ಪಾದಚಾರಿ ಮಾರ್ಗ ನಿರ್ಮಿಸಲು ಅನುದಾನ ನೀಡಿ

Published on

ಚಿಕ್ಕಬಳ್ಳಾಪುರ: ನಗರಸಭೆಯ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಲು ಅಗತ್ಯ ಅನುದಾನ ಮಂಜೂರು ಮಾಡಲು ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್​.ಆನಂದ್​ ರೆಡ್ಡಿ ನೇತೃತ್ವದ ಸದಸ್ಯರ ತಂಡವು ನಗರ ಭೂ ಸಾರಿಗೆ ನಿರ್ದೇಶನಾಲಯವನ್ನು ಒತ್ತಾಯಿಸಿದೆ.ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದಲ್ಲಿ ಜನ ಹಾಗೂ ವಾಹನ ಸಂಚಾರ ಸದಾ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದೇ ವೇಳೆ ಸುಗಮ ಸಂಚಾರಕ್ಕೆ ಬಿ.ಬಿ.ರಸ್ತೆಯ ರೈಲ್ವೆ ಗೇಟ್​ನಿಂದ ಶನಿಮಹಾತ್ಮ ಸ್ವಾಮಿ ದೇವಾಲಯ, ಬಲಮುರಿ ವೃತ್ತದಿಂದ ರೈಲ್ವೆ ಸ್ಟೇಷನ್​ ವರೆಗೆ, ಎಂ.ಜಿ.ರಸ್ತೆಯಿಂದ ಜಿಲ್ಲಾಸ್ಪತ್ರೆಯವರೆಗೆ ಎರಡು ಕಡೆ ಪಾದಚಾರಿ ಮಾರ್ಗದ ರಸ್ತೆಯನ್ನು ನಿರ್ಮಿಸಲು ಮನವಿ ಮಾಡಿದೆ.ನಿಯೋಗದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯಾಚಾರಿ, ನಗರಸಭೆ ಸದಸ್ಯರಾದ ಎ.ಬಿ.ಮಂಜುನಾಥಚಾರಿ, ಟಿ.ವಿ.ರುಕ್ಮಿಣಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net