ಟೈಲರ್‌ಗಳಿಗೆ ಸರ್ಕಾರದ ಸೌಲಭ್ಯ ಕಲ್ಪಿಸಿ

tailor
ಭದ್ರಾವತಿಯಲ್ಲಿ ಆಯೋಜಿಸಿದ್ದ ಟೈಲರ್ಸ್‌ ವೃತ್ತಿ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಕ್ರಮವನ್ನು ಭಾವಸಾರ ಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷ ರಾಘವೇಂದ್ರ ರಾವ್ ಉದ್ಘಾಟಿಸಿದರು. ಕೆ.ಸುಂದರ್ ಬಾಬು, ಎ.ಎಸ್.ಸುಂದರ್, ಎನ್.ಕುಮಾರ್ ಇತರರಿದ್ದರು.
Published on

ಭದ್ರಾವತಿ: ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಟೈಲರ್ ವೃತ್ತಿ ಮಾಡುವವರಿಗೂ ಒದಗಿಸಬೇಕೆಂದು ಕರ್ನಾಟಕ ಸ್ಟೇಟ್ ಕನ್ಟ್ರ ಕ್ಷನ್ ವರ್ಕರ್ಸ್‌ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಕೆ.ಸುಂದರ್ ಬಾಬು ಹೇಳಿದರು.

ಹಳೇನಗರದ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಟೈಲರ್ಸ್‌ ವೃತ್ತಿ ಮಾಡುವವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಸಂಘಟನೆಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ, ಪ್ರತಿವರ್ಷ ಸಂಘದ ಸದಸ್ಯತ್ವವನ್ನು ಅಗತ್ಯ ದಾಖಲೆಗಳೊಂದಿಗೆ ನವೀಕರಣಗೊಳಿಸುವುದು ಅಷ್ಟೇ ಮುಖ್ಯ. ಎಲ್ಲರೂ ಸ್ಮಾರ್ಟ್‌ಕಾರ್ಡ್ ಪಡೆದು ಸಂಘಟನೆ ಬಲಪಡಿಸಿ ಎಂದರು.

ಮುಖಂಡ ಎ.ಎಸ್.ಸುಂದರ್ ಮಾತನಾಡಿ, ಕರೊನಾ ದಿನಗಳಿಂದಲೂ ಟೈಲರ್ ವೃತ್ತಿ ಮಾಡುವವರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಸಂಘದಿಂದ ಆಹಾರ ಕಿಟ್ ವಿತರಣೆ ಹಾಗೂ ವ್ಯಾಕ್ಸಿನೇಷನ್ ಸಹ ಮಾಡಿಸಿದ್ದೇವೆ. ಸಂಘದ ನೋಂದಾಯಿತ ಸದಸ್ಯರಿಗೆ ಈಗಾಗಲೆ ಈ ಶ್ರಮ ಕಾರ್ಡ್ ಸಹ ವಿತರಿಸಲಾಗಿದೆ. ತಾಲೂಕಿನಲ್ಲಿ ವೃತ್ತಿ ಮಾಡುವ ಎಲ್ಲರೂ ಸದಸ್ಯತ್ವ ಪಡೆದುಕೊಳ್ಳುವಂತೆ ಮನವಿ ಮಾಡಿದರು.ಭಾವಸಾರ ಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷ ರಾಘವೇಂದ್ರ ರಾವ್, ಕರ್ನಾಟಕ ಸ್ಟೇಟ್ ಕನ್ಟ್ರ ಕ್ಷನ್ ವರ್ಕರ್ಸ್‌ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಎನ್.ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net