ಟೋಲ್ ತೆರವಿಗಾಗಿ ಪ್ರತಿಭಟನೆ 26ಕ್ಕೆ

protest pre meeting
ಶಿರಾಳಕೊಪ್ಪ ವಾಲ್ಮೀಕಿ ಭವನದಲ್ಲಿ ಟೋಲ್ ಗೇಟ್ ತೆರವು ಹೋರಾಟ ಸಮಿತಿ ಸಭೆ ನಡೆಯಿತು. ನವೀದ್, ಜಯಪ್ಪ ಗೌಡ, ಈರಣ್ಣ ಪ್ಯಾಟಿ, ಪುಟ್ಟನ ಗೌಡ, ರಾಜಣ್ಣ, ಮುತ್ತು ಗೌಡ, ಪರಮೇಶ್ವರಪ್ಪ, ರಟ್ಟಿಹಳ್ಳಿ ಲೋಕೇಶ್, ಗಂಗಾಧರ ಶೆಟ್ಟಿ ಇತರರಿದ್ದರು.
Published on

ಶಿರಾಳಕೊಪ್ಪ: ಟೋಲ್ ಗೇಟ್‌ಗಳನ್ನು ತೆರವುಗೊಳಿಸಲು ಒತ್ತಾಯಿಸಿ ಹೋರಾಟ ಸಮಿತಿ ಪದಾಧಿಕಾರಿಗಳು ಸೆ.26ರಂದು ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಭಾನುವಾರ ಹೋರಾಟ ಸಮಿತಿ ಅಧ್ಯಕ್ಷ ಶಿವರಾಜ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು. ಸೆ.9ರಂದು ಶಿಕಾರಿಪುರ ಶಾಸಕರಿಗೆ ಮನವಿ ಕೊಡಲು ತೀರ್ಮಾನಿಸಲಾಯಿತು.
ಸಮಿತಿ ಸಂಚಾಲಕ ವಿನಯ ಪಾಟೀಲ್ ಮಾತನಾಡಿ, ಕಳೆದ ತಿಂಗಳು 29ರಂದು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿತ್ತು. ಟೋಲ್ ತೆರವಿಗೆ 15 ದಿನಗಳ ಗಡುವು ನೀಡಲಾಗಿತ್ತು. ಆದರೆ ಅವರಿಂದ ಯಾವುದೇ ಉತ್ತರ ಬಾರದಿದ್ದರಿಂದ ಸೆ.26ರಂದು ಶಿಕಾರಿಪುರ ತಾಲೂಕಿನ ಕುಟ್ರಳ್ಳಿ ಬಳಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಟೋಲ್‌ಗೇಟ್ ಬಳಿ ಹೋರಾಟ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ವಕೀಲ ಶಿವರಾಜ್ ಮಾತನಾಡಿ, ಟೋಲ್‌ಗೇಟ್ ಹೋರಾಟ ಸಮಿತಿ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿದೆ. ಈ ಟೋಲ್ ಗಳು ಅನಧಿಕೃತ ಎಂದು ಹೇಳಿ ತೆರವುಗೊಳಿಸುವವರೆಗೆ ಹೋರಾಟ ನಡೆಸೋಣ. ಇದಕ್ಕಾಗಿ ಪ್ರತಿ ಹಳ್ಳಿಯಲ್ಲೂ ಸಮಿತಿ ಸದಸ್ಯರೊಡಗೂಡಿ ಜನರಿಗೆ ಅರಿವು ಮೂಡಿಸಿ, ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಪ್ರಯತ್ನ ಮಾಡೋಣ ಎಂದರು.
ಸಭೆಯಲ್ಲಿ ಟೋಲ್ ಸಮಿತಿ ಕಾರ್ಯದರ್ಶಿ ನವೀದ್, ಸದಸ್ಯ ಜಯಪ್ಪಗೌಡ, ರೈತ ಸಂಘದ ಈರಣ್ಣ ಪ್ಯಾಟಿ, ಪುಟ್ಟನಗೌಡ, ರಾಜಣ್ಣ, ಮುತ್ತು ಗೌಡ, ಶಿವ ಬ್ಯಾಂಕ್ ನಿರ್ದೇಶಕ ಪರಮೇಶ್ವರಪ್ಪ, ರಟ್ಟಿಹಳ್ಳಿ ಲೋಕೇಶ್, ಗಂಗಾಧರ ಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net