್ಲಿಯ ವಿದ್ಯಾನಗರದ ಅಂಬೇಡ್ಕರ್ ಸ್ಕೂಲ್ ಹತ್ತಿರದ ಶ್ರೀಗುರು ರಾವೇಂದ್ರ ಪಿರಮಿಡ್ ಧ್ಯಾನ ಮಂದಿರದ ಪ್ರಥಮ ವಾಷಿರ್ಕೋತ್ಸವ ನಿಮಿತ್ತ ನ. 2ರಂದು ಸಸ್ಯಹಾರ ಜನಜಾಗೃತಿ ಜಾಥಾ, ಉಚಿತ ಧ್ಯಾನ ಪ್ರಚಾರ ಸಮಾರಂಭ ನಗರದಲ್ಲಿ ಜರುಗಲಿದೆ.
ಅಂದು ಬೆಳಗ್ಗೆ 8 ಗಂಟೆಗೆ ಇಲ್ಲಿಯ ವಿದ್ಯಾನಗರದ ಶ್ರೀಗುರು ರಾವೇಂದ್ರ ಪಿರಮಿಡ್ ಧ್ಯಾನ ಮಂದಿರದಿಂದ ಸಸ್ಯಹಾರ ಜಾಥಾಗೆ ಶಾಸಕ ಪ್ರಕಾಶ ಕೋಳಿವಾಡ ಚಾಲನೆ ನೀಡುವರು. ಇಲ್ಲಿಂದ ಆರಂಭಗೊಂಡ ಜಾಥಾ ಬಸ್ ನಿಲ್ದಾಣ ವೃತ್ತ, ಪೋಸ್ಟ್ ವೃತ್ತ, ಎಂ.ಜಿ. ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಾಪಸ್ ಧ್ಯಾನ ಮಂದಿರಕ್ಕೆ ಬಂದು ತಲುಪುವುದು.
ಮಧ್ಯಾಹ್ನ 12.15ಕ್ಕೆ ಶ್ರೀಗುರು ರಾವೇಂದ್ರ ಪಿರಮಿಡ್ ಧ್ಯಾನ ಮಂದಿರದ ಪ್ರಥಮ ವಾಷಿರ್ಕೋತ್ಸವದ ಸಭಾ ಕಾರ್ಯಕ್ರಮ ಜರುಗುವುದು. ಸಾತೇನಹಳ್ಳಿ ಶಿವಾಲಿ ಬಸವೇಶ್ವರ ಮೂಕಪ್ಪ ಶಿವಯೋಗಿಗಳು, ಹಿಮಾಲಯದ ಸಂತ ಸದಾನಂದ ಗಿರಿ ಸ್ವಾಮೀಜಿ, ಮಡ್ಲೂರಿನ ಮರುಘಾಮಠದ ಮುರು ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಂಗಳೂರಿನ ಬ್ರಹ್ಮಷಿರ್ ಪ್ರೇಮ್ನಾಥ ಗುಪ್ತ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ಕೆಡಿಪಿಪಿ ಅಧ್ಯಕ್ಷ ಟಿ. ಹರಿಶಂಕರ, ವೈದ್ಯ ಡಾ. ಗೌತಮ ಲೋಡಾಯಿ, ಬೆಂಗಳೂರಿನ ಮಾಸ್ಟರ್ ಆರತಿ ಮುತ್ತುರಾಜ, ಅಥಣಿ ಮಾಸ್ಟರ್ ವಿಶಾಲಾ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಮಾರಂಭದಲ್ಲಿ ಪಾಲ್ಗೊಳ್ಳುವವರಿಗೆ ಉಚಿತವಾಗಿ ಧ್ಯಾನದ ಕುರಿತು ಮಾಹಿತಿ ನೀಡಲಾಗುವುದು. ಸಮಾರಂಭದ ಬಳಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ಧ್ಯಾನ ಮಂದಿರದ ನಿವೃತ್ತ ಶಿಕ್ಷಕ ಮೃತ್ಯುಂಜಯ ಗುಳೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.