ಕೊಂಡವಾಡೆಯಲ್ಲಿ ಜಾನುವಾರುಗಳಿಗೆ ಆಶ್ರಯ ಕೊಡಿ

sirsi MANAVI
Published on

ಶಿರಸಿ: ನಗರಸಭೆ ಲಕ್ಷಾಂತರ ರೂ. ವ್ಯಯಿಸಿ ಕೊಂಡವಾಡೆ ನಿರ್ವಿುಸಿದ್ದರೂ ನಗರದೆಲ್ಲೆಡೆ ಬೀದಿ ಹಸುಗಳು ಸಂಚರಿಸುತ್ತಿವೆ. ಇದರಿಂದಾಗಿ ರಾತ್ರಿ ವೇಳೆ ಆಕಳು ಕಳ್ಳರಿಗೂ ಸುಲಭವಾಗಿ ಸಿಗುವಂತಾಗಿದೆ. ತಕ್ಷಣವೇ ಕೊಂಡವಾಡೆ ರಿಪೇರಿ ಮಾಡಿಸಿ ಬಿಡಾಡಿ ದನಗಳನ್ನು ಇಲ್ಲಿ ಕಟ್ಟಿಹಾಕಲು ಕ್ರಮ ಕೈಗೊಳ್ಳಬೇಕು ಎಂದು ಹಿಂದುಪರ ಸಂಘಟನೆಗಳು ನಗರಸಭೆಗೆ ತೆರಳಿ ಪೌರಾಯುಕ್ತರಲ್ಲಿ ಗುರುವಾರ ಆಗ್ರಹಿಸಿದ್ದಾರೆ.

ನಗರಸಭೆಯು ಕೊಂಡವಾಡೆ ನಿರ್ವಹಣೆಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ ಕಾರ್ಯಕರ್ತರು, ನಿರ್ವಹಣೆಗೆ ಸೂಕ್ತ ಹಣ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. ನಗರ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳ ನಿಯಂತ್ರಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತದೆ. ಹಿಂದುಗಳ ಪವಿತ್ರ ದೇವತೆ ಗೋ ಮಾತೆಗೆ ಆಶ್ರಯ ನೀಡಲು ನಗರಸಭೆಯಿಂದ ಸಾಧ್ಯವಿಲ್ಲವೇ? ಬಹುತೇಕ ಜಾನುವಾರುಗಳು ರಸ್ತೆ ಮೇಲೆ ಇರುತ್ತವೆ. ವಾಹನ ಅಪಘಾತದಲ್ಲಿ ಗಾಯಗೊಂಡ ಜಾನುವಾರುಗಳಿಗೆ ಕೊಂಡವಾಡೆಯಲ್ಲಿ ಆಶ್ರಯ ಸಿಗುತ್ತಿಲ್ಲ. ಅಗತ್ಯವಿರುವ ಮೇವು ದಾಸ್ತಾನಿಲ್ಲ. ನಗರಸಭೆಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಆದಷ್ಟು ಬೇಗ ಕೊಂಡವಾಡೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ಹಿಂದು ಜಾಗರಣ ವೇದಿಕೆಯ ಹರೀಶ ರ್ಕ ಮಾತನಾಡಿ, ಹಿಂದುಗಳ ಪವಿತ್ರ ಗೋ ಮಾತೆಯ ಕಳ್ಳತನ ನಡೆಯುತ್ತಿದೆ. ಅದನ್ನು ತಡೆಯಲು ಪೊಲೀಸ್ ಇಲಾಖೆ ವಿಫಲವಾಗಿದೆ. ಬಿಡಾಡಿ ದನಗಳಿಗೆ ಕೊಂಡವಾಡೆಯಲ್ಲಿ ಆಶ್ರಯ ನೀಡಲು ನಗರಸಭೆಯು ಶೀಘ್ರ ಕ್ರಮ ಕೈಗೊಳ್ಳಬೇಕು. ಮಂಗಳವಾರದೊಳಗಡೆ ಶಿರಸಿ ನಗರ ವ್ಯಾಪ್ತಿಯಲ್ಲಿರುವ ಬಿಡಾಡಿ ದನಗಳನ್ನು ಹಿಡಿದು ಕೊಂಡವಾಡೆಯಲ್ಲಿ ಆಶ್ರಯ ನೀಡಬೇಕು. ಇಲ್ಲವಾದಲ್ಲಿ ಬುಧವಾರ ಎಲ್ಲ ಜಾನುವಾರುಗಳನ್ನು ನಗರಸಭೆಯ ಆವಾರಕ್ಕೆ ತಂದು ಕಟ್ಟಿಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಪ್ರಭಾರಿ ಪೌರಾಯುಕ್ತ ಶಿವರಾಜ ಪ್ರತಿಕ್ರಿಯಿಸಿ, ಕೊಂಡವಾಡೆಯನ್ನು ನಗರಸಭೆಯಿಂದ ನಿರ್ವಹಣೆ ಮಾಡುವುದು ಕಷ್ಟಸಾಧ್ಯ. ಸ್ವಯಂ ಸೇವಾ ಸಂಸ್ಥೆಗಳು ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡರೆ ಒಂದು ಜಾನುವಾರಿಗೆ ಇಂತಿಷ್ಟು ಹಣ ಎಂದು ನಗರಸಭೆಯಿಂದ ಅವರಿಗೆ ನೀಡಲಾಗುತ್ತದೆ. ಅಧ್ಯಕ್ಷರು ಹಾಗೂ ಸದಸ್ಯರ ಜತೆ ರ್ಚಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.

ಕೃಷ್ಣಮೂರ್ತಿ ಭಟ್ಟ, ಹರ್ಷ ನಾಯ್ಕ, ಮಹೇಶ ನಾಯ್ಕ, ಆದರ್ಶ, ರವಿ ಗೌಳಿ, ಅಮಿತ ಶೇಟ್, ಸತೀಶ ನಾಯ್ಕ, ಅಕ್ಷಯ ಮೊಗೇರ, ರಾಘವೇಂದ್ರ ಆಚಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net