

ಹುಮನಾಬಾದ್: ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆಗೆ ಪಟ್ಟಣದಲ್ಲಿ ಸ್ಥಳ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಶುಕ್ರವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಪ್ರತಿಭಟನೆ ನಡೆಯಿತು.
ಹಳೇ ತಹಸಿಲ್ ಕಚೇರಿಯಿಂದ ಡಾ.ಬಿ.ಆರ್. ಅಂಬೇಡ್ಕರ್, ಶಿವಚಂದ್ರಜೀ ವೃತ್ತದ ಮೂಲಕ ಹೊಸ ತಹಸಿಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಸಮಾಜದ ಪ್ರಮುಖ ಶಿವರಾಜ ಚೀನಕೇರಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ತಾಲೂಕು ಆಡಳಿತ ಹಾಗೂ ಸರ್ಕಾರ ವಾರದೊಳಗೆ ಸ್ಥಳ ಒದಗಿಸಬೇಕು. ಇಲ್ಲವಾದರೆ ಹೋರಾಟ ಚುರುಕುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಮುಖರಾದ ನಾರಾಯಣ ರಾಂಪುರೆ, ಅಶೋಕ ಚಳಕಾಪುರೆ, ಸಚಿನ್ ದಾಡಗಿ, ಆನಂದ ಖಂಡಗೊಂಡ, ಮಲ್ಲಿಕಾರ್ಜುನ ಮೋಳಕೇರಾ, ಪವನಗೊಂಡ ನಾಮದಾಪುರ, ವಿನಾಯಕ ಮಣಕೋಜಿ, ಉಮೇಶ ದಾಡಗಿ, ಅನೀಲ ದೊಡ್ಡಿ, ಪಂಡಿತ ಬಾವಗಿ, ಡಾ.ವೆಂಕಟ, ಶಿವರಾಜ ಕಲ್ಲಗೊಂಡ, ಮೋಹನಗೊಂಡ ನಾಮದಾಪುರ, ಮೋಹನ ಮೇತ್ರೆ, ಸಿದ್ದು ಮೋಳಕೇರಾ ಇತರರಿದ್ದರು. ನಂತರ ತಹಸೀಲ್ದಾರ್ ಅಂಜುಂ ತಬಸ್ಸುಮ್ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.