ಪಿಎಸ್‌ಐ ಪರೀಕ್ಷೆ: ಬಿಜೆಪಿ ನಿಯೋಗಕ್ಕೆ ಗೃಹ ಸಚಿವರ ಭರವಸೆ

BJP delegation
Published on

ಬೆಂಗಳೂರು: ಪಿಎಸ್‌ಐ ಪರೀಕ್ಷೆ ಮುಂದೂಡುವ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜತೆಗೆ ಚರ್ಚಿಸಿ ತೀರ್ಮಾನಿಸುವೆ ಎಂದು ಬಿಜೆಪಿ ನಿಯೋಗಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

ಮಾಜಿ ಸಚಿವ ಡಾ.ಸಿ.ಎನ್.ಆಶ್ವತ್ಥ ನಾರಾಯಣ, ಶಾಸಕ ಧೀರಜ್ ಮುನಿರಾಜು ನೇತೃತ್ವದ ನಿಯೋಗ ಮಂಗಳವಾರ ಭೇಟಿ ಮಾಡಿ, ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ಸೆ.22ರಂದು ನಿಗದಿತ ಪರೀಕ್ಷೆ ಮುಂದೂಡಲು ಸಚಿವರಿಗೆ ಕೋರಿದರು.

ನಂತರ ಸುದ್ದಿಗಾರರಿಗೆ ಸಿ.ಎನ್.ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿ, ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಸೆ.22ರಂದು ವರ್ಷದ ಹಿಂದೆಯೇ ನಿಗದಿಯಾಗಿದೆ. ಅದೇ ದಿನ ಪಿಎಸ್‌ಐ ಪರೀಕ್ಷೆ ನಿಗದಿಯಿಂದ ಅನೇಕ ಅಭ್ಯರ್ಥಿಗಳಿಗೆ ಸಂಕಷ್ಟ ಎದುರಾಗಿದೆ ಎಂದರು.

ಪಿಎಸ್‌ಐ 402 ಹುದ್ದೆಗಳ ಪೈಕಿ 102ಕ್ಕೂ ಹೆಚ್ಚು ಅಭ್ಯರ್ಥಿಗಳ ಯುಪಿಎಸ್‌ಸಿ ಮುಖ್ಯ ಪರೀಕ್ಷೆಗೆ ಅರ್ಹರಾಗಿದ್ದಾರೆ. ಮಹತ್ವದ ಪರೀಕ್ಷೆಗೆ ಅರ್ಹರಾದವರು ಪಿಎಸ್‌ಐ ಪರೀಕ್ಷೆಯಲ್ಲಿ ನೂರಕ್ಕೆ ನೂರು ತೇರ್ಗಡೆಯಾಗಲಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಉದ್ಯೋಗಾಕಾಂಕ್ಷಿಗಳು ಕಷ್ಟಕ್ಕೆ ಸಿಲುಕಿದ್ದು, ಸಮಸ್ಯೆ ಆಲಿಸಿರುವ ಸಚಿವರು ನ್ಯಾಯಬದ್ಧ ಕೋರಿಕೆ ಈಡೇರಿಸುವ ವಿಶ್ವಾಸವಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net