

ಶಿವಮೊಗ್ಗ: ಸಂವಿಧಾನದ ಅಮೃತ ಮಹೋತ್ಸವ ಹಿನ್ನೆಲೆ ಪೊಲೀಸ್ ಪೇದೆ ಸತೀಶ್ ಅವರು ಬೈಕ್ ರೈಡ್ ಮೂಲಕ ಸಂವಿಧಾನದ ಕುರಿತು ಜನಜಾಗೃತಿಗೆ ಮುಂದಾಗಿದ್ದಾರೆ.
ಶಿವಮೊಗ್ಗದ ಮಹಿಳಾ ಠಾಣೆಯಲ್ಲಿ ಜೀಪ್ ಚಾಲಕನಾಗಿರುವ ಸತೀಶ್ ದೇಶದ 10 ರಾಜ್ಯಗಳಿಗೆ ಬೈಕ್ ರೈಡ್ ಹೊರಟಿದ್ದು ಗುರುವಾರದಿಂದ 4 ಸಾವಿರ ಕಿ.ಮೀ. ಪರ್ಯಟನೆ ಮಾಡಲಿದ್ದಾರೆ. ಮಾನವ ಕಳ್ಳ ಸಾಗಣೆ, ಪೋಕ್ಸೋ ಪ್ರಕರಣ, ನಾಗರಿಕ ಕರ್ತವ್ಯ ಮತ್ತು ಹಕ್ಕು, ಸಂಚಾರ ನಿಯಮ ಪಾಲನೆ ಸೇರಿ ನಾನಾ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಉದ್ದೇಶವಾಗಿದೆ.
ಶಾಲೆಗಳ ಬಳಿ, ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ಮತ್ತು ಸ್ಟಿಕ್ಕರ್ ಅಂಟಿಸಲಿದ್ದು 15 ದಿನ ರೈಡಿಂಗ್‌ಗೆ ಪೊಲೀಸ್ ಇಲಾಖೆಯಿಂದ ಅನುಮತಿ ಕೂಡ ಸಿಕ್ಕಿದೆ.