ಕೋವಿಡ್ ಕೇರ್​ ಸೆಂಟರ್​ನಲ್ಲಿ ಸೋಂಕಿತರಿಂದ ಪ್ರತಿಭಟನೆ

covidcare
Published on

ಚನ್ನಪಟ್ಟಣ : ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹೊನ್ನನಾಯಕನಹಳ್ಳಿ ಕೋವಿಡ್​ ಕೇರ್​ ಸೆಂಟರ್​​ನಲ್ಲಿ ಸೂಕ್ತ ವ್ಯವಸ್ಥೆ ಮತ್ತು ಚಿಕಿತ್ಸೆಗಾಗಿ ಕೋವಿಡ್​ ಸೋಂಕಿತರು ಪ್ರತಿಭಟನೆ ಆರಂಭಿಸಿದ್ದಾರೆ.

ಹೊನ್ನನಾಯಕನಹಳ್ಳಿ ಸೆಂಟರ್​​ನಲ್ಲಿ ಸೂಕ್ತ ಚಿಕಿತ್ಸೆ ಇಲ್ಲ. ಕುಡಿಯೋ ನೀರಿನ ವ್ಯವಸ್ಥೆ ಇಲ್ಲ ಎಂದು ಆರೋಪಿಸುತ್ತಿರುವ ಸೋಂಕಿತರು, ಪ್ರಮುಖವಾಗಿ ಸ್ವಚ್ಛತೆಯೇ ಇಲ್ಲ ಎಂದು ಗಲಾಟೆ ಶುರು ಮಾಡಿದ್ದಾರೆ. ಕೋವಿಡ್ ಸೆಂಟರ್ ಆವರಣದ ಒಳಗಡೆಯೇ ಬೆಳಗಿನ ಉಪಹಾರವನ್ನು ಸೇವಿಸದೆ ಪ್ರತಿಭಟನೆ ಮಾಡುತ್ತಿರುವ ಸೋಂಕಿತರು, ಸೆಂಟರ್​​ನ ಸಿಬ್ಬಂದಿಗಳು ಮತ್ತು ಮೇಲ್ವಿಚಾರಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

150 ಕ್ಕೂ ಹೆಚ್ಚು ಸೋಂಕಿತರಿರುವ ಕೇರ್ ಸೆಂಟರ್​​ನಲ್ಲಿ ಈ ಗಲಾಟೆ ನಡೆಯುತ್ತಿದೆ. ಪ್ರತಿಭಟನಾಕಾರರು ಸ್ಥಳಕ್ಕೆ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ಬರಲಿ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net