

ಬೇಲೂರು: ಉಚ್ಛ ನ್ಯಾಯಾಲಯದ ವಕೀಲ, ರಾಜ್ಯ ವಕೀಲ ಪರಿಷತ್ತಿನ ಮಾಜಿ ಅಧ್ಯಕ್ಷ ಸದಾಶಿವರೆಡ್ಡಿ ಮೇಲೆ ಹಲ್ಲೆ ಖಂಡಿಸಿ ವಕೀಲರ ಸಂಘದ ಪದಾಧಿಕಾರಿಗಳು ಪಟ್ಟಣ ಸಮೀಪದ ನ್ಯಾಯಾಲಯದ ಮುಂದೆ ಪ್ರತಿಭಟಿಸಿ, ಹಲ್ಲೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಸಿ.ಎಂ.ಪೃಥ್ವಿ ಮಾತನಾಡಿ, ಉಚ್ಛ ನ್ಯಾಯಾಲಯದ ವಕೀಲ, ರಾಜ್ಯ ವಕೀಲ ಪರಿಷತ್ತಿನ ಮಾಜಿ ಅಧ್ಯಕ್ಷ ಸದಾಶಿವರೆಡ್ಡಿ ಅವರ ಮೇಲೆ ಅಪರಿಚಿತರು ಅವರ ಕಚೇರಿಯಲ್ಲೇ ಭೀಕರವಾಗಿ ಹಲ್ಲೆ ನಡೆಸಿರುವುದನ್ನು ತಾಲೂಕು ವಕೀಲರ ಸಂಘ ಖಂಡಿಸುತ್ತದೆ. ರಾಜ್ಯ ಸರ್ಕಾರ ವಕೀಲರ ಹಿತರಕ್ಷಣೆ ಕಾಯ್ದೆ ಜಾರಿಗೆ ತಂದಿದ್ದರೂ ಈ ರೀತಿಯ ಹಲ್ಲೆ ಕಾನೂನು ಬಾಹಿರವಾಗಿದೆ. ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯದ ಕಲಾಪ ಭಹಿಷ್ಕರಿಸಿ ಪ್ರತಿಭಟಿಸುವ ಮೂಲಕ ಸರ್ಕಾರ ಮತ್ತು ರಾಜ್ಯಪಾಲರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದ್ದೇವೆ ಎಂದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ಹಿರಿಯ ವಕೀಲರಾದ ಚಂದ್ರೇಗೌಡ, ನಟರಾಜ್, ಮಂಜುನಾಥ್, ಚಂದ್ರು, ಜಿ,ಟಿ.ಪ್ರಕಾಶ್, ರತೀಶ್, ಗಿರೀಶ್, ಸುನೀಲ್, ರಿಚರ್ಡ್, ಪ್ರದೀಪ್, ರವಿಕುಮಾರ್, ಶ್ರೀಧರ್, ಸಿದ್ದೇಗೌಡ, ತ್ರಿವೇಣಿ ಸೇರಿದಂತೆ ಇತರರಿದ್ದರು.