ವಿಶ್ವಕರ್ಮ ಭವನಕ್ಕೆ ನಿವೇಶನ ಒದಗಿಸಿ

03M.D.R.2
ವಿಶ್ವಕರ್ಮ ಸಮಾಜದ ತಾಲೂಕು ಘಟಕದಿಂದ ಪಟ್ಟಣದ ಸಮಾಜದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿಯಲ್ಲಿ ಶ್ರೀನಿವಾಸ್ ಸಿಂಹ ಮಾತನಾಡಿದರು. ಆನಂದಾಚಾರಿ, ಪವಿತ್ರಾಆಚಾರ್, ಬಸವಾಚಾರಿ, ಶಿವಕುಮಾರ್, ಮಂಟೇಸ್ವಾಮಿ, ಉಮಾಶಂಕರ್, ಶಶಿಕುಮಾರ್ ಇದ್ದರು.
Published on

ರಾಜ್ಯಾಧ್ಯಕ್ಷ ಮಳವಳ್ಳಿ ಶ್ರೀನಿವಾಸ್ ಸಿಂಹ ಒತ್ತಾಯ

ಮದ್ದೂರು : ವಿಶ್ವಕರ್ಮ ಸಮಾಜದ ತಾಲೂಕು ಘಟಕದಿಂದ ಪಟ್ಟಣದ ಸಮಾಜದ ಕಚೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಬುಧವಾರ ಆಚರಿಸಲಾಯಿತು.

ಜಕಣಾಚಾರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಸಮಾಜದ ರಾಜ್ಯಾಧ್ಯಕ್ಷ ಮಳವಳ್ಳಿ ಶ್ರೀನಿವಾಸ್ ಸಿಂಹ ಉದ್ಘಾಟಿಸಿದರು. ಎಲ್ಲರಲ್ಲಿ ಒಗ್ಗಟ್ಟಿದ್ದರೆ ಮಾತ್ರ ಸಮಾಜದ ಏಳಿಗೆ ಸಾಧ್ಯ. ಸರ್ಕಾರವು ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಬೇಕು, ಅಷ್ಟೇ ಅಲ್ಲದೇ ಪ್ರತಿ ತಾಲೂಕು ಕೇಂದ್ರದಲ್ಲಿ ವಿಶ್ವಕರ್ಮ ಜನಾಂಗದವರ ಅನುಕೂಲಕ್ಕಾಗಿ ಸಮುದಾಯ ಭವನದ ನಿರ್ಮಾಣಕ್ಕಾಗಿ ನಿವೇಶನವನ್ನು ಮಂಜೂರು ಮಾಡಬೇಕು ಎಂದು ಶ್ರೀನಿವಾಸ್ ಆಗ್ರಹಿಸಿದರು.

ಸಮಾಜದ ಜಿಲ್ಲಾಧ್ಯಕ್ಷ ತೈಲೂರು ಆನಂದಾಚಾರಿ ಮಾತನಾಡಿ, ತಾಲೂಕು ಆಡಳಿತವು ವಿಶ್ವಕರ್ಮ ಜಯಂತಿ ಸೇರಿದಂತೆ ಅಮರಶಿಲ್ಪಿ ಜಕಣಾಚಾರಿ ಅವರ ಜಯಂತಿಗಳನ್ನು ಆಚರಿಸುವ ವಿಷಯದಲ್ಲಿ ಸರಿಯಾದ ಕಾಳಜಿ ವಹಿಸುತ್ತಿಲ್ಲ. ಕಾಟಾಚಾರಕ್ಕೆ ಆಚರಣೆ ಮಾಡುತ್ತಿದ್ದಾರೆ. ಜಯಂತಿ ಆಚರಣೆಗೂ ಮುನ್ನ ನಡೆಯುವ ಪೂರ್ವಭಾವಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಪಾಲಿಸುವುದಿಲ್ಲ, ಅನುದಾನ ಕಡಿಮೆಯಿದೆ ಎಂದು ಬೇಕಾಬಿಟ್ಟಿ ಆಚರಣೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಸಮುದಾಯದ ಮುಖಂಡರನ್ನು ಸರಿಯಾಗಿ ಆಹ್ವಾನಿಸುವುದಿಲ್ಲ ಎಂದು ಆರೋಪಿಸಿದ ಅವರು, ಈ ಬಗ್ಗೆ ಜಿಲ್ಲಾಡಳಿತವು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಪವಿತ್ರಾ ಆಚಾರ್‌ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅಧ್ಯಕ್ಷ ಬಸವಾಚಾರಿ, ಮುಖಂಡರಾದ ಶಿವಕುಮಾರ್, ಮಂಟೇಸ್ವಾಮಿ, ಉಮಾಶಂಕರ್, ಶಶಿಕುಮಾರ್, ಮಹದೇವು, ವೀರಭದ್ರಾಚಾರ್, ತೊರೆಚಾಕನಹಳ್ಳಿ ಆನಂದ್, ನಾಗೇಶ್, ಗಣೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net