video/ ಪಿಎಸ್​ಐಗೆ ಹಾಲಿನ ಅಭಿಷೇಕ... ವಿಡಿಯೋ ವೈರಲ್​

psi milk
Published on

ಕಲಬುರಗಿ: ಕರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಪಿಎಸ್ಐ ಬರ್ತ್​ ಡೇ ಅನ್ನು ಅದ್ದೂರಿಯಾಗಿ ಆಚರಿಸಿ ಹಾಲಿನ ಅಭಿಷೇಕ ಮಾಡಿರುವ ವಿಡಿಯೋ ವೈರಲ್​ ಆಗಿದೆ.

ಜೇವರ್ಗಿ ತಾಲೂಕಿನ ನೆಲೋಗಿ ಠಾಣೆಯ ಪಿಎಸ್​ಐ ಮಲ್ಲಣ್ಣ ಯಲಗೋಡ ಅವರ ಹುಟ್ಟು ಹಬ್ಬವನ್ನು ಜೂ.13ರಂದು ಅವರ ಅಭಿಮಾನಿಗಳು ಠಾಣಾ ವ್ಯಾಪ್ತಿಯ ಹಲವೆಡೆ ಆಚರಿಸಿದ್ದಾರೆ.

ಸಾಮಾಜಿಕ ಅಂತರ ಮರೆತು, ಮಾಸ್ಕ್ ಇಲ್ಲದೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿರುವ ಅಭಿಮಾನಿಗಳು ಮಲ್ಲಣ್ಣ ಯಲಗೋಡ ಅವರಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ವಿವಿಧೆಡೆ ಹಮ್ಮಿಕೊಂಡಿದ್ದ ಬರ್ತ್​ ಡೇ ಕಾರ್ಯಕ್ರಮದಲ್ಲಿ ಪಿಎಸ್​ಐ ಭಾಗಿಯಾಗಿದ್ದರು.

ಇದನ್ನೂ ನೋಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net