ಜೈಲುಗಳೇ ಸ್ಲೀಪರ್​ಸೆಲ್?; ಶಂಕಿತ ಭಯೋತ್ಪಾಕದರ ಸಂಪರ್ಕಕ್ಕೆ ಸಾಮಾನ್ಯ ಕೈದಿಗಳು

central jail
Published on

ಬೆಂಗಳೂರು: ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಕಾರಾಗೃಹ ಸೇರುವ ಕೈದಿಗಳಿಗೆ ಜೈಲು ಮನ ಪರಿವರ್ತನೆ ಕೇಂದ್ರಗಳಾಗಬೇಕು. ಆದರೆ, ಕೆಲವು ಜೈಲುಗಳು ಸಮಾಜಘಾತುಕ ಶಕ್ತಿಗಳಿಗೆ ತರಬೇತಿ ಕೇಂದ್ರಗಳಾಗುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಜೈಲುಗಳಲ್ಲಿ ಸಾಮರ್ಥ್ಯ್ಕತ ಹೆಚ್ಚು ಕೈದಿಗಳಿರುವುದರಿಂದ ಜೈಲಧಿಕಾರಿಗಳು ನಿಗಾ ವಹಿಸಲು ಮತ್ತು ನಿಯಂತ್ರಣ ಮಾಡಲು ವಿಫಲರಾಗಿ ಅಕ್ರಮ ಚಟá-ವಟಿಕೆಗಳಿಗೆ ಇದು ಆಗರವಾಗಿದೆ. ಕೆಲ ಜೈಲುಗಳಲ್ಲಿ ಅಧಿಕಾರಿಗಳೇ ಅಕ್ರಮಗಳಲ್ಲಿ ಭಾಗಿಯಾಗಿರುವುದು ಇನ್ನಷ್ಟು ಸಮಸ್ಯೆ ತಂದಿಟ್ಟಿದೆ. ರಾಜ್ಯದಲ್ಲಿ 9 ಕೇಂದ್ರ ಕಾರಾಗೃಹ, 21 ಜಿಲ್ಲಾ ಕಾರಾಗೃಹ, 23 ತಾಲೂಕು ಉಪ ಕಾರಾಗೃಹ ಮತ್ತು 1 ಬಯಲು ಕಾರಾಗೃಹ ಸೇರಿ ಒಟ್ಟು 54 ಜೈಲುಗಳು ಕಾರ್ಯ ನಿರ್ವಹಿಸುತ್ತಿವೆ.

ಈ ಕಾರಾಗೃಹಗಳಲ್ಲಿ 14,237 ಬಂದಿಗಳಿಗೆ ಸ್ಥಳಾವಕಾಶವಿದೆ. ಪ್ರಸ್ತುತ 16,053 ಬಂದಿಗಳು ಇದ್ದಾರೆ. ಪರಿಣಾಮ ಅಪಾಯಕಾರಿ ಕೈದಿಗಳನ್ನು ಮತ್ತು ಸಾಮಾನ್ಯ ಕೈದಿಗಳನ್ನು ಪ್ರತ್ಯೇಕ ಬ್ಯಾರಕ್​ಗಳಲ್ಲಿ ಇಡಲು ಸಾಧ್ಯವಾಗುತ್ತಿಲ್ಲ. ಅವರ ಮೇಲೆ ನಿಗಾ ಇಡುವ ಕೆಲಸಗಳೂ ಆಗುತ್ತಿಲ್ಲ.

ಪ್ರತಿಫಲವಾಗಿ ಶಂಕಿತ ಉಗ್ರರೊಂದಿಗೆ ಸಾಮಾನ್ಯ ಕೈದಿಗಳ ಸಂಪರ್ಕ ಮತ್ತು ಭೇಟಿ ಆಗುವಂತಹ ಸನ್ನಿವೇಶ ಕಾರಾಗೃಹಗಳಲ್ಲೇ ಸೃಷ್ಟಿಯಾಗುತ್ತಿದೆ. ಎಲ್ಲ ಕೈದಿಗಳು ಒಂದೆಡೆ ಊಟ, ಉಪಾಹಾರ, ಇತರ ಚಟುವಟಿಕೆ ನಡೆಸುತ್ತಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿರುವ 2008ರ ಬೆಂಗಳೂರು ಸರಣಿ ಬಾಂಬ್ ಸ್ಪೋಟದ ಸಂಚುಕೋರ ಟಿ. ನಾಸೀರ್ ನ್ಯಾಯಾಂಗ ಬಂಧನಕ್ಕೆ ಬಂದಿದ್ದ ಆರು ಮುಸ್ಲಿಂ ಯುವಕರಿಗೆ ಉಗ್ರವಾದ ಬೋಧನೆ ಮಾಡಿ ಬ್ರೖೆನ್​ವಾಷ್ ಮಾಡಿರುವುದಕ್ಕೆ ಜೈಲುಗಳ ಇಕ್ಕಟ್ಟಿನ ವಾತಾವರಣ ನೆರವಾಗುತ್ತಿದೆ.

ಆಮೆಗತಿಯಲ್ಲಿ ಯೋಜನೆ: ರಾಜ್ಯದಲ್ಲಿ 6 ಹೊಸ ಕಾರಾಗೃಹ ನಿರ್ವಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಯೋಜನೆ ಆಮೆಗತಿಯಲ್ಲಿ ನಡೆಯುತ್ತಿದೆ. ಮಂಗಳೂರು, ವಿಜಯಪುರ, ಬೀದರ್, ಬೆಂಗಳೂರಿನಲ್ಲಿ ತಲಾ 1 ಸಾವಿರ ಬಂದಿಗಳ ಸಾಮರ್ಥ್ಯದ ಬ್ಯಾರಕ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದಲ್ಲದೆ, ಅರಸೀಕೆರೆ ತಾಲೂಕು ಜೈಲಿನಲ್ಲಿ 50, ವಿಜಯಪೇಟೆ ತಾಲೂಕಿನಲ್ಲಿ ಉಪ ಕಾರಾಗೃಹದಲ್ಲಿ 80 ಸಾಮರ್ಥ್ಯ ಜೈಲು ನಿರ್ಮಾಣ ನಡೆಯುತ್ತಿದೆ. ಇದರಿಂದ ಒಟ್ಟಾರೆ 4,130 ಬಂದಿಗಳಿಗೆ ಸ್ಥಳಾವಕಾಶ ದೊರೆಯಲಿದೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರರ ಸಂಪರ್ಕ
ಕೊಲೆ ಕೇಸಿನಲ್ಲಿ ಬಂಧನಕ್ಕೆ ಒಳಗಾಗಿದ್ದ 20 ಆರೋಪಿತರ ಪೈಕಿ 6 ಮಂದಿ ಲಷ್ಕರ್-ಇ-ತೊಯ್ಬಾ (ಎಲ್​ಇಟಿ) ಸಂಪರ್ಕ ಸಾಧಿಸಿದ್ದರು. ಇವರೆಲ್ಲರಿಗೂ 2009ರಿಂದ ಜೈಲಿನಲ್ಲಿರುವ ಕೇರಳ ಮೂಲದ ನಟೋರಿಯಸ್ ಎಲ್​ಇಟಿ ಶಂಕಿತ ಉಗ್ರ ಟಿ.ನಾಸೀರ್ ಮೂಲ ಪ್ರೇರಕನಾಗಿದ್ದಾನೆ. ಸ್ಮಾರ್ಟ್ ಫೋನ್ ಬಳಸಿಕೊಂಡು ವಾಟ್ಸ್ ಆಪ್ ಕರೆಗಳನ್ನು ಮಾಡಿ ತಮ್ಮ ಸಹಚರರಿಗೆ ಬೇಕಾದ ಶಸ್ತ್ರಾಸ್ತ್ರ, ಹಣ, ಸಲಕರಣೆಗಳ ಪೂರೈಕೆ ನಡೆಯುತ್ತಿದೆ. ಇದರಲ್ಲಿ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರ ಇರುವುದು ಸಾಕಷ್ಟು ಬಾರಿ ಬೆಳಕಿಗೆ ಬರುತ್ತಿವೆ. ಬೆಳಗಾವಿಯ ಹಿಂಡಲಗ ಜೈಲಿನಿಂದ ಉಗ್ರನೊಬ್ಬ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಫೋನ್​ವುೂಲಕ ಬೆದರಿಕೆ ಹಾಕಿದ್ದ ಪ್ರಕರಣವಂತೂ ಗಂಭೀರ ಸ್ವರೂಪದ್ದು. ಇಂಥ ಹಿನ್ನೆಲೆಯಲ್ಲಿ ಕಾರಾಗೃಹಗಳಿಗೆ ಮೂಲಸೌಕರ್ಯ ಒದಗಿಸುವ ಜತೆಗೆ ಪ್ರತಿ ಕೈದಿಗಳ ಮೇಲೆ ನಿಗಾವಹಿಸುವಂತಹ ವ್ಯವಸ್ಥೆ ಕೂಡ ಬರಬೇಕಾಗಿದೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net