ಪಿಯು ರಿಸಲ್ಟ್​ ಜಿಲ್ಲೆಗೆ ಶೇ.74.45 ಲಿತಾಂಶ

klr pu result,webp
ಸರ್ಕಾರಿ ಜೂನಿಯರ್​ ಕಾಲೇಜಿನ ವಿದ್ಯಾರ್ಥಿನಿ ಧೈರ್ಯಲಕ್ಷಿ$್ಮ ಅವರನ್ನು ಪ್ರಾಂಶುಪಾಲ ಬಾಲಕೃಷ್ಣ ಅಭಿನಂದಿಸಿದರು.
Published on

ಕೋಲಾರ: ಪ್ರಸಕ್ತ ಸಾಲಿನ ದ್ವಿತಿಯ ಪಿಯುಸಿ ಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯು ಈ ಬಾರಿ ಶೇ.72.45ರಷ್ಟು ಲಿತಾಂಶ ಸಾಧಿಸಿ, ರಾಜ್ಯಮಟ್ಟದಲ್ಲಿ 16ನೇ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿದೆ.

ಪರೀೆಗೆ ಒಟ್ಟು 13,271 ಮಂದಿ ಹೊಸ ವಿದ್ಯಾರ್ಥಿಗಳ ಪೈಕಿ 9,615 ಮಂದಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನಗರದ ಮಹಿಳಾ ಸಮಾಜ ಕಾಲೇಜಿನ ಎಚ್​.ಬಿ.ಭಾರ್ಗವಿ, ವಿಜ್ಞಾನ ವಿಭಾಗದಲ್ಲಿ ಎಸ್​ಡಿಸಿ ಕಾಲೇಜಿನ ಆರ್​.ಸಿರಿ ಹಾಗೂ ಕಲಾ ವಿಭಾಗದಲ್ಲಿ ನಗರ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಧೈರ್ಯಲಕ್ಷಿ$್ಮ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 5,767 ಮಂದಿ ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 4,336 ಮಂದಿ ಉತ್ತೀರ್ಣರಾಗುವ ಮೂಲಕ ಶೇ.78.22 ಫಲಿತಾಂಶ ಬಂದಿದೆ. ಇನ್ನು ಕಲಾ ವಿಭಾಗದಲ್ಲಿ 1,279 ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 688 ಮಂದಿ ತೇರ್ಗಡೆಯಾಗಿ ಶೇ.53.79 ಫಲಿತಾಂಶ ಲಭಿಸಿದೆ.

ವಾಣಿಜ್ಯ ವಿಭಾಗದಲ್ಲಿ 6,449 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 4,591 ಮಂದಿ ಉತ್ತೀರ್ಣರಾಗಿ ಶೇ.71.19 ಫಲಿತಾಂಶ ಬಂದಿದೆ.

ಕಳೆದ ಬಾರಿ ಶೇ.86.12 ಫಲಿತಾಂಶದೊಂದಿಗೆ 12ನೇ ಸ್ಥಾನದಲ್ಲಿದ್ದ ಕೋಲಾರ ಜಿಲ್ಲೆ ಈ ಬಾರಿ ಶೇ.72.45 ಫಲಿತಾಂಶದೊಂದಿಗೆ 16ನೇ ಸ್ಥಾನಕ್ಕೆ ಕುಸಿದಿದೆ.

ರಾಜ್ಯಕ್ಕೆ 3ನೇ ರ್ಯಾಂಕ್​

ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಟಾಫರ್​ ಆಗಿರುವ ಮಹಿಳಾ ಸಮಾಜ ಕಾಲೇಜಿನ ಎಚ್​.ಬಿ.ಭಾರ್ಗವಿ 597 ಅಂಕಗಳೊಂದಿಗೆ ರಾಜ್ಯಕ್ಕೆ 3ನೇ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಎಸ್​ಡಿಸಿ ಕಾಲೇಜಿನ ಹಾಶೀಕಾ ಲಾನೂರು 595 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರ್ಯಾಂಕ್​ ಹಾಗೂ ಜಿಲ್ಲೆಗೆ ಎರಡನೇಯವರಾಗಿ ಹೊರಹೊಮ್ಮಿದ್ದಾರೆ. ಪುರೋಹಿತ್ಯ ಮಾಡುವ ಶಾಸ್ತ್ರಿಗಳ ಮಗಳು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೆ ಸ್ಥಾನ ಬರುವ ಮೂಲಕ ಚಿನ್ನದ ನಾಡಿಗೆ ಕೀರ್ತಿ ತಂದುಕೊಟ್ಟಿದ್ದಾರೆ.

ತಾಲೂಕಿನ ಹುದುಕುಳ ಗ್ರಾಮದ ಭಾಸ್ಕರ್​ ಶಾಸ್ತ್ರಿ ಹಾಗೂ ಸಂಗೀತ ದಂಪತಿಗಳ ಪುತ್ರಿ ಭಾರ್ಗವಿ ನಗರದ ಮಹಿಳಾ ಸಮಾಜ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.

ತಂದೆ ಭಾಸ್ಕರ್​ ಶಾಸ್ತ್ರಿ ದೇವಾಲಯದಲ್ಲಿ ಅರ್ಚಕರಾಗಿದ್ದು, ಅಲ್ಲಿನ ಕಾಣಿಕೆ ಹಣದಲ್ಲಿ 3 ಜನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮಗಳ ಸಾಧನೆ ಕಂಡು ಖುಷಿಯಾಗಿದ್ದಾರೆ.

* ವಿಜ್ಞಾನ ವಿಭಾಗದಲ್ಲಿ ಆರ್​.ಸಿರಿ ಜಿಲ್ಲೆ ಟಾಪರ್ ​

ವಿಜ್ಞಾನ ವಿಭಾಗದಲ್ಲಿ ಎಸ್​ಡಿಸಿ ಕಾಲೇಜಿನ ಕಾಲೇಜಿನ ಆರ್​.ಸಿರಿ 590 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರ್ಯಾಂಕ್​ ಹಾಗೂ ಜಿಲ್ಲೆಗೆ ಟಾಫರ್​ ಆಗಿ ಹೊರಹೊಮ್ಮಿದ್ದಾರೆ. ತಂದೆ ಎಂವಿಎಂ ರಾಜು ಸ್ವಂತ ಉದ್ಯೋಗ ಹೊಂದಿದ್ದು, ತಾಯಿ ಕೆ.ಎನ್​.ವನಿತಾ ಗೃಹಿಣಿ. ವೈದ್ಯಳಾಗುವ ಇಂತಿತ ವ್ಯಕ್ತಪಡಿಸಿದ ವಿದ್ಯಾರ್ಥಿನಿಯ ಸಾಧನೆ ಕುರಿತು ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಉಷಾ ಗಂಗಾಧರ್​, ಪ್ರಾಂಶುಪಾಲ ಡಾ.ಶಿವರಾಂ ಎನ್​.ಪಾಟೀಲ್​ ಸಂತಸ ಹಂಚಿಕೊಂಡರು.

* ಧೈರ್ಯಲಕ್ಷಿ$್ಮಗೆ 575 ಅಂಕ

ಬಾಲಕಿಯರ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿ ತಂದೆ ಪೊಲೀಸ್​ ಪೇದೆ ಆನಂದಮೂರ್ತಿ ಮತ್ತು ಭಾರತಿ ಪುತ್ರಿ ಧೈರ್ಯಲಕ್ಷಿ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 600 ಅಂಕಗಳಿಗೆ 575 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಪ್ರಾಂಶುಪಾಲ ಬಾಲಕೃಷ್ಣ ಮತ್ತು ಉಪನ್ಯಾಸಕರು ವಿದ್ಯಾರ್ಥಿನಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಕಳೆದ ವರ್ಷವೂ ಕಲಾ ವಿಭಾಗದಲ್ಲಿ ಜಿಲ್ಲೆಗೆ ಕಾಲೇಜಿನ ವಿದ್ಯಾರ್ಥಿನಿಯೇ ಟಾಫರ್​ ಆಗಿದ್ದರು ಎಂದು ಸ್ಮರಿಸಿದರು.

* ಬಾಲಕಿಯರೇ ಮೈಲುಗೈ

ಒಟ್ಟಾರೆ ಫಲಿತಾಂಶದಲ್ಲೂ ಹೊಸ ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಸೇರಿದಂತೆ ಪರೀಕ್ಷೆ ಬರೆದ 7,852 ಬಾಲಕಿಯರಲ್ಲಿ 5,641 ಮಂದಿ ತೇರ್ಗಡೆಯಾಗಿ ಶೇ.71.84 ಫಲಿತಾಂಶ ಬಂದಿದೆ. ಇದೇ ರೀತಿ ಬಾಲಕರು 6,635 ಮಂದಿ ಪರೀಕ್ಷೆ ಬರೆದಿದ್ದು 4,136 ಮಂದಿ ಉತ್ತೀರ್ಣರಾಗಿ ಶೇ.62,34 ಫಲಿತಾಂಶ ಪಡೆಯುವ ಮೂಲಕ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

* ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಉತ್ತಮ

ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳೇ ಉತ್ತಮ ಸಾಧನೆ ಮಾಡಿದ್ದು, ನಗರ ಪ್ರದೇಶದಲ್ಲಿ ಪರೀಕ್ಷೆ ಬರೆದ 10,394 ಮಂದಿ ಪೈಕಿ 7,496 ಮಂದಿ ಉತ್ತೀರ್ಣರಾಗಿ ಶೇ.72.12 ಫಲಿತಾಂಶ ಬಂದಿದ್ದರೆ, ಗ್ರಾಮೀಣ ಭಾಗದಲ್ಲಿ 2,877 ಮಂದಿ ಪರೀಕ್ಷೆ ಬರೆದಿದ್ದು, 2,119 ಮಂದಿ ಉತ್ತೀರ್ಣರಾಗುವ ಮೂಲಕ ಶೇ.73.65 ಫಲಿತಾಂಶ ಲಭ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net