ಸಮರ್ಪಕ ಬಸ್‌ಸೌಲಭ್ಯ ಕಲ್ಪಿಸಿ

rajahamsa_bus_services
Published on

ಮೂಡಿಗೆರೆ: ಪ್ರತಿದಿನ ಸಂಜೆ 4ರಿಂದ 7ರವರೆಗೆ ಚಿಕ್ಕಮಗಳೂರಿನಿಂದ ಮೂಡಿಗೆರೆಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರವಿಲ್ಲದೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಅಲ್ಲದೆ ಕನ್ಯೆಹಳ್ಳಿ ಗ್ರಾಮಕ್ಕೆ ಪ್ರತಿದಿನ ಮೂಡಿಗೆರೆಯಿಂದ ಸಂಚರಿಸುವ ಬಸ್‌ಕೂಡ ವಾರದಲ್ಲಿ ಒಂದೆರಡು ದಿನ ಸಂಚರಿಸುತ್ತಿಲ್ಲ . ಇದರಿಂದ ವಿದ್ಯಾರ್ಥಿಗಳು, ಗ್ರಾಮಸ್ಥರು ಬೆಟ್ಟದಮನೆ ಗ್ರಾಮದ ಕೈಮರ ಎಂಬಲ್ಲಿಗೆ 4 ಕಿ.ಮೀ.ನಡೆದುಕೊಂಡು ಬಂದು ಅಲ್ಲಿಂದ ಬಸ್‌ಹಿಡಿದು ಮೂಡಿಗೆರೆವರೆಗೆ ಸಂಚರಿಸಬೇಕು. ಅಲ್ಲದೆ ಸಂಜೆ ಬಸ್‌ಸೌಲಭ್ಯವ್ಲಿದೆ ತೊಂದರೆ ಅನುಭವಿಸುವಂತಾಗಿದೆ.
ಮೂಡಿಗೆರೆ ಸಾರಿಗೆ ಘಟಕದಲ್ಲಿ ಸುಸ್ಥಿತಿಯ ಬಸ್‌ಗಳು ಇಲ್ಲ. ಗುಜರಿ ಬಸ್‌ಗಳನ್ನು ಓಡಿಸುತ್ತಿರುವುದರಿಂದ ಅವುಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತವೆ. ಇದರಿಂದ ಬಸ್ ಸಂಚಾರದಲ್ಲಿ ವ್ಯತ್ಯಾಯವಾಗುತ್ತಿದೆ. ಕನ್ನೆಹಳ್ಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಒದಗಿಸಬೇಕು. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಮರ್ಪಕವಾಗಿ ಬಸ್ ಸಂಚರಿಸುವಂತೆ ನೋಡಿಕೊಳ್ಳಬೇಕು. ಚಿಕ್ಕಮಗಳೂರಿನಿಂದ ಮೂಡಿಗೆರೆಗೆ ಸಂಜೆ 4ರಿಂದ 7 ಗಂಟೆವರೆಗೆ ಕನಿಷ್ಠ 4 ಬಸ್‌ಗಳ ಸಂಚಾರ ಆರಂಭಿಸಬೇಕು ಎಂದು ಗ್ರಾಮಸ್ಥೆ ಸರಿತಾ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net